ಸಂಕ್ರಾಂತಿಗೆ ಬೆಳ್ಳಿ, ಬಂಗಾರ ತೆಗೆದುಕೊಳ್ಳುವವರಿಗೆ ಶಾಕ್ ; ಸತತ ಮೂರನೇ ದಿನವು ಬಂಗಾರ, ಬೆಳ್ಳಿಯ ಬೆಲೆಯಲ್ಲಿ ಏರಿಕೆ…!
ಸತತ ಮೂರನೇ ದಿನವು ಬಂಗಾರ, ಬೆಳ್ಳಿಯ ಬೆಲೆಯಲ್ಲಿ ಏರಿಕೆ...!
ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನವು ಹೆಚ್ಚಳವಾಗಿದೆ. ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ.5,205 ಆಗಿದೆ. ಜಾಗತಿಕವಾಗಿ ನಡೆಯುವ ಹಲವು ಅಂಶಗಳು ಹಾಗೂ ಬದಲಾವಣೆಗಳ ಪ್ರಭಾವದಿಂದಾಗಿ ಚಿನ್ನದ ಬೆಲೆಯಲ್ಲಿ ಪ್ರತಿನಿತ್ಯವೂ ಏರಿಳಿತಗಳು ನಡೆಯುತ್ತಲೇ ಇರುತ್ತವೆ.
ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಲೇ ಇರುವುದನ್ನು ಗಮನಿಸಬಹುದು. ಇಂದು ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ. 51,650 ಆಗಿದೆ.
ದೇಶದ ಪ್ರಮುಖ ನಗರಗಳ ಚಿನ್ನದ ಬೆಲೆ :
- ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,050,
- ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,960, ರೂ. 52,000, ರೂ. 52,000 ಆಗಿದೆ.
- ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,150 ರೂ. ಆಗಿದೆ.
ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳು ಕಳೆದ ಮೂರು ದಿನ:
ಮೊದಲನೇ ದಿನ
- ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,205,
- 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,165,
ಎರಡನೇ ದಿನ
- ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 41,640 ,
- 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 45,420
ಮೂರನೇ ದಿನ
- ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 52,050.
- 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 56,780.
ಚಿನ್ನದಂತೆಯೇ ಬೆಳ್ಳಿ ಬೆಲೆಯಲ್ಲೂ ಏರಿಳಿತ ಸಾಮಾನ್ಯವಾಗಿದೆ.ಇನ್ನು ಬೆಳ್ಳಿಯ ವಿಷಯಕ್ಕೆ ಬಂದರೆ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ.
ಬೆಳ್ಳಿ ಬೆಲೆಯಲ್ಲಿ ಇಂದು ದಿಢೀರ್ ರೂ. 1000 ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.75,000(ನಿನ್ನೆ ರೂ.74,000) ಆಗಿದೆ.