ವಲಸೆ ಗ್ರಾಮದಲ್ಲಿ ಡಾ, ಬಿ ಆರ್ ಅಂಬೇಡ್ಕರ್ ಜಯಂತ್ಯೋತ್ಸವ ಆಚರಣೆ.
ತಳಕು ಜು.09

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವಲಸೆ ಗ್ರಾಮದಲ್ಲಿ ಇಂದು ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇಯ ಜಯಂತಿಯ ಆಚರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿ ಜಾಂಬವ ಮಠ ಪೀಠಾಧಿಪತಿಗಳು ಆದ ಶ್ರೀ ಶ್ರೀ ಷಡಕ್ಷರಮುನಿ ಸ್ವಾಮಿಗಳು ವಹಿಸಿದ್ದರು, ಗಾಯಕ ಮುತ್ತುರಾಜ್ ರವರು ಕ್ರಾಂತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ನಂತರ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷಡಕ್ಷರ ಮುನಿ ಸ್ವಾಮಿಗಳು ಇಂದಿನ ಯುವ ಪೀಳಿಗೆಯ ಯುವಕರು ಮತ್ತು ವಿದ್ಯಾರ್ಥಿಗಳು ದೇವಸ್ಥಾನಗಳ ಗಂಟೆಗಳ ಶಬ್ದ ಕೇಳಬೇಡಿ, ಶಾಲೆಗಳ ಗಂಟೆಗಳ ಶಬ್ದ ಕೇಳಿ ಎಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ತಿಳಿಸಿದರು.ನಂತರ ಕೋಡಿಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು ಆದ ಶ್ರೀಯುತ ಟಿ.ಶಿವಮೂರ್ತಿ ರವರು ಕಾರ್ಯಕ್ರಮಕ್ಕೆ ಭಾಗವಹಿಸಿದ ಸರ್ವರಿಗೂ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು, ಕೆ.ಪಿ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರು ಆದ ಶ್ರೀಯುತ ಮಲ್ಲೇಶಪ್ಪ ರವರು ಮಾತನಾಡಿ ವಿದ್ಯಾರ್ಥಿಗಳು ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಉನ್ನತ ಶಿಕ್ಷಣಕ್ಕೆ ನೀಡಿ ನಿಮ್ಮ ಜೀವನ ರೂಪಿಸಿ ಕೊಳ್ಳಬೇಕು ಎಂದು ತಿಳಿಸಿದರು, ನಂತರ ಪ್ರಗತಿಪರ ಚಿಂತಕರು ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಲಿಂಗಪ್ಪ ರವರು ಮಾತನಾಡಿ ಅಂಬೇಡ್ಕರ್ ರವರು ನಮಗೆ ಶಿಕ್ಷಣ ಸಂಘಟನೆ, ಹೋರಾಟ ಎಂದು ಮೂರು ಶಕ್ತಿಗಳನ್ನು ನೀಡಿದ್ದಾರೆ ಇತ್ತೀಚಿನ ದಿನಗಳಲ್ಲಿ ನಮ್ಮ ದಲಿತ ಸಮುದಾಯದ ಯುವಕರು ಸಂಘಟನೆ, ಹೋರಾಟಗಳಲ್ಲಿ ಅತೀ ಹೆಚ್ಚು ಆಸಕ್ತಿ ಹೊಂದಿದ್ದಾರೆಯೇ ಹೊರತು ಶಿಕ್ಷಣಕ್ಕೆ ಅತೀ ಹೆಚ್ಚು ಒತ್ತು ನೀಡದಿರುವುದು ಮತ್ತು ಅವರ ಜೀವನದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳದೇ ಇರುವುದು ವಿಷಾದನೀಯ ಸಂಗತಿ ಎಂದರು.ಆದಿ ಜಾಂಬವ ಅಭಿವೃದ್ಧಿ ನಿಗಮದ ಕರ್ನಾಟಕ ರಾಜ್ಯ ಅಧ್ಯಕ್ಷರು ಆದ ಶ್ರೀಯುತ ಜಿ.