ಸರ್ವಜ್ಞ ಮೂರ್ಖಂಗೆ – ಬುದ್ದಿಯನು ನೂರ್ಕಾಲ ಹೇಳಿದರು.
ಕೆ. ಹೊಸಹಳ್ಳಿ ಫೆ.21

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ನಾಡ ಕಛೇರಿಯಲ್ಲಿ ಸರ್ವಜ್ಞ ಜಯಂತೋತ್ಸವ ಕಾರ್ಯಕ್ರಮ ಹೊಸಹಳ್ಳಿ ನಾಡ ಕಛೇರಿಯಲ್ಲಿ ‘’ಸರ್ವಜ್ಞ‘’ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಉಪ ತಹಶೀಲ್ದಾರರು ಚಂದ್ರ ಮೋಹನ್ ಮಾತನಾಡಿ ತಂದೆ ತಾಯಿಗಳಿಂದ ಅಗಲಿ ಪುಣ್ಯ ಕ್ಷೇತ್ರಗಳನ್ನೂ ಗುರು ಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದರು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದರು. ಅವರು ಜನಪ್ರಿಯ ವಚನಗಳು ಅವರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವರು ಆಶುಕವಿ ಯಾದ್ದರಿಂದ, ಎಷ್ಟೋ ಕವನಗಳು ಅವರ ಉಳಿಸಿದ್ದಾರೆ ಎಂದು ನುಡಿದರು. ಗ್ರಾಮ ಪಂಚಾಯಿತಿ ಸದಸ್ಯ ಹೊನ್ನೂರಪ್ಪ ಮಾತನಾಡಿ ಕನ್ನಡ ವನ್ನಾಡುವವರ ಮನಸ್ಸಿನಲ್ಲಿ ದೃಢವಾಗಿ ನೆಲಸಿದ ಕವಿ. ಸುತ್ತಲಿನ ಜನ ಜೀವನವನ್ನು ತೆರೆದ ಕಣ್ಣಿನಿಂದ ನೋಡಿದ, ಸೂಕ್ಷ್ಮ ಬುದ್ದಿಯಿಂದ ಪರೀಕ್ಷಿಸಿದ. ಮೂರು ಪಂಕ್ತಿಗಳಲ್ಲಿ ಅಪಾರ ಅನುಭವವನ್ನು. ವಿವೇಕವನ್ನು ತುಂಬಿಸಿ ಜನತೆಗಿತ್ತ ಮಾರ್ಗದರ್ಶಕರು ಎಂದು ಹೇಳಿದರು. ಸರ್ವಜ್ಞ ನೆಂಬುವನು ಗರ್ವದಿಂದಾದವನೇ…..? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ.ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು. ಗೋರ್ಕಲ್ಲ ಮೇಲೆ ಮಳೆಗರೆದರೆ ಆಕಲ್ಲು ನೀರು ಕುಡಿವುದೆ ಸರ್ವಜ್ಞ ಎಂದು ನುಡಿದರು. ಇದೇ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರಾದ ಸಿದ್ದಪ್ಪ, ಮುಖಂಡರಾದ ಗ್ರಾಮ ಪಂಚಾಯತಿ ಸದಸ್ಯರು ಹೊನ್ನೂರಪ್ಪ, ನಡಲುಮನೆ ತಿಪ್ಪೇಸ್ವಾಮಿ, ಬಸವರಾಜ್, ಕೆಎಸ್ ವಿಕಾಸ್, ತಳವಾರ ಭೋರಪ್ಪ, ಹನುಮಂತಪ್ಪ ಸೇರಿದಂತೆ ಸಾರ್ವಜನಿಕರು ಉಪಸ್ಧಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