ಕಾಂಗ್ರೆಸ್ ನಿಂದ ಗೃಹ ಜ್ಯೋತಿ, ಗೃಹಲಕ್ಷ್ಮಿ ಕಾರ್ಡ್ ವಿತರಣೆ……

ತರೀಕೆರೆ (ಫೆ,28) :

ಭ್ರಷ್ಟಾಚಾರ ಯುಕ್ತ ಬಿಜೆಪಿಯ ಸ್ವಾರ್ಥ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ದೀನ ದಲಿತ ಹಾಗೂ ಕಾರ್ಮಿಕರ ವರ್ಗ ಮತ್ತು ದೇಶದ ಬಡ ಜನರು ಸಂಕಷ್ಟದಲ್ಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ವಿಧಾನಸಭಾ ಟಿಕೆಟ್ ಆಕಾಂಕ್ಷಿ ಯಾದ ಲೋಕೇಶ್ ತಾಳಿಕಟ್ಟೆ ರವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಬಿಜೆಪಿ ಸರ್ಕಾರವು ಮಿತಿಮೀರಿದ ತೆರಿಗೆ ನೀತಿಯು ಸಾಮಾನ್ಯ ಜನರು ಪ್ರತಿನಿತ್ಯ ಬಳಸುವ ಹಾಲು, ಮೊಸರು, ಮಜ್ಜಿಗೆ, ತರಕಾರಿಗಳು ಮತ್ತು ದಿನಸಿ ವಸ್ತುಗಳು ಸೇರಿಕೊಂಡಂತೆ ಆಹಾರ ಪದಾರ್ಥಗಳಿಗೂ GST ವಿಧಿಸಿ ಬಡವರು ಹಸಿವಿನಿಂದ ಸಾಯುವಂತೆ ಮಾಡಿದ್ದಾರೆ. ರೈತರ ಆದಾಯವನ್ನು ಡಬಲ್ ಮಾಡುತ್ತೇವೆ, ವಿಶ್ವದಲ್ಲಿ ಭಾರತವನ್ನು ಆರ್ಥಿಕ ಶಕ್ತಿಯನ್ನಾಗಿಸುತ್ತೇವೆ. ಪ್ರತಿ ನಾಗರೀಕನಿಗೂ 15 ಲಕ್ಷ ಹಣ ನೀಡುತ್ತೇವೆ. ಶಿಕ್ಷಣದಲ್ಲಿ ಭಾರತವನ್ನು ವಿಶ್ವಗುರು ಆಗಿಸುತ್ತೇವೆ. ಭಾರತವನ್ನು ಸ್ವಾವಲಂಬಿ ಮಾಡಿ ಭಾರತದ ರೂಪಾಯಿಯನ್ನು ವಿಶ್ವದ ಕರೆನ್ಸಿಯಾಗಿ ಮಾರ್ಪಡಿಸುತ್ತೇವೆ. ಭ್ರಷ್ಟಾಚಾರ ಮುಕ್ತ ಹಾಗೂ ಕಪ್ಪು ಹಣ ಬಯಲು ಗೆಳೆಯುತ್ತೇವೆ ಎಂದು ಬಣ್ಣ ಬಣ್ಣದ ಕಥೆಗಳನ್ನು ಹೇಳಿ ಈ ದೇಶದ ಜನರ ಬದುಕನ್ನು ವಿಕಾರಿ ಮಾಡಿದ್ದಾರೆ ಎಂದು ಆರೋಪಿಸಿದರು.

ನೂರಾರು ವರ್ಷ ಇಡೀ ದೇಶ ದುಡಿದು ಸಂಪಾದಿಸಿದ್ದ ಲಕ್ಷಾಂತರ ಕೋಟಿ ಸಾರ್ವಜನಿಕ ಆಸ್ತಿಗಳನ್ನು ಅದಾನಿ ಮತ್ತು ಅಂಬಾನಿಗೆ ಬಳುವಳಿಯಾಗಿ ಕೊಟ್ಟು ಅವರನ್ನು ಶ್ರೀಮಂತರನ್ನಾಗಿ ಮಾಡಿ, ದೇಶದ ಜನರ ಬದುಕನ್ನು ಕಸಿದುಕೊಂಡಿರುವ ಇವರಿಗೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡುತ್ತಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ನೆರವಾಗಲು ಕಾಂಗ್ರೆಸ್ ಸರ್ಕಾರ ಬಂದರೆ ಪ್ರತಿ ತಿಂಗಳಿಗೆ 2,000 ಗಳು ಹಾಗೂ ಪ್ರತಿ ತಿಂಗಳಿಗೆ 200 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ಕೊಡಲು ಕಾಂಗ್ರೆಸ್ ಪಕ್ಷವು ಗ್ಯಾರಂಟಿಯನ್ನು ನೀಡಿದೆ. ಅದರ ಬಾಂಡ್ ಪ್ರತಿಯನ್ನು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನೆಯ ಒಡತಿಗೆ ನೀಡುವ ಕಾರ್ಯಕ್ರಮವನ್ನು ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಾ. ಅಂಶುಮಾನ್ ಹಾಗೂ ಶಿವಾನಂದ ಸ್ವಾಮಿ ಅವರ ನೇತೃತ್ವದಲ್ಲಿ ತರೀಕೆರೆ ತಾಲೂಕಿನ ಬ್ಲಾಕ್ ಅಧ್ಯಕ್ಷರಿಗೆ ನೀಡಲಾಯಿತು. ತಾಲೂಕಿನ ಎಲ್ಲಾ ಗೃಹಣಿಯರಿಗೆ ಗ್ಯಾರಂಟಿ ಬಾಂಡನ್ನು ವಿತರಿಸುವ ಕಾರ್ಯಕ್ರಮವನ್ನು ಮಾರ್ಚ್ 10 ರವರೆಗೆ ನಡೆಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡರಾದ ಹಾಲು ವಜ್ರಪ್ಪ, ಹಾಲೇಶ್, ಚಂದ್ರಶೇಖರ್, ಮೌಸಿನ್ ಪಾಷಾ ಮುಂತಾದವರು ಉಪಸ್ಥಿತರಿದ್ದರು.

 

ವರದಿಗಾರರು || ತರೀಕೆರೆ N.ವೆಂಕಟೇಶ್…..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button