ತಾವರೆ ನಾಡಿನಲ್ಲಿ, ಕಲಾ ಭಾರತಿ ಕಲಾ ಸಂಘದ – ಕಲರವ ಕಾರ್ಯಕ್ರಮ ಜರುಗಿತು.

ಹಿರೇ ಹೆಗ್ಡಾಳ್ ಡಿ .25

ಕಲಾವಿದನಿಂದ ಕಲಾವಿದರಿಗಾಗಿ ಕಲೆಗಳಿಗೋಸ್ಕರ ರಚಿತವಾಗಿರುವ ಕಲಾ ಭಾರತಿ ಕಲಾ ಸಂಘ, ಹಿರೇಹೆಗ್ಡಾಳ್ ಗ್ರಾಮದ ಹವ್ಯಾಸಿ ರಂಗಕಲಾವಿದ ಬಣಕಾರ ಮೂಗಪ್ಪ 2016 ರಲ್ಲಿ ಹುಟ್ಟು ಹಾಕಿದರು. ಅಂದಿನಿಂದ ನಿರಂತರವಾಗಿ ಹರಿಯುವ ನೀರಿನಂತೆ, ಪ್ರತಿ ವರ್ಷವೂ ವೈವಿಧ್ಯಮಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಸಾಧಕರನ್ನು ಗುರತಿಸಿ ಸನ್ಮಾನವನ್ನು ನೆರವೇರಿಸಿ, ಬಿರುದಾವಳಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ನಡೆದು ಬಂದಿದೆ. ಒಬ್ಬ ಕಲಾವಿದನಾಗುವ ಮೂಲಕ ತೆರೆಯ ಹಿಂದೆ, ಮುಂದೆ, ನಂತರದ ಕಷ್ಟಗಳನ್ನು ಬಹು ಸೂಕ್ಷ್ಮವಾಗಿ ಅರಿತಿರುವ ಮೂಗಪ್ಪ ಮಾತಿಗೆ ಇಳಿದರೆ, ಜಲಪಾತದಂತೆ ಒಬ್ಬ ಕಲಾವಿದರ ಕಡು ಕಷ್ಟಗಳನ್ನು ಲೀಲಾಜಾಲವಾಗಿ ವಿವರಿಸುತ್ತಾನೆ. ಪರಕಾಯ ಪ್ರವೇಶ ಮಾಡಿ ಅಭಿನಯ ನೀಡುವ ಅತ್ಯ ಅಧ್ಬುತ ಕಲಾವಿದರು ರಾಜ್ಯದಲ್ಲಿ ಸಾಕಷ್ಟು ಮಂದಿ ಇದ್ದರೂ, ಅವರು ಎಲೆ ಮರೆ ಕಾಯಿ ಯಂತಾಗಿದ್ದಾರೆ. ಅವರನ್ನು ಗುರುತಿಸುವ ಮೂಲಕ, ತಾನೇ ಸಂಸ್ಥಾಪಕ ಅಧ್ಯಕ್ಷನಾದ ಕಲಾಭಾರತಿ ಕಲಾ ಸಂಘದ ವೇದಿಕೆಯಿಂದ ಬಣಕಾರ ಮೂಗಪ್ಪ ಅನೇಕ ಕಲಾವಿದರಿಗೆ ಅವರ ಪಾತ್ರಭಿನಯದಲ್ಲಿ ಗುರುತಿಸಿ ಕೊಂಡಿರುವವರೆಗೆ ಸಮಾನಾಗಿ ಬಿರುದಾವಳಿಗಳನ್ನು ನೀಡಿ, ಸನ್ಮಾನ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ಅಭೂತ ಪೂರ್ವ ಕಾರ್ಯಕ್ರಮ: 