ಎಸ್. ಮಂಜುನಾಥ್ ರವರು ಡಾ.ಬಿ.ಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮ್ಮ ದಲಿತ ಸಮುದಾಯದ ಮಕ್ಕಳು ಹೆಚ್ಚಿನ ಪ್ರಾಶಸ್ತ್ಯವನ್ನು ಗುಡಿ ಗೋಪುರ, ದೇವಸ್ಥಾನಗಳಿಗೆ ಹೋಗುವುದನ್ನು ಬಿಟ್ಟು ಸರ್ಕಾರ ನೀಡುವಂತಹ ಎಲ್ಲಾ ಯೋಜನೆಗಳನ್ನು ಪಡೆದು ಕೊಂಡು ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳಬೇಕು, ಗ್ರಂಥಾಲಯಗಳಿಗೆ ಹೋಗಿ ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿ ಕೊಳ್ಳಬೇಕು ಯಾಕೆಂದರೆ ಬಡತನವನ್ನು ಶಿಕ್ಷಣ ದಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ,

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಮತ್ತು ಆಶಯಗಳನ್ನು ಈಡೇರಿಸಲು ಪ್ರತಿಯೊಂದು ಗ್ರಾಮದ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ದ್ರಾಕ್ಷಾರಸ ಮತ್ತು ವೈನ್ ಬೋರ್ಡ್ ಕರ್ನಾಟಕದ ರಾಜ್ಯ ಅಧ್ಯಕ್ಷರು ಆದ ಡಾ.ಬಿ.ಯೋಗೇಶ್ ಬಾಬು ರವರು ಮಾತನಾಡಿ ಅಂಬೇಡ್ಕರ್ ರವರು ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಅವಮಾನ, ಕಷ್ಟ, ನೋವು ನಲಿವು ಹೋರಾಟಗಳನ್ನು ಮಾಡಿ ನಮ್ಮ ಇಡೀ ಜಗತ್ತೇ ಒಪ್ಪುವಂತಹ ಶ್ರೇಷ್ಠ ಸಂವಿಧಾನವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ತಿಳಿಸಿದರು, ಅಲ್ಲದೆ ಚಳ್ಳಕೆರೆ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆದ ಶ್ರೀ ಕೆ.ವೀರಭದ್ರಯ್ಯ ಮಾತನಾಡಿ ಇತ್ತೀಚಿನ ಯುವಕರು ಹಬ್ಬ ಹರಿದಿನ ಜಾತ್ರೆ ಉತ್ಸವಗಳನ್ನು ಕಡಿಮೆ ಮಾಡಿ ತಮ್ಮ ಮುಂದಿನ ಜೀವನದ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ತಿಪ್ಪಕ್ಕ ಮಲ್ಲೇಶ್ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು ವಹಿಸಿದ್ದರು ಇವರು ಮಾತನಾಡಿ ಸಂವಿಧಾನದ ಮೂಲ ಉದ್ದೇಶಗಳನ್ನು ಪ್ರತಿಯೊಬ್ಬ ಪ್ರಜೆಯು ಅರ್ಥ ಮಾಡಿ ಕೊಂಡು ಡಾ. ಬಿ.ಆರ್ ಅಂಬೇಡ್ಕರ್ ರವರ ಆಶಯಗಳನ್ನು ಸಾಕಾರ ಗೊಳಿಸಲು ದೇಶದ ಪ್ರತಿಯೊಬ್ಬರೂ ಆದ್ಯತೆ ನೀಡಿ ಗೌರವಿಸ ಬೇಕು ಎಂದು ತಿಳಿಸಿದರು. ನಂತರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವಕೀಲರು ಹಾಗೂ ಪ್ರಗತಿಪರ ಚಿಂತಕರು ಆದ ಶ್ರೀಯುತ ಬಿ.ಎಂ, ಹನುಮಂತಪ್ಪ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಆದ ಎಚ್. ಸಮರ್ಥ ರಾಯ್ , ಡಿ.ಎಸ್.ಎಸ್ ಸಂಚಾಲಕರು ಆದ ಟಿ.ವಿಜಯ್ ಕುಮಾರ್, ಚಳ್ಳಕೆರೆ ಆರೋಗ್ಯ ಇಲಾಖೆ ಕುದಾಪುರ ತಿಪ್ಪೇಸ್ವಾಮಿ, ಡಿ.ಎಸ್.ಎಸ್ ಹಾಗೂ ಚಳ್ಳಕೆರೆ ನಗರ ಸಭೆಯ ನಾಮ ನಿರ್ದೇಶನ ಸದಸ್ಯರು ಆದ ಆರ್.ವೀರಭದ್ರಪ್ಪ,

