ಪಿಂಚಣಿ ವ್ಯವಸ್ಥೆಯಲ್ಲಿ ಮತ್ತೇ ಬದಲಾವಣೆ ; ಪಿಂಚಣಿ ಪಡೆಯುವವರಿಗೆ ಗೂಡ್ ನ್ಯೂಸ್…

ಪಿಂಚಣಿ ಪಡೆಯುವವರು ಪ್ರತಿ ವರ್ಷ ಪಿಂಚಣಿ ವಿತರಣಾ ಸಂಸ್ಥೆಗೆ ಪಿಡಿಎ (PDA)ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡೋದು ಕಡ್ಡಾಯ.

ಇದಕ್ಕಾಗಿ ಪಿಂಚಣಿದಾರರು ಪಿಂಚಣಿ (ಪಿಂಚಣಿ) ವಿತರಣೆ ಮಾಡುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಭಾರತೀಯ ಅಂಚೆ ಇಲಾಖೆಯ ನಡುವೆ ಇರುವ ಒಪ್ಪಂದದಂತೆ ಜೀವಂತ ಪ್ರಮಾಣ ಪತ್ರವನ್ನು ‘ಇ ವಿದ್ಯುನ್ಮಾನ’ ಆಡಳಿತದ ಅಡಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ‘ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಸೇವೆ’ ಒದಗಿಸಲು ಕ್ರಮವಹಿಸಲಾಗಿದೆ.

ಯಾವೆಲ್ಲ ಬ್ಯಾಂಕ್ ನಿಂದ ಪಡೆಯಬಹುದು?

ಪಿಂಚಣಿದಾರರಿಗೆ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಲು ಹತ್ತಿರದ ಅಂಚೆ ಕಛೇರಿ ಅಥವಾ ಪೋಸ್ಟ್‌ಮ್ಯಾನ್ ಅವರನ್ನು ಸಂಪರ್ಕಿಸಬಹುದು. ಪಿಂಚಣಿಯನ್ನು ಪಡೆಯುವ ನಾಲ್ಕು ಪ್ರಮುಖ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಬ್ಯಾಂಕ್ ಮತ್ತು ಬರೋಡಾ ಬ್ಯಾಂಕುಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಮೂಲಕ ನೇರವಾಗಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸುವ ಸೌಲಭ್ಯ ಇರುತ್ತದೆ.

ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ.?

ಪಿಂಚಣಿದಾರರ ಮನೆ ಬಾಗಿಲಿಗೆ ಬಂದು, ಬಯೋಮೆಟ್ರಿಕ್‌ ಉಪಕರಣದ ಮೂಲಕ ವಿವರಗಳನ್ನು ಒದಗಿಸಿ, ಇ-ಜೀವಂತ ಪ್ರಮಾಣ ಪತ್ರವನ್ನು ಅಂಚೆ ಸೇವಕರು ನೀಡುತ್ತಾರೆ. ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಪಿಂಚಣಿಯನ್ನು ಪಾವತಿಸುವ ಬ್ಯಾಂಕು ಶಾಖೆಗಳಿಗೆ ನೇರವಾಗಿ ಜೀವಂತ ಪ್ರಮಾಣ ಪತ್ರಗಳನ್ನು ರವಾನಿಸಬಹುದು. ಪಿಂಚಣಿದಾರರು ಈ ಸೇವೆಯನ್ನು ನಿಗದಿತ 70 ರೂ.ಶುಲ್ಕ ಪಡೆದರು.

ಯಾವ ದಾಖಲೆಗಳು ಅನಿವಾರ್ಯವಾಗಿದೆ..?

ಇ-ಜೀವಂತ ಪ್ರಮಾಣ ಪತ್ರ ಪಡೆಯಲು ಪಿಂಚಣಿದಾರರು ತಮ್ಮ ಹೆಸರು, ಪಿಪಿಓ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ, ಪಿನ್‌ಬೈ ಕೋಡ್ ಆಧಾರ್ ಸಂಖ್ಯೆ, ಮೊಬೈಲು ಸಂಖ್ಯೆಯ ವಿವರಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಒದಗಿಸಬೇಕು.

ಜೀವನ್ ಪ್ರಮಾಣ ಪೋರ್ಟಲ್ ಮೂಲಕ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್’ ತಂತ್ರಾಂಶದಲ್ಲಿ ಮೇಲ್ಕಂಡ ವಿವರಗಳನ್ನು ಒದಗಿಸಿದ ನಂತರ ಕಾಗದ ರಹಿತ ಟಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಸೃಜನೆತಿಸುತ್ತದೆ.

ಇ-ಜೀವನ್ ಪ್ರಮಾಣ ಐಡಿಯನ್ನು ಪಿಂಚಣಿದಾರರಿಗೆ ಎಸ್.ಎಮ್.ಎಸ್. ಮೂಲಕ ಕಳುಹಿಸಲು, ಈ ಅಧಿಕೃತ ಸಂಖ್ಯೆಯ ನೆರವಿನಿಂದ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button