“ಕೆಜಿಎಫ್-3” ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ವಿಜಯ್ ಕಿರಗಂದೂರು…!
ಹೌದು, ಇದೀಗ ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾ ಮುಗಿದಿದ್ದು ಇದರ ಸರಣಿಯಲ್ಲಿಯೇ ಕೆಜಿಎಫ್ 3 ಚಿತ್ರವು ಸಾಗಲಿದೆ. ಕೆಜಿಎಫ್ ಸಿನೆಮಾ ಒಟ್ಟು ಐದು ಭಾಗದಲ್ಲಿ ಬರಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-3 ಚಿತ್ರ ರಿಲೀಸ್ ಯಾವಾಗ ಅನ್ನೋ ಕುತೂಹಲ ಯಶ್ ಅಭಿಮಾನಿಗಳಲ್ಲಿ ಅಷ್ಟೇ ಅಲ್ಲದೆ ಇಡೀ ಭಾರತವೇ ಕಾಯ್ದು ಕೂತಿದ್ದು , ಈಗ ಇದಕ್ಕೆ ಉತ್ತರ ಸಿಕ್ಕಿದೆ. ಇದರ ಬಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ. ಆದರೆ ವರ್ಷಕ್ಕೆ ಒಂದೇ ಚಿತ್ರ ಅನ್ನೋಮಟ್ಟಿಗೆ ಯಶ್ ಫುಲ್ ಡೇಡಿಕೇಟೆಡ್ ಆಗಿಯೇ ಚಿತ್ರ ಮಾಡುತ್ತಿರಿದ್ದಾರೆ.
ಕೆಜಿಎಫ್-1 ಮತ್ತು ಕೆಜಿಎಫ್-2 ಚಿತ್ರ ಆದ್ಮೇಲೆ ಕೆಜಿಎಫ್-3 ಚಿತ್ರ ಬರುತ್ತದೆ ಅನ್ನೋ ಮಾತು ಕೂಡ ಇದೆ. ಅದಕ್ಕೆ ಉತ್ತರ ಕೂಡ ಈಗ ಸಿಕ್ಕಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈ ಚಿತ್ರದ ಬಗ್ಗೆ ಈಗ ಹೇಳಿದ್ದಾರೆ.ಕೆಜಿಎಫ್ ಚಿತ್ರದ ಮೂರನೇ ಸರಣಿ ಚಿತ್ರ 2025ಕ್ಕೆ ಸೆಟ್ಟೇರಲಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು “ದೈನಿಕ್ ಭಾಸ್ಕರ್” ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ.
ಐದೇನೆ ಭಾಗವಾದ್ಮೇಲೆ ಹೀರೋ ಬದಲಾಗೋ ಸಾಧ್ಯತೆನೂ ಇದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಕೆಜಿಎಫ್-3 ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದ ಕೆಲಸದಲ್ಲಿಯೆ ಬ್ಯುಸಿಯಿದ್ದಾರೆ. ಇದಾದ್ಮೇಲೆ ಜೂನಿಯರ್ ಎನ್ಟಿಆರ್ ಚಿತ್ರವನ್ನ ಪ್ರಶಾಂತ್ ನೀಲ್ ಮಾಡಲಿದ್ದಾರೆ.ಪ್ರಶಾಂತ್ ನೀಲ್ ಈಗಾಗಲೇ ಒಪ್ಪಿಕೊಂಡಿರೋ ಚಿತ್ರ ಮುಗಿಸೋಕೆ 2025 ಆಗುತ್ತದೆ. ಆಗಲೇ ಕೆಜಿಎಫ್-3 ಸಿನಿಮಾ ಸೆಟ್ಟೇರುತ್ತದೆ. 2026ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಅಂತಲೂ ವಿಜಯ್ ಕಿರಗಂದೂರು ಪತ್ರಿಕೆಗೆ ಹೇಳಿಕೊಂಡಿದ್ದಾರೆ.