ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಾಣ.
ಜಾಲವಾದ ಜನೇವರಿ.18

ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಇಂದು ನಿರ್ಗತಿಕ ಫಲಾನುಭವಿ ಆಗಿರುವ ಅಂಬವ್ವ ಕಂಬಾರ ಇವರಿಗೆ ಕ್ಷೇತ್ರದಿಂದ ಮಂಜೂರ ಆಗಿರುವ ವಾತ್ಸಲ್ಯ ಮನೆಯ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿತು,, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು- ಶ್ರೀ ಬೋಗೇಶ ಜನಗೊಂಡ ಇವರು ಭೂಮಿ ಪೂಜೆ ಮಾಡಿದರು, ತಾಲೂಕಿನ ಯೋಜನಾಧಿಕಾರಿಗಳು ಶ್ರೀ ಗಿರೀಶ್ ಕುಮಾರ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮ ಹಾಗೂ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು, ಶ್ರೀ ರಾಜು ಇಂಡಿ,ಹಾಗೂ ವಲಯದ ಮೇಲ್ವೀಚಾರಕರು-ಶ್ರೀ ಬಾಬುರಾವ ಗೋಣಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕುಮಾರಿ-ಕಾವ್ಯ ಬಡಿಗೇರ, ಸೇವಾ ಪ್ರತಿ ನಿದಿಗಳು/ಒಕ್ಕೂಟದ ಪದಾಧಿಕಾರಿಗಳು- ಸಂಘದ ಸದಸ್ಯರು, ಮಕ್ಕಳು ಹಾಗೂ ಊರಿನ ಗಣ್ಯರು ಹಾಜರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ. ದೇವರ ಹಿಪ್ಪರಗಿ