23 ನೇ. ಡಿಸೆಂಬರ್ 2024 ರ ಸೋಮವಾರ ಅಕ್ಷರಶಃ ಹಿರೇಹೆಗ್ಡಾಳ್ ಗ್ರಾಮ ಮಠಾಧೀಶರಿಂದ, ಶರಣರಿಂದ, ಸೇವಾಶ್ರಮ ಗುರುಗಳಿಂದ, ಕಲಾವಿದರಿಂದ, ರಾಜಕಾರಣಿಗಳಿಂದ, ಹಿರಿಯರಿಂದ ತುಂಬಿ ತುಳುಕುವಂತಾಗಿದ್ದೂ ನಭೂತೋ…ನ ಭವಿಷ್ಯತೆ ಎನ್ನುವಂತಾಗಿತ್ತು. ತಾವರೆನಾಡು, ಕೆಂಪಯ್ಯಸ್ವಾಮಿಯ ಬೀಡು ಎಂದು ಹಿರೇಹೆಗ್ಡಾಳ್ ಜಗಜನಿತ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ವಾಹನ ದಟ್ಟಣೆಗಳಿಂದ ತುಂಬಿ ಹೋಗಿತ್ತು. ದೂರದ ಬಿಜಾಪುರ, ಗಜೇಂದ್ರಗಡ, ಬೆಂಗಳೂರು, ಗದಗ, ಸಿಂಧನೂರು ಸೇರಿದಂತೆ ಗಡಿನಾಡು ಕರ್ನಾಟಕದ ಸಂತೆ ಕುಡ್ಗೂರು ನಿಂದ ಹರ, ಗುರು, ಚರ ಮೂರ್ತಿಗಳ ಜೊತೆಯಲ್ಲಿ ಸಂತ ಮಹಂತರು ಬಣಕಾರ ಮೂಗಪ್ಪನ ಹೃದಯ ಪೂರ್ವಕ ಕರೆಯೋಲೆ ಕರೆ ತಂದಿತ್ತು. ಗ್ರಾಮೀಣ ಪರಿಸರದ ಹಿನ್ನೆಲೆಯನ್ನು ಬಹು ಸೂಕ್ಷ್ಮವಾಗಿ ಗಮನಿಸಿದ ಮಹನೀಯರು, ಮೂಗಪ್ಪನಲ್ಲಿ ಅಡಗಿರುವ ಸದುದ್ದೇಶವನ್ನೂ ಮನಸ್ಸಿನಲ್ಲಿಟ್ಟು ಕೊಂಡು ಮನಃ ಪೂರ್ವಕವಾಗಿ ಅರ್ಶೀವದಿಸಿದರು. ತುಲಾಭಾರ ಕಾರ್ಯಕ್ರಮ ಲಿಂ. ಪಂಡಿತ ಪುಟ್ಟರಾಜ ಗವಾಯಿಗಳವರ ಪರಂಪರೆಯನ್ನು ಮುಂದುವರೆಸಿ ಕೊಂಡು ಬಂದಿರುವ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರಿಗೆ, ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವ ಕಾಲಜ್ಞಾನ ಶಿವಯೋಗಿ, ಡಾ, ಶ್ರೀಶರಣಬಸವ ಮಹಾ ಸ್ವಾಮಿಗಳು, ತಳ್ಳಿಹಾಳ ಸಂಸ್ಥಾನ ಕೋಡಿಮಠ, ಗಜೇಂದ್ರಗಡ ಇವರಿಗೆ ತುಲಾಭಾರ ನಡೆಸುವ ಅಭೂತ ಕಾರ್ಯಕ್ರಮಕ್ಕೂ ವೇದಿಕೆ ಸಾಕ್ಷಿಯಾಯಿತು.

