ಕಾದು ಬಾಣಲಿಯಂತಾಗಿದ ಧರೆಗೆ ಮಳೆಯ ಸಿಂಚನ – ಮುಂಗಾರು ಹಂಗಾಮಿನ ಮುನ್ಸೂಚನೆ ನೀಡಿದ ವರುಣದೇವ.
ಹುನಗುಂದ ಮೇ.17

ಕಳೆದ ಎರಡು ಮೂರು ತಿಂಗಳಿನಿಂದ ರಣ ಬಿಸಿಲು ಮತ್ತು ಭಯಂಕರ ಝಳಕ್ಕೆ ಬಸವಳಿದು ಹೋಗಿದ ಜನರಿಗೆ ಗುರುವಾರ ಸ್ವಲ್ಪ ಪ್ರಮಾಣದ ಸುರಿದ ವರುಣನ ವರ್ಷಧಾರೆಯಿಂದ ಸ್ವಲ್ಪ ಬಿಸಿಲಿಗೆ ಮತ್ತು ಧಗೆಗೆ ಬ್ರೇಕ್ ಬಿದ್ದು, ಝಳ…ಝಳ…ಎನ್ನುತ್ತಿದ್ದ ಜನರಿಗೆ ಸ್ವಲ್ಪ ಮಟ್ಟಿನ ರಿಲ್ಯಾಕ್ಸ್ ಸಿಕ್ಕಂತಾಗಿದೆ.ಮಳೆ ಇಲ್ಲದೆ ಕಂಗೆಟ್ಟಿದ್ದ ಜನರಿಗೆ ಗುರುವಾರ ತಾಲ್ಲೂಕಿನ ವಿವಿಧೆಡೆ ಮಳೆಯಾಗಿ, ಎರಡ್ಮೂರ ತಿಂಗಳಿಂದ ಬಿಸಿಲ ಬೇಗೆಯಿಂದ ಕಾದ ಬಾಣಲಿಯಂತಾಗಿದ್ದ ಧರೆಗೆ ಮಳೆರಾಯ ಸ್ವಲ್ಪ ತಂಪನ್ನೆರೆದಂತಾಗಿದೆ. ಮಧ್ಯಾಹ್ನದ ೧೨ ಗಂಟೆಯ ಹೊತ್ತಿಗೆ ಗಾಳಿ ಮಳೆಯೊಂದಿಗೆ ಆಗಮನವಾದ ವರ್ಷಧಾರೆಯು ೩೦ ನಿಮಿಷಕ್ಕೂ ಹೆಚ್ಚು ಕಾಲ ಹುನಗುಂದ ಪಟ್ಟಣ ಸೇರಿದ್ದಂತೆ ತಾಲೂಕಿನ ವಿವಿಧೆಡೆಯಲ್ಲಿ ಮಳೆಯ ತಂಪಿನ ಸಿಂಚಣವನ್ನು ಮೂಡಿಸಿದ್ದು ನಿಜಕ್ಕೂ ಧಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ಸಂತಸ ತಂದಿದೆ.ಮಳೆ ಇಲ್ಲದೆ ಬರದಿಂದ ತತ್ತರಿಸಿ ಹೋಗಿದ್ದ ಜನರು ಈ ಬಾರಿಯ ರಣ ಬಿಸಿಲಿಗೆ ೬೦ ವರ್ಷದ ವಯೋವೃದ್ದರು ನನ್ನ ಜೀವನಮಾನದಲ್ಲಿಯೇ ಇಂತಹ ಮಹಾನ ಬಿಸಿಲಿನ ಅನುಭವವನ್ನು ನಾವು ಕಂಡಿರಲಿಲ್ಲ ಎನ್ನುತ್ತಿದ್ದರು. ಬಿಸಿಲ ಧಗೆ ಮಿತಿ ಮೀರಿತ್ತು.ಅದರಲ್ಲೂ ಕಳೆದ ಎರಡು ವಾರಗಳಿಂದ ತಾಲೂಕಿನಾಧ್ಯಂತ ಉಷ್ಣಾಂಶವು ೪೦ ರಿಂದ ೪೧ ಡಿಗ್ರಿ ತಲುಪಿತ್ತು. ಹಗಲಲ್ಲಿ ಹೊರಗಡೆ ಓಡಾಡಲಾಗದಷ್ಟು ಬಿಸಿಲು ಕಾಣಿಸಿ ಗೊಂಡಿತ್ತು. ಭಯಂಕರ ಪ್ರಖರ ಮಾನವಾದ ಬಿಸಿಲಿನ ಅನುಭವ ಬೆಳಿಗ್ಗೆ ೯ ಗಂಟೆಗೆ ಹಾಕಿಕೊಂಡು ಬಟ್ಟೆಗಳು ಒದ್ದೆಯಾಗುತ್ತಿದ್ದವು ಮತ್ತೇ ಬಿಸಿಲು ಜೊತೆಗೆ ಬಿಸಿ ಗಾಳಿ ಬೀಸುವ ಜೊತೆಗೆ ಮಳೆ ಮುನ್ಸೂಚನೆ ನೀಡಿತ್ತು. ಅದರಂತೆ ಮಧ್ಯಾಹ್ನ ಮಳೆರಾಯ ಕೃಪೆ ತೋರಿದ. ಮುಂಗಾರು ಹಂಗಾಮಿನ ಮುನ್ನವೇ ಮಳೆರಾಯನ ಆಗಮನ ರೈತರಲ್ಲಿ ಸ್ವಲ್ಪ ಖುಷಿ ತಂದಿದೆ. ಇದೇ ರೀತಿ ವರುಣ ಕೃಪೆ ತೋರುತ್ತಾ ಹೋದರೇ ಖಂಡಿತ ತಾಲೂಕಿಗೆ ಆವರಿಸಿದ ಬರಗಾಲ ಮಾಯವಾಗಿ ಮುಂಗಾರು ಬೆಳೆಗಳು ಚನ್ನಾಗಿ ಬರುತ್ತವೆ ಎನ್ನುತ್ತಾರೆ ರೈತಾಪಿ ವರ್ಗ.ಸಧ್ಯ ವರುಣನ ಕೃಪೆಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಏಕಾಏಕಾಕಿ ಸುರಿದ ಸ್ವಲ್ಪ ಪ್ರಮಾಣದ ಮಳೆಯಲ್ಲಿ ನೆನೆಯದಂತೆ ತಪ್ಪಿಸಿ ಕೊಳ್ಳಲು ಜನ ಪರದಾಡಿದರು. ದ್ವಿಚಕ್ರ ವಾಹನಗಳ ಸವಾರರು ಮಳೆಯಲ್ಲಿ ಸಂಚರಿಸಿದರು. ರಸ್ತೆಯ ತಗ್ಗು ಮತ್ತು ಗುಂಡಿಗಳಲ್ಲಿ ಕೆಲ ಹೊತ್ತು ನೀರು ನಿಂತಿತು. ಬಿಸಿಲಿಗೆ ಕಾದಿದ್ದ ಧರೆಯು ಮಳೆ ಸಿಂಚನದಿಂದ ಸ್ವಲ್ಪ ಮಟ್ಟಿಗೆ ತಣ್ಣಗಾದಂತಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.