ಕೂಡ್ಲಿಗಿ:ಲೋಕ ಕಲ್ಯಾಣಕ್ಕಾಗಿ 150.ಕಿಮೀ ದೂರದ “ಆಂಧ್ರದಿಂದ ಕೊಟ್ಟೂರಿಗೆ” ಕಾಲ್ನಡಿಗೆಯಲ್ಲಿ ಆಗಮಿಸಿದ – ಭಕ್ತ ದೊಡ್ಡನಗೌಡ.
ಕೂಡ್ಲಿಗಿ ಡಿಸೆಂಬರ್.24

ಡಿ.25 ರಂದು ಕೊಟ್ಟೂರಲ್ಲಿ ಜರುಗಲಿರುವ, ಶ್ರೀಗುರು ಕೊಟ್ಟೂರೇಶ್ವರ ಕಾರ್ತೀಕೋತ್ಸವಕ್ಕಾಗಿ. ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಕರ್ನಾಟಕದ ಕೊಟ್ಟೂರು ಕ್ಷೇತ್ರಕ್ಕೆ, ಭಕ್ತನೋರ್ವ ಸುಮಾರು 150.ಕಿಮೀ ಅಂತರದಿಂದ ಕಾಲ್ನಡಿಗೆ ಮೂಲಕ ಶ್ರೀಕೊಟ್ಟೂರೆಶ್ವರ ಸ್ವಾಮಿ ದರ್ಶನಕ್ಕಾಗಿ ತೆರಳಿದ್ದಾನೆ. ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಾ, ಆಲಅಡವಿ ಮಂಡಲದ ಸಿರಿಗಾಪುರ ಗ್ರಾಮದ 28.ವರ್ಷದ ಯುವ ರೈತ ದೊಡ್ಡನಗೌಡ. ಲೋಕ ಕಲ್ಯಾಣಕ್ಕಾಗಿ ಹಾಗೂ ಸಕಲರಿಗೂ ನೆಮ್ಮದಿ ನೀಡಲೆಂದು ಬೇಡಿಕೊಳ್ಳಲು, 150.ಕಿ ಮೀ ದೂರದಿಂದ ಕಾಲ್ನಡಿಗೆ ಯಾತ್ರೆ ಹಮ್ಮಿ ಕೊಂಡಿದ್ದಾನೆ. ಈ ಮೂಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ಶ್ರೀಕೊಟ್ಟೂರೇಶ್ವರ ದೇವರ ಕಾರ್ತೀಕೋತ್ಸವಕ್ಕಾಗಿ, 150.ಕಿಮೀ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ ದೊಡ್ಧನ ಗೌಡ. ಇದು ಸತತ 2.ನೇ ವರ್ಷದ ಪಾದ ಯಾತ್ರೆಯಾಗಿದ್ದು, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಿಂದ ಕರ್ನಾಟಕದ ವಿಜಯನಗರ ಜಿಲ್ಲೆಯ ಕೊಟ್ಟೂರುಗೆ. ಒಟ್ಟು 150.ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾನೆ ಯುವ ರೈತ 28.ವರ್ಷದ ದೊಡ್ಡನಗೌಡ, ಡಿ.23 ರಂದು ಸಂಜೆ ಕೂಡ್ಲಿಗಿ ಪಟ್ಟಣ ಪ್ರವೇಶಿಸಿದ ಆಂಧ್ರ ಮೂಲದ ಶ್ರೀಕೊಟ್ಟೂರೇಶ್ವರ ಸ್ವಾಮಿಯ ಭಕ್ತ ದೊಡ್ಡನಗೌಡ. ಸೂರ್ಯಾಸ್ಥ ಆದ ಕಾರಣ ಅವರು ಪಟ್ಟಣದ ಹೊರವಲಯದ ಶ್ರೀ ಗಣೇಶನ ಗುಡಿಯಲ್ಲಿ ತಂಗಿದ್ದಾರೆ. 24.ರ ಭಾನುಬಾರ ಬೆಳ್ಳಂ ಬೆಳಿಗ್ಗೆ ಮಡಿ ಮುಡಿಯೊಂದಿಗೆ, ತಮ್ಮ ಬಳಿಯಲ್ಲಿರುವ ಶ್ರೀಗುರು ಕೊಟ್ಟೂರೇಶ್ವರರ ಧ್ವಜಕ್ಕೆ ಪೂಜೆಗೈದು. ಲಘು ಉಪಹಾರವಾಗಿ ಪಳಾರ ಮತ್ತು ನೀರು ಸೇವಿಸುತ್ತಾರೆ, ಕೊಟ್ಟೂರು ಕಡೆ ಪಾದಯಾತ್ರೆ ಮುಂದುವರೆಸಿದ್ದಾರೆ ಭಕ್ತ ದೊಡ್ಡನಗೌಡ, ಶ್ರೀಕೊಟ್ಟೂರೇಶ್ವರ ದೇವರ ಭಾವಚಿತ್ರ ಇರುವ ಧ್ವಜವನ್ನಿಡಿದು ಪಾದಯಾತ್ರೆ ಮಾಡುತ್ತಾರೆ. ಡಿ 21ರಂದು ಆರಂಭಗೊಂಡ ಕಾಲ್ನಡಿಗೆ ಯಾತ್ರೆಯನ್ನು, ಅವರು ಉಪವಾಸ ವ್ರತದೊಂದಿಗೆ ಮಾಡುತ್ತಿರುವುದೇ ವಿಶೇಷವಾಗಿದೆ. ಆಹಾರವನ್ನೇ ಸೇವಿಸದೇ ಕೇವಲ ಪಳಾರ, (ಖಾರ ಮಂಡಕ್ಕಿ ಮಿರ್ಚಿ) ಹಾಗೂ ನೀರನ್ನು ಮಾತ್ರ ಸೇವಿಸುತ್ತಾರೆ ದೊಡ್ಡನಗೌಡ. ತಮ್ಮ ಸ್ವಗ್ರಾಮದಿಂದ ಹೊರಟ ಯುವ ರೈತ ದೊಡ್ಡಗೌಡ ಪ್ರತಿ ದಿನಕ್ಕೆ, 30-35 ಕಿಮೀ ಕಾಲ್ನಡಿಗೆ ಯಾತ್ರೆ ಮೂಲಕ ಮಾರ್ಗ ಕ್ರಮಿಸುತ್ತಾರೆ. ಕೊಟ್ಟೂರಲ್ಲಿ ಡಿ.25 ರಂದು ಜರುಗಲಿರುವ, ಶ್ರೀಕೊಟ್ಟೂರೇಶ್ವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಶ್ರೀಗುರು ಕೊಟ್ಟೂರೇಶ್ವರರ ಭಕ್ತ ದೊಡ್ಡನಗೌಡ. ಇವರು ಹುಟ್ಟು ಉಗ್ಗುವಿಕೆಯಿಂದ ಬಳಲುತಿದ್ದು, ದೊಡ್ಡನಗೌಡ ಮಾತನಾಡಿದ್ದಾನೆ. ಲೋಕ ಕಲ್ಯಾಣಕ್ಕಾಗಿ ಹಾಗೂ ಸರ್ವರಿಗೂ ನೆಮ್ಮದಿ ನೀಡಲೆಂದು ತನ್ನ ಮನೆ ದೇವರಾದ, ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯಲ್ಲಿ ಬೇಡುವುದಾಗಿ. ಅದಕ್ಕಾಗಿ ಕಾಲ್ನಡಿಗೆ ಮೂಲಕ ಕೊಟ್ಟೂರಿಗೆ ತೆರಳುತ್ತಿರುವುದಾಗಿ ದೊಡ್ಡನಗೌಡ ನುಡಿದಿದ್ದಾನೆ. ಉಪವಾಸ ವ್ರತದೊಂದಿಗೆ ಸತತ ಐದು ದಿನಗಳ ಕಾಲ ಏಕಾಂಗಿಯಾಗಿ, ಆಂಧ್ರ ಪ್ರದೇಶದಿಂದ ಆರಂಭಿಸಿದ ಕಾಲ್ನಡಿಗೆ ಯಾತ್ರೆ. ದಿನದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ದಿನ ಒಂದಕ್ಕೆ 30-40 ಕಿಮೀ ಕ್ರಮಿಸುವುದಾಗಿ ಅವರು ತಿಳಿಸಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಎಡ ಬಿಡದೆ ನಡೆಯುವ ದೊಡ್ಡನಗೌಡ, ಪಾದರಕ್ಷೆಯಿಲ್ಲದೇ ಏಕಾಂಗಿ 150.ಕಿಮೀ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ. ಇವರ ಈ ಭಕ್ತಿಯ ಪರಾಕಾಷ್ಠೆಗೆ ಆಧ್ಯಾತ್ಮ ಚಿಂತಕರು ಹಾಗೂ ಆಸ್ಥಿಕರು, ಪ್ರಶಸಂನೆ ವ್ಯಕ್ತಪಡಿಸಿದ್ದಾರೆ. ಆಂಧ್ರ ಮೂಲದ ಯುವ ರೈತ ಶ್ರೀಗುರು ಕೊಟ್ಟೂರೇಶ್ವರರ ಭಕ್ತರಾದ, ದೊಡ್ಡನಗೌಡರ ಸಂಪರ್ಕ ಸಂಖ್ಯೆ 93468 21823 ಇದ್ದು. ಇವರು ಸದ್ಯ ಡಿ.24 ರಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣದ ಶ್ರೀಗಣೇಶ ಗುಡಿಯಿಂದ ಕೊಟ್ಟೂರು ಕಡೆ ಕಾಲ್ನಡಿಗೆ ಯಾತ್ರೆ ಬೆಳಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