ಬಣಕಾರ ಮೂಗಪ್ಪ ಓರ್ವ ಕಲಾವಿದನಾದರೂ, ಅಷ್ಟೇ ಭಕ್ತಿ, ಭಾವನೆಗಳಿರುವ ಭಕ್ತನಾಗಿದ್ದಾನೆ ಎಂದು ಸ್ವಯಂ ಕಲ್ಲಯ್ಯಜ್ಜನವರೇ ಅರ್ಶೀವಚನದಲ್ಲಿ ಶುಭ ಹಾರೈಸಿದರು. ಕಲಾವಿದನಾಗಿ ಇನ್ನೊಬ್ಬರ ಕಲೆಯನ್ನು ಮತ್ಸರದಿಂದ ನೋಡುವ ಈ ಜಗತ್ತಿನಲ್ಲಿ ಇಂಥವರು ಬಹು ಅಪರೂಪ ವಾಗಿದ್ದಾರೆ ಎಂದರು. ತುಲಭಾರದ ಕಾಣಿಕೆಯಿಂದಾಗಿ ಅಂಧ, ಅನಾಥ ಮಕ್ಕಳಿಗೂ ಆಸರೆಯಾಗುವ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಕಾಲಜ್ಞಾನ ಶಿವಯೋಗಿಗಳಾದ ಡಾ, ಶ್ರೀ ಶರಣಬಸವ ಮಹಾ ಸ್ವಾಮಿಗಳು ಆರ್ಶೀವಾದದಲ್ಲಿ ವಿನಯವಂತಿಕೆಯ ಗುಣದಿಂದಾಗಿ, ಎಲ್ಲರೂ ಗಮನಿಸುವಂತೆ ಮಾಡುವುದು ಬಣಕಾರ ಮೂಗಪ್ಪನಿಗೆ ಸಿದ್ಧಿಸಿದೆ ಎಂದರು. ಮೂಗಪ್ಪ ಎಂಬ ನಾಮಧೇಯವಿದ್ದರೂ, ಇತರರನ್ನು ಮೂಕರನ್ನಾಗಿ ಮಾಡುವ ಚಣಾಕ್ಷ ಮತಿಯಾಗಿದ್ದಾನೆಂದು ಪ್ರಶಂಸಿದರು. ಮಾಜಿ ಸಚಿವ ಶ್ರೀರಾಮುಲು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ, ಇದೊಂದು ಭಾವಕೈತೆಯ ಸಮಾವೇಶವಾಗಿ ಗೋಚರಿಸುತ್ತದೆ ಎಂದು ಪ್ರಶಂಸಿದರು. ಸರ್ವ ಧರ್ಮ ಸಮನ್ವಯದ ಒಡ್ಡೋಲಗದಂತೆ, 12 ನೇ. ಶತಮಾನದ ಅನುಭಾವಿ ಶರಣರ ಸಂಗಮದ ಅನುಭವ ಮಂಟಪದಂತಿದೆ ಎಂದು ಕಾರ್ಯಕ್ರಮದ ಗುಣಗಾನ ಮಾಡಿದರು. ಹೀಗೆ ಅನೇಕ ಅರಿವಿನ ವಿಷಯಗಳ ಅನಾವರಣಕ್ಕೆ ಸಾನಿಧ್ಯ ವಹಿಸಿದ ಕೂಡ್ಲಿಗಿ ಹಿರೇಮಠದ ವೇ.ಮೂ. ಚಿದಾನಂದ ಸ್ವಾಮಿಗಳು, ಎಂ.ಬಿ. ಅಯ್ಯನ ಹಳ್ಳಿಯ ವೇದಬ್ರಹ್ಮ ವಿಜಯಾನಂದ ಸ್ವಾಮಿ ಸಾರಂಗ ಮಠ, ಬೆಂಗಳೂರಿನ ಪ್ರಖ್ಯಾತ ಮೊಬೈಲ್ ಸಂಖ್ಯಾ ಶಾಸ್ತ್ರತಜ್ಞರಾದ ಡಾ, ಶ್ರೀ ಅಭಯ ಬಿ.ಆರ್. ದೇವರಾಜ್ ಗುರೂಜಿ, ಸಿಂಧನೂರಿನ ವಿಶ್ವಕರ್ಮ ಆಶ್ರಮ ಈಜಿ ಬೊಮ್ಮನಾಳು ಶ್ರೀ ಕಾಳಪ್ಪ ತಾತನವರು, ಗಡಿನಾಡು ಕರ್ನಾಟಕದ ಸಂತೆ ಕುಡ್ಗೂರ್, ಅದೋನಿ ಸರ್ವ ಧರ್ಮ ಸೇವಾಶ್ರಮದ ಸೂಫಿ ಡಾ, ಮಸ್ತಾನ್ ವಿ.ಖಾದ್ರಿ, ಸೂಫಿ ಮೊಹಮದ್ ಅಲಿ, ಚಳ್ಳಕೆರೆಯ ರೇಖಲಗೆರೆ ಕಾವಲ್‌ನ ಶ್ರೀ ದೇನಾ ಭಗತ್ ಗುರೂಜಿ ರಾಜಯೋಗ ವಿದ್ಯಾಶ್ರಮ ನೇತೃತ್ವವನ್ನು ವಹಿಸಿಕೊಂಡು ಶುಭ ಹಾರೈಸಿದರು.

