ಬಾಕ್ಸ್ ಆಫೀಸ್ 2022 ರ ಕಲೆಕ್ಷನ್ ನಲ್ಲಿ ಮೊದಲ ಸ್ಥಾನ ಅಲಂಕರಿಸಿದ ಸ್ಯಾಂಡಲ್ ವುಡ್..!

2022 ಇದು ಸ್ಯಾಂಡಲ್ ವುಡ್ ನ ವರ್ಷವೆಂತಲು ಕರೆದರೆ ತಪ್ಪಗಲಾರದು.

 

ನಾವು ಯಾವಾಗಲು ಬಾಲಿವುಡ್ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮೊದಲ ಸ್ಥಾನದಲ್ಲಿ ಇರುವುದನ್ನು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ ಈ ವರ್ಷ ಅಂದರೆ 2022 ಸ್ಯಾಂಡಲ್ ವುಡ್ ಆ ಲಿಸ್ಟ್ ಅನ್ನು ಬುಡ ಮೇಲು ಮಾಡಿದೆ ಬಾಲಿವುಡ್ ಅನ್ನು ಹಿಂದ್ದಿಕ್ಕಿ ಈ ವರ್ಷ ಮೊದಲ ಸ್ಥಾನದಲ್ಲಿ ಅತ್ಯಧಿಕ ಗಳಿಕೆ ಯನ್ನು ಕಂಡ ಸಿನಿಮಾ ಇಂಡಸ್ಟ್ರಿ ಯಾಗಿದೆ. 2022 ಭಾರತದ ಎಲ್ಲಾ ಚಲನಚಿತ್ರ ಉದ್ಯಮಗಳಿಗೆ ಉತ್ತಮವಾಗಿಲ್ಲ. ಅದರಲ್ಲೂ ಅತಿ ದೊಡ್ಡ ಇಂಡಸ್ಟ್ರಿ ಎಂದು ಕರೆಸಿಕೊಳ್ಳುವ ಬಾಲಿವುಡ್ ಅಂದರೆ ಹಿಂದಿ ಚಿತ್ರೋದ್ಯಮ. ಈ ಬಾರಿ ಎರಡು ಪ್ರಾದೇಶಿಕ ಚಿತ್ರೋದ್ಯಮಗಳಿಂದ ಸೋಲು ಕಂಡ ಬಾಲಿವುಡ್‌ ದೇಶದ ಟಾಪ್ 5 ಚಲನಚಿತ್ರೋದ್ಯಮಗಳಲ್ಲಿ ಮೂರನೇ ಸ್ಥಾನ ತಲುಪಿದೆ.

 ಟಾಪ್ 5  ಸ್ಥಾನದಲ್ಲಿರುವ ಸಿನಿಮಾ ಇಂಡಸ್ಟ್ರಿಗಳು .

✓.  ಕನ್ನಡ ಚಿತ್ರರಂಗ ಈ ವರ್ಷ ಮೊದಲ ಸ್ಥಾನದಲ್ಲಿದೆ. ಇಲ್ಲಿರುವ ಟಾಪ್ 5 ಚಿತ್ರಗಳು ವಿಶ್ವಾದ್ಯಂತ ಸುಮಾರು 2010 ಕೋಟಿ ಕಲೆಕ್ಷನ್ ಮಾಡಿವೆ.

ಚಲನಚಿತ್ರ: ಕೆಜಿಎಫ್ ಅಧ್ಯಾಯ 2, ಸಂಗ್ರಹ: 1278 ಕೋಟಿ ರೂ

ಚಿತ್ರ: ಕಾಂತಾರ, ಸಂಗ್ರಹ: 404.33 ಕೋಟಿ ರೂ

ಚಿತ್ರ: ವಿಕ್ರಾಂತ್ ರೋಣ, ಸಂಗ್ರಹ: 126.65 ಕೋಟಿ ರೂ

ಚಲನಚಿತ್ರ: 777 ಚಾರ್ಲಿ, ಸಂಗ್ರಹ: 108.60 ಕೋಟಿ ರೂ

ಲನಚಿತ್ರ: ಜೇಮ್ಸ್ , ಸಂಗ್ರಹ: 94.20 ಕೋಟಿ ರೂ 

2 . ತೆಲುಗು ಅಂದರೆ ಟಾಲಿವುಡ್-2 ಇಂಡಸ್ಟ್ರಿ ಎರಡನೇ ಸ್ಥಾನದಲ್ಲಿದೆ. ಈ ಚಿತ್ರರಂಗದ ಟಾಪ್ 5 ಚಿತ್ರಗಳು ವಿಶ್ವಾದ್ಯಂತ 1764 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿವೆ. ತೆಲುಗು ಚಿತ್ರರಂಗದ ಟಾಪ್ 5 ಚಲನಚಿತ್ರಗಳು ಮತ್ತು ಅವುಗಳ ಕಲೆಕ್ಷನ್‌ ಇಲ್ಲಿದೆ-

ಚಿತ್ರ: RRR, ಸಂಗ್ರಹ: 1155.60 ಕೋಟಿ ರೂ

ಚಿತ್ರ: ಸರ್ಕಾರ ವಾರಿ ಪಟ, ಸಂಗ್ರಹ: 187.40 ಕೋಟಿ ರೂ

ಚಿತ್ರ: ಭೀಮ್ಲಾ ನಾಯಕ್, ಸಂಗ್ರಹ: 158.50 ಕೋಟಿ

ಚಿತ್ರ: ರಾಧೆ ಶ್ಯಾಮ್, ಸಂಗ್ರಹ: 148.60 ಕೋಟಿ ರೂ

ಚಿತ್ರ: ಕಾರ್ತಿಕೇಯ 2, ಸಂಗ್ರಹ: 118.22 ಕೋಟಿ ರೂ.

