ಸೈನ್ಸ್ ಸಿಟಿ ಚಳ್ಳಕೆರೆಯಲ್ಲಿ ಪವರ್ ಕಾಫೀ ಬಾರ್ ಅಂಡ್ ಕೂಲ್ ಪಾಯಿಂಟ್.

ಕೋಡಿಹಳ್ಳಿ ಏಪ್ರಿಲ್.02

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿತ್ರದುರ್ಗದ ಮುಖ್ಯ ರಸ್ತೆಯಲ್ಲಿ ವಿಠ್ಠಲ ನಗರದ ಐಶ್ವರ್ಯ ಬಾರ್ ಅಂಡ್ ರೆಸ್ಟೋರೆಂಟ್ ಹತ್ತಿರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸವಿ ನೆನಪಿಗಾಗಿ ನೂತನವಾಗಿ ಆರಂಭವಾದ ಪವರ್ ಕಾಫೀ ಬಾರ್ ಅಂಡ್ ಕೂಲ್ ಪಾಯಿಂಟ್ ಗೆ ವಿಜ್ಞಾನಿ ನಗರದ ಜನತೆಯು ಒಮ್ಮೆ ಭೇಟಿ ನೀಡಬೇಕಾಗಿ ತಮ್ಮಲ್ಲಿ ವಿನಂತಿ.ಬೇಸಿಗೆಯ ದಗದಗಿಸುವ ಈ ಸುಡು ಬಿಸಿಲಿನಲ್ಲಿ ತುಸು ಹೊತ್ತು ನಮ್ಮ ದೇಹವನ್ನು ತಂಪಾಗಿಸುವ ತಾಣವೆಂದರ ಅದುವೇ ಪವರ್ ಕಾಫೀ ಬಾರ್ ಅಂಡ್ ಕೂಲ್ ಪಾಯಿಂಟ್ ಇಲ್ಲಿ ಒಳ್ಳೆಯ ಶುಚಿ ರುಚಿ ಯಾದ ಟೀ, ಕಾಫೀ,ಸ್ಪೆಷಲ್ ಬೆಲ್ಲದ ಟೀ, ತಂಪಾದ ಮಸಾಲ ಮಜ್ಜಿಗೆ,ಲೆಮನ್ ಟೀ,ಕೂಲ್ ಡ್ರಿಂಕ್ಸ್,ಇನ್ನಿತರೆ ತಂಪಾದ ಪಾನೀಯಗಳು ದೊರೆಯುತ್ತವೆ.ಅಲ್ಲದೆ ಇಲ್ಲಿ ಅತ್ಯಂತ ನುರಿತ ಹಾಗೂ ಒಳ್ಳೆಯ ಗುಣಮಟ್ಟದ ಮಲೆನಾಡಿನ ಮಾಲ್ಗುಡಿಸ್ ಟೆಸ್ಟ್ ನೀಡುವಂತಹ ತಾಜಾ ಸ್ಪೆಷಲ್ ಟೀ, ಕಾಫೀ, ಶುಂಠಿ ಕಷಾಯ,ಶುಂಠಿ ಟೀ,ಶೇಕ್ ಮಿಲ್ಕ್,ಬಾದಾಮಿ ಹಾಲು ದೊರೆಯುತ್ತದೆ.

