“ಪರಿಶುದ್ಧ ಭಾರತೀಯ ಚಲುವೆ ಅಪರಂಜಿ ಮೊನಾಲಿಸಾ”…..

ಪರಿಶುದ್ಧ ಭಾರತೀಯ ಚಲುವೆ ಅಪರಂಜಿ
ಮೊನಾಲಿಸಾ.
ಎಂಥ ಸುಂದರಿ ಇಂದೋರದಿ ಧರೆಗಿಳಿದು
ಬಂದು ವಿಶ್ವದಿ ಮುಂಚಿದ ಮೊನಾಲಿಸಾ
ರುದ್ರಾಕ್ಷಿ ಮಾರುವ ಕಮಲಾಕ್ಷಿ
ಜಗದ ಜನಮನ ಸೆಳೆದು ನೈಜ
ವಿಶ್ವ ಸುಂದರಿ
ಕಣ್ಣಿನ ನೋಟದಿ ಗಮನ ಸೆಳೆದ ಸ್ರೀಕುಲದ
ಚಲುವು
ನಗುವಿಗೆ ಸವಾಲ್ ಹಾಕಿ ನಕ್ಕವಳು ನಗೆ
ಬಾಡದಿರಲಿ
ಪದವಿ ಇಲ್ಲದಿದ್ದರೂ ಪವಿತ್ರ ಭಾವದವಳು
ಸಂದರಿ ಹಾಕದಿರು ಮುಖವಾಡ
ವಿನಯಕ್ಕೆ ಮೆರಗು ಜನಸ್ತೋಮವೇ ಬೆರಗು
ಬಣ್ಣ ಹಚ್ಚಿ ಕುಣಿಯವರು ಶುದ್ಧ ಚಲುವಿಗೆ
ಶರಣಾದರು ಸಿನಿಮಾ ಸುದ್ಧಿವಾಹಿನಿ
ಮಾಧ್ಯಮದ ಮೀತಿಮಿರಿ ವೀಕ್ಷಕರ ಗಮನ
ಸೆಳೆದ ಭಾರತ ವರಪುತ್ರಿ
ಭಾರತ ಸಂಸ್ಕೃತಿ ಸಂಸ್ಕಾರ ಮರೆತು ಸ್ವಾರ್ಥ
ಲಾಭಕ್ಕಾಗಿ ಮನವಲಿಸುವರಿಗೆ ದಿಕ್ಕಾರ ವಿರಲಿ
ಮುಗ್ಧ ಚೆಲುವಿನ ಬೆಳಕಿಗೆ ಕತ್ತಲಾಗದಿರಿ
ಪ್ರೀತಿ ಕರುಣೆ ತೋರುವವರಿಗೆ ನಾರಿ
ಮೊನಾಲಿಸಾ ನೀನಗೆ ನೀನೆ ಸಾಟಿ
ನಂಬದಿರು ನಚ್ಚದಿರು ಜಗದ ಜನರ ಮೋಡಿಗೆ
ಪರಿಶುದ್ಧ ಭಾರತೀಯ ಚಲುವೆ ಅಪರಂಜಿ
ಮೊನಾಲಿಸಾ.

ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.