ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ.

ಕೂಡ್ಲಿಗಿ ಸಪ್ಟೆಂಬರ್.15

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ, ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದ ಬಯಲು ರಂಗಮಂದಿರದಲ್ಲಿ. ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ, ಮತ್ತು ಎಲ್ಲಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ. ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಅಂಗವಾಗಿ, ” ಭಾರತದ ಸಂವಿಧಾನ ಪೀಠಿಕೆ ಜಾಗತಿಕ ವಾಚನ, ಕಾರ್ಯಕ್ರಮವನ್ನು. ಕ್ಷೇತ್ರದ ಶಾಸಕರಾದ ಡಾ”ಎನ್.ಟಿ. ಶ್ರೀನಿವಾಸ್ ರವರು ಉದ್ಘಾಟಿಸಿದರು, ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ”ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ,

ಸಂವಿಧಾನದ ರಚನೆ ಹಾಗೂ ಆಶಯ ಕುರಿತು ಮಾತನಾಡಿದರು.‌ ಭಾರತದ ಸಂವಿಧಾನ ಇಡೀ ಪ್ರಪಂಚದ ಇತಿಹಾಸದಲ್ಲಿ, ಸಂವಿಧಾನ ಅತ್ಯಂತ ಮೌಲ್ಯಯುತವಾದದ್ದಾಗಿದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಡಾ”ಬಿ. ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು. ನಾವು ಮುಂಬರುವ ಪೀಳಿಗೆಯವರಿಗೆ, ಅದರ ಮಹತ್ವವನ್ನು ಅರ್ಥೈಸಿ ಎತಾವತ್ತಾಗಿ ಭಾರತೀಯರಾದ ನಾವುಗಳು ಅರ್ಪಿಸಿ ಕೊಂಡಿದ್ದೇವೆ. ಮತ್ತು ಭಾರತೀಯ ಪ್ರಜೆಗಳಾದ ನಾವೆಲ್ಲರೂ ಒಮ್ಮತದಿಂದ, ಸೌಹಾರ್ದತೆಯಿಂದ ಹಾಗೂ ಬ್ರಾತೃತ್ವ ತತ್ವದ ನೆಲೆಗಟ್ಟಿನಲ್ಲಿ ಜೀವಿಸೋಣ ಎಂದರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ, ಭಾರತದ ಸಂವಿಧಾನ ಪೀಠಿಕೆಯ ಭಾಗವನ್ನು ಪ್ರಥಮ ಬಾರಿಗೆ ವಾಚನ ಮಾಡುತ್ತಿರುವುದು. ಜಗತ್ತಿನಲ್ಲಿಯೇ ಈ ದಿನವನ್ನು ಸುವರ್ಣ ಅಕ್ಷರಗಳಲ್ಲಿ, ಅತ್ಯಂತ ಹೆಮ್ಮೆಯಿಂದ ಬರೆದಿಡಬೇಕಾಗಿದೆ ಎಂದರು.ಹಾಗೆ ಈ ಸಂದರ್ಭದಲ್ಲಿ ಪಟ್ಟಣದ ಕೆಲವು ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಂವಿಧಾನ ಪೀಠಿಕೆಯನ್ನು ಏಕಕಾಲದಲ್ಲಿ ಓದಲು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವೇದಿಕೆಯಲ್ಲಿ ತಹಶಿಲ್ದಾರರಾದ ಟಿ.ಜಗದೀಶ, ಹಾಗೂ ಸಮಾಜ ಕಲ್ಯಾಣಾಧಿಕಾರಿ ಜಗದೀಶ ದಿಗಡೂರು, ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್, ಸಿಡಿಪಿಓ ನಾಗನಗೌಡ್ರು, ಸರ್ಕಾರಿ ಸಂಯುಕ್ತ ಕಾಲೇಜಿನ ಪ್ರಾಂಶುಪಾಲರಾದ ಕೊತ್ಲಮ್ಮ, ಹಿರೇಮಠ ವಿದ್ಯಾಪೀಠ ಕಾಲೇಜಿನ ಪ್ರಾಂಶುಪಾಲರಾದ ಅರವಿಂದ್ ಕುಲಕರ್ಣಿ, ಝಡ್ ಪಿ ಮಲ್ಲಿಕಾರ್ಜುನ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಆದ ಫಿರೋಜ್ ಖಾನ್ ದಲಿತ ಸಂಘರ್ಷ ಸಮಿತಿಯ ತಾಲೂಕ್ ಸಂಚಾಲಕರಾದ ಡಿಹೆಚ್ ದುರ್ಗೇಶ್ ವಕೀಲರು, ಚಲವಾದಿ ಮಹಾಸಭಾ ರಾಜ್ಯ ಕಾರ್ಯದರ್ಶಿಯಾದ ಉಮೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಎಸ್ ದುರ್ಗೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾವಲಿ ಶಿವಪ್ಪ ನಾಯಕ್, ಸದಸ್ಯರಾದ ವೆಂಕಟೇಶ್, ಸೇರಿದಂತೆ. ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ಶಾಲಾ ಕಾಲೇಜಿನ ಬೋಧಕರು ಸಿಬ್ಬಂದಿಯವರು. ವಿದ್ಯಾರ್ಥಿಗಳು, ಗಣ್ಯ ಮಾನ್ಯರು, ಪಟ್ಟಣದ ನಾಗರೀಕರು. ಪಟ್ಟಣ ಪಂಚಾಯ್ತಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿಧ ಪಕ್ಷಗಳ ಪ್ರಮುಖರು. ಪತ್ರಕರ್ತರು ಹಾಗೂ ನಾಗರೀಕರು ಪಾಲ್ಗೊಂಡಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button