ರಾಜ್ಯೋತ್ಸವ ಹಬ್ಬದಂತೆ ಆಚರಿಸೋಣ.
ತರೀಕೆರೆ ನವೆಂಬರ್.11

ಕನ್ನಡ ಮಾತನಾಡಿ ಭಾಷೆಯ ಹಿರಿಮೆ ಎತ್ತಿ ಹಿಡಿಯೋಣ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಸಬಿತಾ ಬನ್ನಾಡಿ ರವರು ಹೇಳಿದರು. ಅವರು ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ, ಐ ಕ್ಯೂ ಎ ಸಿ ತರೀಕೆರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ 50ನೇ ವರ್ಷದ ಸುವರ್ಣ ಸಂಭ್ರಮ, ಕನ್ನಡ ಹಬ್ಬ 2023, ಕಾರ್ಯಕ್ರಮದ ಭವ್ಯ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ನಾಗವೇಣಿ ರವರು ನೂರಾರು ವಿದ್ಯಾರ್ಥಿಗಳೊಂದಿಗೆ ಪಟ್ಟಣದ ರಾಜ ಬೀದಿಗಳಲ್ಲಿ ಡೊಳ್ಳು ಕುಣಿತ, ಮಹಿಳೆಯರ ವೀರಗಾಸೆ ನೃತ್ಯ, ಹಾಗೂ ಜೋಡೆತ್ತಿನ ಗಾಡಿಗಳೊಂದಿಗೆ ಮೆರವಣಿಗೆ ನಡೆಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

