ಕೂಸಿನ ಮನೆ ಕೇಂದ್ರಗಳಿಗೆ – ರಾಜ್ಯ ತಂಡ ಭೇಟಿ.
ಬೈಲಹೊಂಗಲ ನ.08

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಹಾಗೂ ಮಕ್ಕಳ ಅಪೌಷ್ಠೀಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಿರುವ “ಕೂಸಿನ ಮನೆ ಕೇಂದ್ರ” ಗಳಿಗೆ ಇಂದು ಕ್ರಷ್ ಸಂಸ್ಥೆಯ ಸಂಯೋಜಕರಾದ ಶ್ರೀ ವಿಶ್ವನಾಥ ರವರು ಬೈಲಹೊಂಗಲ ತಾಲೂಕಿನ ಗ್ರಾ.ಪಂ ಸಂಪಗಾಂವ, ಬೈಲವಾಡ, ನಾಗನೂರ, ಮುರಕೀಭಾಂವಿ ಹಾಗೂ ಪಟ್ಟಿಹಾಳ ಕೆ ಬಿ. ಕೇಂದ್ರಗಳಿಗೆ ಭೇಟಿ ನೀಡಿ ಕೂಸಿನ ಮನೆಯ ಪ್ರಗತಿ ಪರಿಶೀಲನೆ, ಕೇರಟೇಕರ್ಸಗಳ ಕಾರ್ಯವೈಖರಿ ಹಾಗೂ ದಾಖಲಾತಿ ನಿರ್ವಹಣೆ ಮತ್ತು ಮೂಲಭೂತ ಸೌಲಭ್ಯಗಳನ್ನು ಮಕ್ಕಳಿಗೆ ಕೂಸಿನ ಮನೆ ಕೇಂದ್ರದಿಂದ ಒದಗುತ್ತಿರುವ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು.

ತಾಲೂಕಿನ ಸಂಪಗಾಂವ ಕೂಸಿನ ಮನೆ ಕೇಂದ್ರವು ಮಾದರಿ ಕೂಸಿನ ಮನೆಯಾಗಿ ಬೇರೆ ಕೇಂದ್ರಗಳಿಗೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ತದನಂತರ ಉತ್ತಮ ರೀತಿಯಲ್ಲಿ ಕೂಸಿನ ಮನೆ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು.ಉಪಸ್ಥಿತಿ, ವಿಜಯ ಪಾಟೀಲ ಸಹಾಯಕ ನಿರ್ದೇಶಕರು (ಗ್ರಾ.ಉ), ರಮೇಶ ನಂದಿಹಳ್ಳಿ (ವಿಷಯ ನಿರ್ವಾಹಕ) ನಾಗರಾಜ್ ಯರಗುದ್ದಿ ತಾಂತ್ರಿಕ ಸಂಯೋಜಕರು, ಎಸ್ ಹಿರೇಮಠ ಐಇಸಿ ಸಂಯೋಜಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಡಿ.ಬಿ ರಾಯನಾಯ್ಕರ, ಗಂಗಪ್ಪ ಮರೆಣ್ಣವರ, ಮದುಸೂದನ ದೇಶಪಾಂಡೆ, ಎಸ್.ಎಸ್ ಮರಕುಂಬಿ, ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಆಶಾ ಗುರುಪುತ್ರ, ವಿಜಯಲಕ್ಷ್ಮಿ ಮಾಡಮಗೇರಿ, ಶೋಭಾ ಲಂಗೊಟ್ಟಿ ಮೇಲ್ವಿಚಾರಕರು ಹಾಗೂ ಕೂಸಿನ ಮನೆ ಕೇರಟೇಕರ್ಸಗಳು, ಗ್ರಾ.ಪಂ ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