ಶಿಕ್ಷಕ ವೃತ್ತಿ ಘನತೆ ಕಾಪಾಡುವ – ಶಿಕ್ಷಕರ ಅಗತ್ಯವಿದೆ.

ಆಲಮೇಲ ಸ.06

ಶಿಕ್ಷಕ ವೃತ್ತಿ ಬಲು ದೊಡ್ಡದು, ಅದರ ಘನತೆಯನ್ನು ಕಾಪಾಡಿ ಕೊಳ್ಳುವವನೇ ನಿಜವಾದ ಶಿಕ್ಷಕ ಎಂದು ಡಾ, ರಮೇಶ ಕತ್ತಿ ಹೇಳಿದರು.ಅವರು ತಾಲ್ಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮೊಬೈಲ್ ಯುಗದಲ್ಲಿ ಪಠ್ಯಗಳು ಮಾಯಾವಾಗುತ್ತಿರುವುದು ಶೋಚನೀಯ ಸಂಗತಿ, ವಿದ್ಯಾರ್ಥಿಗಳಲ್ಲಿ ಅಧ್ಯಯನ ಶೀಲರಾಗಲು ಪುಸ್ತಕಗಳು ಸಹಾಯ ಮಾಡುತ್ತವೆ, ಮೊಬೈಲನಿಂದ ದೂರವಿದ್ದು ಪಠ್ಯ ಮತ್ತು ಸಾಂಸ್ಕೃತಿಕವಾಗಿ ತೊಡಗಿ ಕೊಳ್ಳಬೇಕು ಎಂದು ಕರೆ ನೀಡಿದರು.ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್ ಪಾಟೀಲ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ, ವೀರಭದ್ರ ಗೋಲಾ ಮಾತನಾಡಿ ‘ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಗಟ್ಟಿ ಗೊಳಿಸಲು ಆದರ್ಶತನ, ಪ್ರಾಮಾಣಿಕತೆಗಳು ಇಬ್ಬರಲ್ಲೂ ಬರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ಎಂ ಹರನಾಳ, ಪ್ರೊ. ಆರ್.ವೈ ಕಂಬಾರ, ಪ್ರೊ. ವಿ.ಎಸ್ ಶಹಾಪೂರ, ಡಾ, ಐ.ಜಿ ಕೋಣಶಿರಸಗಿ ಮಾತನಾಡಿದರು. ಸಂಸ್ಥೆಯ ಶಿಕ್ಷಕಿ ಆರ್.ವೈ ಚೌಗಲೆ ಮತ್ತು ಮಾಲಾಶ್ರೀ ಮಂದೇವಾಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿನೀಯರಾದ ಸಂಗೀತಾ ದುದ್ದಗಿ, ಜಯಶ್ರೀ ನಡುವಿನಮನಿ, ಯಶೋಧಾ ಮುಡೆ ಮಾತನಾಡಿದರು. ಗೌರಿ ಶಾಬಾದಿ, ತ್ರಿವೇಣಿ, ವಿದ್ಯಾಶ್ರೀ ಪ್ರಾರ್ಥಿಸಿದರು. ಪ್ರತಿಭಾ ದುದ್ದಗಿ ಸ್ವಾಗತಸಿದರು. ಐಶ್ವರ್ಯ ತಳವಾರ ನಿರೂಪಿಸಿದರು. ಶಾಂತಾಬಾಯಿ ದುದ್ದಗಿ ವಂದಿಸಿದರು.

ಬಾಕ್ಸ್ ಸುದ್ದಿ:-

ಆಲಮೇಲ ತಾಲ್ಲೂಕಿನ ಮೋರಟಗಿಯ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕರ‍್ಯಕ್ರಮವನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರೇವಣಸಿದ್ದಯ್ಯ. ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button