ಸೂಳೇಭಾವಿಯಲ್ಲಿ ಕೂಸಿನ ಮನೆ ಕೇಂದ್ರ ಉದ್ಘಾಟನೆ.
ಸೂಳೇಭಾವಿ ಫೆಬ್ರುವರಿ.2
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೂಳೇಭಾವಿ ಗ್ರಾಮದಲ್ಲಿ ಕೂಸಿನ ಮನೆ ಕೇಂದ್ರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡಪ್ಪ ಕುರಿ ಹಾಗೂ ಸಹಾಯಕ ನಿರ್ದೇಶಕರಾದ ಮಹಾಂತೇಶ್ ಕೋಟಿ ಅವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು.ಮೂರು ವರ್ಷದ ಒಳಗಿನ ನರೇಗಾ ಕೂಲಿ ಕಾರ್ಮಿಕರ ಮಕ್ಕಳನ್ನು ಆರೈಕೆ ಮಾಡುವ ಕೇಂದ್ರವಾಗಿದ್ದು, ಈಗಾಗಲೇ ಆರೈಕೆದಾರರಿಗೆ ತರಬೇತಿ ನೀಡಿದ್ದು,

ಕೂಲಿ ಕಾರ್ಮಿಕರ ಮಕ್ಕಳನ್ನು ಈ ಕೇಂದ್ರದಲ್ಲಿ ಪೋಷಣೆ ಮಾಡುವ ಉದ್ದೇಶ ಹೊಂದಿದೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಂಗಣ್ಣ ಕಳೋಳ್ಳಿ, ತಾಪಂ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಡಪ್ಪ ಕುರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಎಸ್ ಡಿ ಗೌಡರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಚ್. ಎನ್. ಮಾಗಿ, ಬಿಲ್ ಕಲೆಕ್ಟರ್ ವಾಯ್ ಎಚ್ ಕೋರಿ, ಹುಲಗಪ್ಪ ಕುರಿ, ಜಹಾಂಗೀರ್ ಜಾಗಿರದಾರ, ಜ್ಯೋತಿ ಪೂಜಾರ, ಗೀತಾ ಶಿಗಾಡಿ ಹಾಗೂ ಸರ್ವ ಸದಸ್ಯರು, ಶಿಶು ಆರೈಕೆದಾರರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಶಿಕ್ಷಕ ವರ್ಗ, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.