ಎಸ್.ಕೆ ಸುರೇಶ್ ವಕೀಲರು ಬಂಜಗೆರೆ, ಎಂ.ವೆಂಕಟೇಶ್, ಮಲ್ಲೇಶಪ್ಪ,ವಿ.ರವಿಕುಮಾರ್, ವೀರಣ್ಣ ಬಂಜಗೆರೆ, ಎನ್.ರಾಜಣ್ಣ, ರುದ್ರೇಶ್, ಎನ್.ಸುರೇಶ್, ಲೋಕೇಶ್,ಹಾಗೂ ವಲಸೆ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು ಆದ ಶ್ರೀ ಟಿ ಪ್ರದೀಪ್,ಗೌರವ ಅಧ್ಯಕ್ಷರಾದ ತಿಪ್ಪೇರುದ್ರಪ್ಪ.ಪಿ, ಉಪಾಧ್ಯಕ್ಷರಾದ ಮಹೇಶ್. ಟಿ, ಮತ್ತು ಎಂ.ರುದ್ರಪ್ಪ, ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ್ ಕುಮಾರ್.ವಿ.ಕೆ, ಸಹ ಕಾರ್ಯದರ್ಶಿ ಮಲ್ಲೇಶ್. ಟಿ ಖಜಾಂಚಿ ಮಂಜುನಾಥ್.ವಿ.ಎಂ, ಸಂಚಾಲಕರಾದ ಚಂದ್ರಣ್ಣ.ಟಿ ಮತ್ತು ಚಂದ್ರಣ್ಣ.ಎಲ್, ನಿರ್ದೇಶಕರಾದ ಮಂಜುನಾಥ್.ಎನ್.ಪ್ರವೀಣ್ ಕೆ, ಮಹೇಶ್, ನಾಗೇಶ್ ಜಿ.ಆರ್, ರಮೇಶ್.ಎಂ, ಪ್ರದೀಪ್ ಕುಮಾರ್, ರಾಮಣ್ಣ.ಎಂ, ಗುರುಮೂರ್ತಿ, ಯಲ್ಲಪ್ಪ, ಮಹೇಶ್, ಕುಮಾರ್ , ಪ್ರಕಾಶ್, ಡಿ.ಗುರುಸ್ವಾಮಿ, ಡಿ.ನಿಂಗಣ್ಣ, ವಿ.ಜಿ.ಕಿರಣ, ತಿಪ್ಪೇರುದ್ರಪ್ಪ, ಕರಿಬಸವ,ವಲಸೆ ಗ್ರಾಮದ ಹಟ್ಟಿ ಯಜಮಾನರು ಆದ ರುದ್ರಪ್ಪ, ಮಹಾಂತೇಶ್, ಕಳಸಪ್ಪ.ಜಿ.ವಿ, ಲಕ್ಷ್ಮಣ, ಮುನಿಯಪ್ಪ, ಜಯಣ್ಣ, ತಿಪ್ಪೇಸ್ವಾಮಿ. ಗುರುಮೂರ್ತಿ. ಎನ್, ಮಾರಣ್ಣ, ಪೂಜಾರ್ ತಿಪ್ಪೇಸ್ವಾಮಿ, ಮಂಜುನಾಥ್, ಜಂಗಮಯ್ಯ, ಪರಮೇಶ್ವರಪ್ಪ, ಯಲ್ಲಪ್ಪ, ಕರಿಯಣ್ಣ, ತಿಪ್ಪೇಸ್ವಾಮಿ, ಎಂ.ನಾಗರಾಜ್ ಉಪಸ್ಥಿತರಿದ್ದರು. ಸರ್ವರನ್ನು ಚಂದ್ರು.ಟಿ ಸ್ವಾಗತಿಸಿದರು, ಕು.ಕಾವೇರಿ ಮಂಜಮ್ಮ ನಿರೂಪಿಸಿದರು, ಪ್ರದೀಪ್ ಕುಮಾರ್ ವಿ.ಕೆ ವಂದಿಸಿದರು. ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘ ಕೋಡಿಹಳ್ಳಿ, ತಿಮ್ಮನಹಳ್ಳಿ ,ಬೇಡರೆಡ್ಡಿ ಹಳ್ಳಿ,ಬಂಜಗೆರೆ, ಹೊನ್ನೂರು ಹೊಸಹಳ್ಳಿ, ಹಿರೇಹಳ್ಳಿ, ತಳಕು ಇನ್ನಿತರೆ ನೆರೆ ಹೊರೆಯ ಎಲ್ಲಾ ಸಂಘಗಳ ಪದಾಧಿಕಾರಿಗಳು ಸದಸ್ಯರು, ಯುವಕರು, ಯಜಮಾನರು, ಸಮಸ್ತ ನಾಗರಿಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ವರದಿ : ಕೋಡಿಹಳ್ಳಿ ಶಿವಮೂರ್ತಿ. ಟಿ , ಚಿತ್ರದುರ್ಗ.