ಆದರ್ಶ ದಂಪತಿಗಳು: ತಾಲೂಕಿನಾಧ್ಯಂತ ಭಾಗವಹಿಸಿದ 31 ಜೋಡಿಗಳು ಆದರ್ಶ ದಂಪತಿಗಳ ಅವಾರ್ಡ-2024 ನೇ. ಸಾಲಿಗಾಗಿ ನೀಡಲಾಯಿತು. ಈ ಜೋಡಿಗಳಿಗೆ ವೇದಿಕೆಯಲ್ಲಿರುವ ಹರ,ಗುರು, ಚರಮೂರ್ತಿಗಳ ಕೃಪಾರ್ಶೀವಾದ ದೊರಕಿರುವುದು ಅಪೂರ್ವ ಕ್ಷಣವಾಗಿದೆ ಎಂದು ದಂಪತಿಗಳು ಭಾವ ದುಂಬಿ ಮೂಗಪ್ಪ ಇವರ ಸಾರ್ಥಕ ಕೆಲಸವನ್ನು ಕೊಂಡಾಡಿದರು. ಲೋಕ ಕಲ್ಯಾಣಾರ್ಥವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಹೀಗೆ, ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆ ಗೊಂಡವು. ಮನೋರಂಜನೆ:- ವಿಜಯಪುರ ಜಿಲ್ಲೆ ಕು.ಲಕ್ಷ್ಮೀ ತೇರದಾಳ ಮಠ, ಎಸ್.ಜಿ. ಮತ್ತು ಸಂಗಡಿಗರು, ವಿನೂತ ಮತ್ತು ಸಂಗಡಿಗರು ಸಮೂಹ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಿರು ತೆರೆಯ ಕಲಾವಿದರಾದ ಮಿಲ್ಟ್ರೀ ಮಂಜು ಸೇರಿದಂತೆ ಇನ್ನಿತರ ರಂಗಭೂಮಿ, ಹವ್ಯಾಸಿ ರಂಗ ಕಲಾವಿದರಿಂದ ಕಾರ್ಯಕ್ರಮಗಳು ಜರುಗಿದವು. ಹಿರೇಹೆಗ್ಡಾಳ್ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ಸಂತೋಷ್ ಕುಮಾರ್ ಐ.ವೈ. ಶ್ರೀ ವೀರಮಾತ ಟ್ರಸ್ಟ್ ಅಧ್ಯಕ್ಷರು ಬಳ್ಳಾರಿ ಇವರ ಘನ ಅಧ್ಯಕ್ಷತೆಯಲ್ಲಿ ಕಲಾಭಾರತಿ ಕಲಾ ಸಂಘದ ಕಾರ್ಯಕ್ರಮಗಳು ಜರುಗಿದವು ಎಂದು ಸುದ್ದಿ ಆಗಿರುತ್ತದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button