ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮಾಭಾಯಿ ಅಂಬೇಡ್ಕರ್ ಬದುಕಿನ ನಾಟಕ ಪ್ರದರ್ಶನ.
ಬಾಗಲಕೋಟೆ ಜೂನ್.12

ಬಾಗಲಕೋಟೆ ಜಿಲ್ಲೆಯ ನವನಗರದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಬಾಗಲಕೋಟೆ ಗೆಳೆಯರ ಬಳಗ, ಕರ್ನಾಟಕ ವಚನ ಪರಿಷತ್, ಕರ್ನಾಟಕ ರಂಗ ಪರಿಷತ ಸಹಯೋಗದಲ್ಲಿ ಮಿಸೆಸ್ ಅಂಬೇಡ್ಕರ ಎಂಬ ಆದರ್ಶ ಮಹಿಳೆಯ ಬದುಕಿನ ರಾಮಾಬಾಯಿ ಅಂಬೇಡ್ಕರ ರವರ ಜೀವನ ಮೌಲ್ಯ ಅಳವಡಿಸಿ ಕೊಳ್ಳಲು ಸಲಹೆ ನೀಡಿದ ರಂಗ ನಿರ್ದೇಶಕ ಪ್ರದೀಪ ತಿಪಟೂರ ನಾಟಕ ಪ್ರದರ್ಶನ ಉದ್ಘಾಟಿಸಿದರು, ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಅರುಣಕುಮಾರ ಗಾಳಿ ಸಂವಿಧಾನ ಶಿಲ್ಪಿ ಅಂಬೇಡ್ಕರವರ ಬದುಕು ಅವರ ಪತ್ನಿಯಾದ ರಾಮಾಭಾಯಿಯವರ ಶಕ್ತಿ ಮತ್ತು ತ್ಯಾಗದ ಬದುಕಿನ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿ ಕೊಂಡು ಸಮಾಜದಲ್ಲಿ ಸಾಧಕ ರಾಗಬೇಕೆಂದರು ಕ್ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ ಸಿ ಡುಗನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಜೈನಾಪುರ, ರಂಗಭೂಮಿ ಚಿಂತಕ ಮಹಾತೇಶ ಗಜೇಂದ್ರಗಡ, ಐ ಕ್ಯೂ ಎ ಸಿ ಸಂಚಾಲಕ ಪ್ರೊ,, ಅಜಿತ ನಾಗರಾಳೆ ಸಾಂಸ್ಕೃತಿಕ ವಿಭಾಗದ ಸಂಚಾಲಕ ಜಿ ಜಿ ಹಿರೇಮಠ ಹಾಜರಿದ್ದರು.
ರಾಜ್ಯ ಮಟ್ಟದ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.