“ಉಸಿರು ಚೆಲ್ಲಿ ಜಗದಲಿ ಹೆಸರು ಉಳಿಸಿದವರು”…..

ಉಸಿರು ಚೆಲ್ಲಿ ಜಗದಲಿ ಹೆಸರು
ಉಳಿಸಿದವರು”
ಸೃಷ್ಟಿಯಲಿ ಮಾನವ ಜೀವಾತ್ಮರು
ತಂದೆ ತಾಯಿ ಗರ್ಭದಿ ಜನಸಿದ
ಜೀವದ ಉಸಿರಿಗೆ ಹೆಸರು
ತಾಯಿ ಮನದ ಅಕ್ಕರೆಯ ಅಕ್ಕ
ಅಣ್ಣ ತಮ್ಮ ತಂಗಿ ಮಮತೆಯ
ದೊಡ್ಡಮ್ಮ ಚಿಕ್ಕಮ್ಮ ಬಂಧನ
ಚೊಕ್ಕ ಚಿನ್ನದ ಗುಣದವರು
ನೆರೆಹೊರೆ ಸ್ನೇಹ ವಿಶ್ವಾಸ
ನಂಬಿಕೆಯ ಸಹಾಯ
ಸಹಕಾರ ಸ್ನೇಹ ಜೀವಿಗಳು
ಮಮಕಾರ ರೂಪದ ರೂವಾರಿಗಳು
ನೋವುಂಡರು ಜಗಕ್ಕೆಲ್ಲಾ ಸವಿ
ಸಿಹಿ ಹಂಚಿ ನಕ್ಕು ನಗಸಿ ಜನಮನ
ಮೆಚ್ಚುಗೆಯ ಮಾತಿಗೆ ನಲಿಯುವ
ಮಹಾಗುಣ ಮಾನವ ಜನ್ಮದ
ಸಾರ್ಥಕತೆಗೆ ಸಮಾಜ ಮನೆತನ
ಕುಟುಂಬದ
ಹೊನ್ನ ಕಿರೀಟ ಕಿರ್ತಿ ಶಿಖರದ
ಕಳಸ ಪ್ರಾಯ ಏನಸಿದ
ಮಹಾನ್ ಸಾಧಕರಿಗೆ ಸವಾಲ್
ಜಗದ ಕತ್ತಲು ಬೆಳಕಿನಾಟದಲಿ
ಸೋತು ಗೆದ್ದು ಭೂಮಾತೆಯ
ಮಡಿಲಲಿ ಸ್ನೇಹ ಬೆಳಸಿ
ಉಸಿರು ಚೆಲ್ಲಿ ಜಗದಲಿ ಹೆಸರು
ಉಳಿಸಿದವರು ವಿರಳವಾದರೂ
ಸಂಸ್ಕೃತಿ ಸಂಸ್ಕಾರ ಬೆಳಸಿದವರು
-ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.