3. ಬಾಲಿವುಡ್ ಅಂದರೆ ಹಿಂದಿ ಚಿತ್ರರಂಗದ ಟಾಪ್ 5 ಚಿತ್ರಗಳ ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ 1525 ಕೋಟಿ ರೂ. ಈ ಸಿನಿಮಾ ಇಂಡಸ್ಟ್ರಿ ಮೂರನೇ ಸ್ಥಾನದಲ್ಲಿದೆ.

ಚಿತ್ರ: ಬ್ರಹ್ಮಾಸ್ತ್ರ ಭಾಗ ಒಂದು: ಶಿವ, ಸಂಗ್ರಹ: 436.40 ಕೋಟಿ ರೂ

ಚಲನಚಿತ್ರ: ದಿ ಕಾಶ್ಮೀರ್ ಫೈಲ್ಸ್, ಸಂಗ್ರಹ: 340.92 ಕೋಟಿ ರೂ

ಚಿತ್ರ: ದೃಶ್ಯಂ 2, ಸಂಗ್ರಹ: 271.90 ಕೋಟಿ ರೂ

ಚಿತ್ರ: ಭೂಲ್ ಭುಲೈಯಾ 2, ಸಂಗ್ರಹ: 266.88 ಕೋಟಿ ರೂ

ಚಿತ್ರ: ಗಂಗೂಬಾಯಿ ಕಾಠಿವಾಡಿ,ಸಂಗ್ರಹ: 209.25 ಕೋಟಿ ರೂ.

4.  ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದಲ್ಲಿರುವುದು ತಮಿಳು ಚಿತ್ರರಂಗ ಅಂದರೆ ಕಾಲಿವುಡ್ . ಈ ಉದ್ಯಮದ ಟಾಪ್ 5 ಚಿತ್ರಗಳು ಒಟ್ಟಾಗಿ ವಿಶ್ವಾದ್ಯಂತ 1472 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. –

ಚಿತ್ರ: ಪೊನ್ನಿಯಿನ್ ಸೆಲ್ವನ್ 1, ಸಂಗ್ರಹ: 523.70 ಕೋಟಿ ರೂ

ಚಿತ್ರ: ವಿಕ್ರಮ್, ಸಂಗ್ರಹ: 446.50 ಕೋಟಿ ರೂ

ಚಲನಚಿತ್ರ: ಮೃಗ, ಸಂಗ್ರಹ: 220.35 ಕೋಟಿ ರೂ

ಚಿತ್ರ: ವಲಿಮೈ, ಸಂಗ್ರಹ: 164.50 ಕೋಟಿ ರೂ

ಚಿತ್ರ: ತಿರುಚಿತ್ತಂಬಲಂ,ಸಂಗ್ರಹ: 117.20 ಕೋಟಿ ರೂ.

5.  ಐದನೇ ಸ್ಥಾನ ಮಲಯಾಳಂ ಚಲನಚಿತ್ರೋದ್ಯಮವಾಗಿದೆ. ಮಾಲಿವುಡ್‌ನ ಟಾಪ್ 5 ಚಲನಚಿತ್ರಗಳು ಒಟ್ಟಾಗಿ ವಿಶ್ವಾದ್ಯಂತ 287 ಕೋಟಿ ರೂ.ಗಿಂತ ಹೆಚ್ಚು ಗಳಿಸಿವೆ. ಮಲಯಾಳಂ ಚಿತ್ರರಂಗದ ಟಾಪ್ 5 ಸಿನಿಮಾಗಳು ಈ ಕೆಳಗಿನಂತಿವೆ.

ಚಿತ್ರ: ಭೀಷ್ಮ ಪರ್ವಂ, ಸಂಗ್ರಹ: 89.35 ಕೋಟಿ ರೂ

ಚಿತ್ರ: ಹೃದಯ, ಸಂಗ್ರಹ: 53.10 ಕೋಟಿ ರೂ

ಚಿತ್ರ: ಜನ ಗಣ ಮನ, ಸಂಗ್ರಹ: 50.85 ಕೋಟಿ ರೂ

ಚಿತ್ರ: ತಲ್ಲುಮಲ, ಸಂಗ್ರಹ: 47.24 ಕೋಟಿ ರೂ

ಚಿತ್ರ: ಕಡುವ, ಸಂಗ್ರಹ: 46.65 ಕೋಟಿ ರೂ

 

 

 

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button