ಆಧಾರ ಅಪ್ಡೇಟ್ ಇನ್ನೂ ಸುಲಭ, ಈ ದಾಖಲೆಗಳು ಅವಶ್ಯಕತೆ ಇನ್ಮುಂದೆ ಕೆಲಸಕ್ಕೆ ಬರಲ್ಲ…!

ಆಧಾರ ಅಪ್ಡೇಟ್ ಇನ್ನೂ ಸುಲಭ, ಈ ದಾಖಲೆಗಳು ಅವಶ್ಯಕತೆ ಇನ್ಮುಂದೆ ಕೆಲಸಕ್ಕೆ ಬರಲ್ಲ...!

ಆಧಾರ ಅಪ್ಡೇಟ್ ಇನ್ನೂ ಸುಲಭ, ಈ ದಾಖಲೆಗಳು ಅವಶ್ಯಕತೆ ಇನ್ಮುಂದೆ ಕೆಲಸಕ್ಕೆ ಬರಲ್ಲ…!

 ಆಧಾರ್ ಕಾರ್ಡ್‌ನಲ್ಲಿನ ವಿಳಾಸವನ್ನು ನವೀಕರಿಸಲು ಆಧಾರ್ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು. ಇದಕ್ಕೆಲ್ಲಾ ಪರಿಹಾರ ಸಿಕ್ಕಿದೆ. ಇನ್ಮುಂದೆ ಆಧಾರ್​ ಅಪ್​ಡೇಟ್​ ಮಾಡೋದು ಬಹಳ ಸುಲಭ.

ಆಧಾರ್ ಕಾರ್ಡ್ ಒಬ್ಬ ಭಾರತೀಯನ ಪ್ರಮುಖ ದಾಖಲೆಯಾಗಿದೆ. ಆಧಾರ್‌ನಲ್ಲಿ ನಮೂದಿಸಿದ ಮಾಹಿತಿಯನ್ನು ನವೀಕರಿಸಬಹುದಾಗಿದೆ . ಇನ್ನೂ ಇದನ್ನು ಹಲವು ಕಡೆ ಬಳಸಲಾಗುತ್ತದೆ.ಇದಲ್ಲದೆ ನಮ್ಮ ಆಧಾರ್ ಕಾರ್ಡ್ , ಪಡಿತರ ಚೀಟಿ, ಪ್ಯಾನ್ ಕಾರ್ಡ್, ಬ್ಯಾಂಕ್ , ವೋಟರ್ ಐಡಿ ಮತ್ತು ಇತರ ಕೆಲವು ದಾಖಲೆಗಳು ಮತ್ತು ಖಾತೆಗಳೊಂದಿಗೆ ಅದನ್ನು ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ.

ಆಧಾರ್ ಕಾರ್ಡ್‌ನಲ್ಲಿನ ವಿಳಾಸವನ್ನು ನವೀಕರಿಸಲು ಆಧಾರ್ ಕಾರ್ಡ್ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿತ್ತು. ಇದರ ದೃಷ್ಟಿಯಿಂದ ಈಗ UIDAI ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸುವ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ.

ಈಗ ಆಧಾರ್ ಬಳಕೆದಾರರು ತಮ್ಮ ವಿಳಾಸವನ್ನು ಆಧಾರ್ ಕಾರ್ಡ್‌ನಲ್ಲಿ ನವೀಕರಿಸುವ ಅನಿವಾರ್ಯತೆ,ಅವಶ್ಯಕತೆ ಇದ್ದು ಯಾವುದೇ ದಾಖಲೆಯನ್ನು ಹೊಂದಿಲ್ಲದಿದ್ದರೂ ಸಹ ವಿಳಾಸವನ್ನು ನವೀಕರಿಸಬಹುದು ಎಂದು UIDAI ವರದಿ ಮಾಡಿದೆ

