ಸ್ವರ್ಣಸಿರಿ ಪ್ರಶಸ್ತಿಗೆ ಹುನಗುಂದದ ಡಾ, ಮುರ್ತುಜಾ ಒಂಟಿ ಭಾಜನ.
ಹುನಗುಂದ ಜೂನ್.22

ಹುಬ್ಬಳ್ಳಿಯ ಭಾವ ಸಂಗಮ ಪ್ರತಿಷ್ಠಾನ ದಿಂದ ಕೊಡ ಮಾಡುವ ರಾಜ್ಯ ಮಟ್ಟದ ಸ್ವರ್ಣಸಿರಿ ಪ್ರಶಸ್ತಿಗೆ ಹುನಗುಂದದ ಪ್ರಾಧ್ಯಾಪಕ ಡಾ. ಮುರ್ತುಜಾ ಬ ಒಂಟಿ ಅವರು ಭಾಜನರಾಗಿದ್ದಾರೆ.ಜೂ.23 ರಂದು ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳ ಸಭಾಂಗಣದಲ್ಲಿ ನಡೆಯುವ ಭಾವಸಂಗಮ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಸ್ವರ್ಣಸಿರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜೇಂದ್ರ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹುನಗುಂದದ ಪಟ್ಟಣದ ಪ್ರಾಧ್ಯಾಪಕ ಡಾ.ಮುರ್ತುಜಾ ಒಂಟಿ ಅವರು ವೃತ್ತಿಯಿಂದ ಕನ್ನಡ ಅಧ್ಯಾಪಕರು,ಒರ್ವ ಲೇಖಕರಾಗಿ 8 ಸ್ವತಂತ್ರ ಕೃತಿಗಳನ್ನು 15 ಕ್ಕೂ ಹೆಚ್ಚು ಸಂಪಾದಿತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಈಗಾಗಲೇ 10 ಕ್ಕೂ ಹೆಚ್ಚು ಪ್ರಶಸ್ತಿಗಳು,ಗೌರವ ಪುರಸ್ಕಾರಗಳು ಲಭಿಸಿವೆ. ಅವರಿಗೆ ಸ್ವರ್ಣಸಿರಿ ಪ್ರಶಸ್ತಿ ಲಭಿಸಿರುವುದು ಅಭಿಮಾನದ ವಿಷಯ ಅದಕ್ಕಾಗಿ ಅವರ ಸ್ನೇಹಿತರು, ಹಿತೈಸಿಗಳು, ಅಪಾರ ವಿದ್ಯಾರ್ಥಿ ಬಳಗ ಹಾಗೂ ಕುಟುಂಬದ ಸದಸ್ಯರು ಅವರನ್ನು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.