ಮುಳಸಾವಳಗಿ ಗ್ರಾಮದಲ್ಲಿ ಜರುಗಿದ ಮಹಾಶಕ್ತಿ ಕೇಂದ್ರ ಬಿಜೆಪಿ ಕಾರ್ಯಕರ್ತರ ಸಭೆ.

ಮುಳಸಾವಳಗಿ ಏಪ್ರಿಲ್.05

ಜಿಲ್ಲೆಯ ಅಭಿವೃದ್ಧಿಗೆ ೧ ಲಕ್ಷ ಕೋಟಿ ಅನುದಾನ ನೀಡಿದ ಪ್ರಧಾನಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ. ಅದಕ್ಕಾಗಿ ಬಿಜೆಪಿಗೆ ಮತ ನೀಡುವುದರ ಮೂಲಕ ದೇಶದ ಏಳಿಗೆಗೆ ಶ್ರಮಿಸಿ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಮತ್ತು ಕಳೆದ ಬಿಜೆಪಿ ನೇತೃತ್ವದ ರಾಜ್ಯಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಈಗ ಏಳು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಆದರೆ ಕಾಂಗ್ರೆಸ್ ಸರ್ಕಾರಗಳು ಮಾತ್ರ ಯಾವುದೇ ಅಭಿವೃದ್ಧಿ ಮಾಡದೇ ಮಕ್ಕಳು, ಸಂಬಂದಿಗಳಿಗೆ ಅಧಿಕಾರ ದೊರಕಿಸುವುದರಲ್ಲಿ ನಿರತವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯಾಗಿದ್ದು ಅತ್ಯಂತ ಸಂತೋಷದ ವಿಷಯ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮತ್ತೋಮ್ಮೆ ಗೆದ್ದು ಮೋದಿಯವರ ಕೈ ಬಲ ಪಡಿಸಬೇಕಾಗಿದೆ.

ಆದ್ದರಿಂದ ತಾವೆಲ್ಲ ಬಿಜೆಪಿ ಗೆಲುವಿಗಾಗಿ ಶ್ರಮವಹಿಸಿ ಎಂದರು.ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ನಮ್ಮ ಸಂಸದರು ಸದ್ದಿಲ್ಲದೇ ಅಭಿವೃದ್ಧಿಯಲ್ಲಿ ನಿರತರಾದವರು ಅವರೆಂದೂ ಪ್ರಚಾರಕ್ಕೆ ಬೀಳಲಿಲ್ಲ. ಜಿಲ್ಲೆಯಲ್ಲಿ ಜೆಜೆಎಮ್ ಯೋಜನೆಯಡಿ ಕುಡಿಯುವ ನೀರಿಗಾಗಿ ಶ್ರಮಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ಮಾಡದೇ ಕೇವಲ ಸುಳ್ಳು ಪ್ರಚಾರದಲ್ಲಿ ನಿರತವಾಗಿದೆ. ಆದ್ದರಿಂದ ಈ ಬಾರಿ ಮತ್ತೋಮ್ಮೆ ಬಿಜೆಪಿಗೆ ಮತ ನೀಡಿ ಮೋದಿಯವರ ೪೦೦ರ ಗುರಿಯನ್ನು ಸಾಕಾರಗೊಳಿಸಿ ಎಂದು ಕರೆ ನೀಡಿದರು.ವಿಧಾನ ಪರಿಷತ್ ಮಾಜಿಸದಸ್ಯ ಅರುಣ ಶಹಾಪೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಸ್ಥಳೀಯ ಕಾರ್ಯಕರ್ತ ಬಸವರಾಜ ಕಲ್ಲೂರ, ಜೆಡಿಎಸ್ ಕಾರ್ಯಕರ್ತ ಸಂಗನಗೌಡ ಬಿರಾದಾರ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಮಾತನಾಡಿ ಮತ ಯಾಚಿಸಿದರು.ನಿಂಗರಾe ಮಹಾರಾಜ, ಮತಾಬ್ ಮುಜಾವರ್, ಮಡುಗೌಡ ಪಾಟೀಲ, ಈರಣ್ಣಾ ರಾವೂರ, ಪ್ರಭುಗೌಡ ಬಿರಾದಾರ(ಅಸ್ಕಿ), ಶಿಲ್ಪಾ ಕುದರಗೊಂಡ, ಮಲುಕು ಬಾಗೇವಾಡಿ, ಸಿದ್ದು ಬುಳ್ಳಾ, ರಾವುತಪ್ಪ ಮೂಲಿಮನಿ, ಭೀಮನಗೌಡ ಲಚ್ಯಾಣ, ಶ್ರೀಮಂತ ತಳವಾರ, ಚಿದಾನಂದ ಹಿಟ್ನಳ್ಳಿ, ಹುಸೇನ್ ಗೌಂಡಿ, ಪ್ರಕಾಶ ದೊಡಮನಿ, ದಾವುಲಸಾಬ್ ಇನಾಮದಾರ ಸೇರಿದಂತೆ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

ವರದಿ:ಮಹಾಂತೇಶ.ಹಾದಿಮನಿ. ವಿಜಯಪುರ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button