  • ಆಧಾರ್ ಬಳಕೆದಾರರು ತಮ್ಮ ವಿಳಾಸವಾಗಿ ಕುಟುಂಬದ ಮುಖ್ಯಸ್ಥರ ವಿಳಾಸವನ್ನು ಮಾತ್ರ ನೀಡಬಹುದು. UIDAI ಯ ಹೊಸ ಪ್ರಕ್ರಿಯೆಯ ಪ್ರಕಾರ, ಕುಟುಂಬದ ಮುಖ್ಯಸ್ಥರ ಅನುಮೋದನೆಯ ನಂತರ ಆಧಾರ್‌ನಲ್ಲಿರುವ ವಿಳಾಸವನ್ನು ನವೀಕರಿಸಬಹುದಾಗಿದೆ.
  • UIDAI ನ ಈ ಹೊಸ ನಿಯಮದಿಂದಾಗಿ ಮಕ್ಕಳು, ಹೆಂಡತಿಯ ಹಾಗೂ ಮನೆಯ ಸದಸ್ಯರ ಆಧಾರ್ ವಿಳಾಸವನ್ನು ನವೀಕರಿಸುವುದು ಸುಲಭವಾಗಿದೆ. ಈಗ ಕುಟುಂಬದ ಮುಖ್ಯಸ್ಥರ ವಿಳಾಸದಲ್ಲಿ ಆಧಾರ್ ಅನ್ನು ನವೀಕರಿಸಲು ಸಾಧ್ಯವಿದೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು 30 ದಿನಗಳನ್ನು ತೆಗೆದುಕೊಳ್ಳುತ್ತದೆ.

ಈ ಸೌಲಭ್ಯವು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದು ನಾವೂ ನಮ್ಮ ಮೊಬೈಲ್ ನಲ್ಲಿಯೇ ಅಡ್ರೆಸ್ ಅಪ್ಡೇಟ್ ಕೂಡಾ ಮಾಡಬಹುದು.

ಅನೇಕ ಜನರ ಬಳಿ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸಲು ದಾಖಲೆಗಳಿಲ್ಲ. ಈಗ ಅವರು ತಮ್ಮ ಮನೆಯ ಮುಖ್ಯಸ್ಥ ಅಥವಾ ತಂದೆಯ ಹೆಸರಿನಲ್ಲಿ ತಮ್ಮ ವಿಳಾಸವನ್ನು ನವೀಕರಿಸಬಹುದು. ಈ ನಿಯಮ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿಯಾಗಲಿದೆ. ಈ ಹೊಸ ನಿಯಮದಿಂದ ಮಕ್ಕಳು, ಪತ್ನಿ ಮತ್ತು ಪೋಷಕರು ಹೆಚ್ಚು ಪ್ರಯೋಜನ ಪಡೆಯುತ್ತಾರೆ

ಆಧಾರ್ ದುರುಪಯೋಗ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈಗ ನೀವು ನಿಮ್ಮ ಆಧಾರ್ ಕಾರ್ಡ್ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ನೀವು ಆನ್‌ಲೈನ್‌ನಲ್ಲಿ ಆಧಾರ್ ಇತಿಹಾಸವನ್ನು ಪರಿಶೀಲಿಸಬಹುದು.

ಇದಕ್ಕಾಗಿ ಮೊದಲು ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಹೋಗಿ. ಇಲ್ಲಿ ನನ್ನ ಆಧಾರ್ ಆಯ್ಕೆಯನ್ನು ಆಯ್ಕೆಮಾಡಿ. ಆಧಾರ್ ಸೇವೆಗಳ ಆಯ್ಕೆಯ ಅಡಿಯಲ್ಲಿ, ನೀವು ಆಧಾರ್ ದೃಢೀಕರಣ ಇತಿಹಾಸವನ್ನು ಬರೆಯುವುದನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.ಹೊಸ ವಿಂಡೋ ತೆರೆಯುತ್ತದೆ.

ದು ಜನಸಾಮಾನ್ಯರಿಗೆ ತಮ್ಮ ಸಮಯ, ದಾಖಲೆಯನ್ನು ಹುಡುಕುವ ತಾಳ್ಮೆ, ಖರ್ಚು ಉಳಿತಾಯ ಮಾಡಿದಂತಾಗುತ್ತದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button