ಹಾಗಾಗಿ ಚಳ್ಳಕೆರೆಯ ಸಾರ್ವಜನಿಕರು ,ಉದ್ಯಮಿಗಳು,ಯುವಕರು,ವಿದ್ಯಾರ್ಥಿಗಳು,ವಾಯು ವಿಹಾರಿಗಳು ,ಸ್ನೇಹಿತರು,ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪವರ್ ಕಾಫೀ ಬಾರ್ ಅಂಡ್ ಕೂಲ್ ಪಾಯಿಂಟ್ ಮಾಲೀಕರಾದ ಶ್ರೀಯುತ ಶ್ರೀಧರ್.ಏಚ್ ಕೋಡಿಹಳ್ಳಿ ಇವರು ಚಳ್ಳಕೆರೆಯ ಎಲ್ಲ ಮಹಾ ಜನತೆಯಲ್ಲಿ ಮನವಿ ಮಾಡಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಶ್ರೀಮತಿ ಪಾರ್ವತಮ್ಮ ಹನುಮಂತಪ್ಪ ನವರ ದ್ವಿತೀಯ ಪುತ್ರರಾದ ಶ್ರೀಯುತ ಶ್ರೀಧರ್.ಏಚ್ ಕೋಡಿಹಳ್ಳಿ ಇವರು ಅತ್ಯಂತ ತುಂಬಾ ಬಡತನದಲ್ಲಿ ಬೆಳೆದು ಬಂದವರು ಮತ್ತು ಇವರು ಮೊದಲಿಗೆ ಬೆಣ್ಣೆ ನಗರಿ ಎಂದೇ ಖ್ಯಾತಿ ಗಳಿಸಿರುವ ದಾವಣಗೆರೆಯಲ್ಲಿ ಇವರು ತಮ್ಮ ಪವರ್ ಕಾಫೀ ಬಾರ್ ಅಂಡ್ ಕೂಲ್ ಪಾಯಿಂಟ್ ಈ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿ ನಡೆಸಿ ಜನ ಮೆಚ್ಚುಗೆಯನ್ನು ಗಳಿಸಿದ್ದರು, ಅಲ್ಲದೆ ಅತ್ಯಂತ ಉತ್ತಮ ಅನುಭವಿ ಹಾಗೂ ನುರಿತ ಒಳ್ಳೆಯ ಗುಣಮಟ್ಟದ ಟೆಸ್ಟ್ ನೀಡಿ ಜನ ಮನ್ನಣೆ ಪಡೆದಿರುತ್ತಾರೆ ಹಾಗಾಗಿ ಇವರು ತಮ್ಮ ಮೂಲ ಚಳ್ಳಕೆರೆಯಲ್ಲಿ ಈ ಉದ್ಯಮವನ್ನು ಆರಂಭಿಸಿದ್ದಾರೆ.

ಇದಕ್ಕೆ ಕರ್ನಾಟಕ ರತ್ನ,ಯುವಕರ ಸ್ಪೂರ್ತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸ ತಂದಿದೆ ಹಾಗೂ ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವುದಕ್ಕೆ ಅವರ ಹೆಸರಿನಲ್ಲಿ ಇಂತಹ ಅನೇಕ ಉದ್ಯಮಗಳನ್ನು ನಡೆಸುತ್ತಿರುವ ಹಾಗೂ ಜನಪರ ಕೆಲಸಗಳನ್ನು ಮಾಡುತ್ತಿರುವ ಅಭಿಮಾನಿಗಳೇ ಸಾಕ್ಷಿ ಎಂದರೆ ತಪ್ಪಾಗಲಾರದು, ಅಲ್ಲದೆ ಚಳ್ಳಕೆರೆಯ ಸಾರ್ವಜನಿಕರು,ಉದ್ಯಮಿಗಳು, ಯುವಕರು,ಮಹಿಳೆಯರು,ವಿದ್ಯಾರ್ಥಿಗಳು,ವಾಯು ವಿಹಾರಿಗಳು ಇವರ ಶುಚಿ ರುಚಿ ನೋಡಿ ಫಿದಾ ಆಗಿ ಎಲ್ಲರೂ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಅಲ್ಲದೆ ನಿಮ್ಮ ಈ ಉದ್ಯಮವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಹಾಗೆ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಹೃದಯ ಪೂರ್ವಕವಾಗಿ ಹರಸಿ ಹಾರೈಸಿ ಶುಭ ಕೋರಿದ್ದಾರೆ.

ವರದಿ:ಕೋಡಿಹಳ್ಳಿ.ಶಿವಮೂರ್ತಿ.ಟಿ ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button