ಅಂಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.
ಅಂಬಳಿ ಅಕ್ಟೋಬರ್.19

ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಪಂಚಾಯತಿಯಲ್ಲಿ ಎರಡನೇ ಅವಧಿಯ ಚುನಾವಣೆ ಸುನಿಲ್ ಕುಮಾರ್ ಕೃಷಿ ಇಲಾಖೆ ನೇತೃತ್ವದಲ್ಲಿ ನಡೆಯಿತು.2023-24ನೇ ಸಾಲಿನ ಎರಡನೇ ಅವಧಿಯ ಅಂಬಳಿ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪೂಜಾರ್ ಹೊಳಲಮ್ಮ ಹನುಮಂತಪ್ಪ ಆಯ್ಕೆಯಾಗಿರುತ್ತಾರೆ.ಅದೇ ರೀತಿ ಉಪಾಧ್ಯಕ್ಷರಾಗಿ ಟಿ ಕೊಟ್ರಮ್ಮ ಮಾರುತಿ ಆಯ್ಕೆ ಆಗಿರುತ್ತಾರೆ.ಈ ಸಂದರ್ಭದಲ್ಲಿ ಅನುಸೂಯಮ್ಮ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಡಿ ನಾಗರಾಜ್, ಬಿ ಬಸವರಾಜ್, ಟಿ ಶಿವಪ್ಪ (ಡಿಕೆಸಿ),ಇನ್ನು ಮುಂತಾದ ಸದಸ್ಯರು ಚುನಾವಣೆ ಅಧಿಕಾರಿಯಾಗಿ ಸುನಿಲ್ ಕುಮಾರ್ ಕೃಷಿ ಇಲಾಖೆ,ಚುನಾವಣೆ ಸುರಕ್ಷತೆಗಾಗಿ ಗೀತಾಂಜಲಿ ಸಿಂಧೆ ಮತ್ತು ಸಿಬ್ಬಂದಿ ವರ್ಗ, ಮಾರುತೇಶ್ ಕೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ,ಪ್ರದೀಪ್ ಡಿಎಸ್ ,ಕಾರ್ಯದರ್ಶಿಗಳು, ಕೊಟ್ರೇಶ್ ವಿ ಬಿಲ್ ಕಲೆಕ್ಟರ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು