ವಕೀಲ ರಾಕೇಶ್ ಕಿಶೋರ್ ಮೇಲೆ ದೇಶ ದ್ರೋಹದ – ಕೇಸ್ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ.
ಆಲಮೇಲ ಅ.13

ಪಟ್ಟಣದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ತಾಲೂಕು ಶಾಖೆ ಆಲಮೇಲ ವತಿಯಿಂದ. ಭಾರತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್ ಗವಾಯಿ ಅವರ ಮೇಲೆ ಶ್ಯೂ ಎಸೆತ ಘಟನೆ ಖಂಡಿಸಿ ಹಾಗೂ ಚಿತ್ತಾಪುರ ತಾಲೂಕಿನ ಮುತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ವಿರೂಪ ಗೊಳಿಸಿರುವುದನ್ನು ಖಂಡಿಸಿ ಕೃತ್ಯ ವೇಸಗಿರುವುದನ್ನು ದೇಶ ದ್ರೋಹ ಪಟ್ಟ ಕಟ್ಟಿ ಗಲ್ಲು ಶಿಕ್ಷೆಗೆ ಒಳಪಡಿಸ ಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ವಿವಿಧ ದಲಿತ ಸಂಘಟನೆಗಳ ಮೂಲಕ ಆಲಮೇಲ ತಾಲೂಕು ದಂಡಾಧಿಕಾರಿಗಳಾದ ಕರೆಪ್ಪ ಬೆಳ್ಳಿ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿಯ ಪತ್ರ ನೀಡಲಾಯಿತು.

ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾನ್ಯ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿ ರವರ ಮೇಲೆ ಮನುವಾದಿ ಮಾನಸಿಕ ಸ್ಥಿತಿಮೀತ ಕಳೆದು ಕೊಂಡ ವಕೀಲನಾದ ರಾಕೇಶ್ ಕಿಶೋರ್ ಎಂಬ ನಾಲಾಯಕ ವ್ಯಕ್ತಿಯು ನ್ಯಾಯಾಲಯದ ಕಲಾಪ ನಡೆಯುತ್ತಿರುವ ಸಮಯದಲ್ಲಿ ಶ್ಯೂ ಎಸೆಯುವ ಪ್ರಯತ್ನ ಮಾಡಿದ್ದಾನೆ. ಈ ಘಟನೆಯು ವೈಯಕ್ತಿಕ ಅಸಹನೆ ವಾಗಿರದೇ ಸಮಸ್ತ ಭಾರತೀಯರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಬಹುದೊಡ್ಡ ಷಡ್ಯಂತರವಾಗಿದೆ. ಇದು ಕೇವಲ ನ್ಯಾಯವಾದಿ ಗವಾಯಿ ರವರ ಮೇಲಿನ ಹಲ್ಲೆ ಯಾಗಿರದೆ ನೇರವಾಗಿ ಸಂವಿಧಾನ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದ ಮೇಲೆ ನಡೆದ ಹಲ್ಲೆಯಾಗಿದೆ. ಅದಕ್ಕೆ ರಾಕೇಶ್ ಕಿಶೋರ್ ಎಂಬ ನಾಲಾಯಕ ಮನುಷ್ಯನನ್ನು ದೇಶ ದ್ರೋಹದ ಪಟ್ಟ ಕಟ್ಟಿ ಗಲ್ಲು ಶಿಕ್ಷೆಗೆ ಒಳಪಡಿಸ ಬೇಕು. ಹಾಗೂ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತಗಾ ಎಂಬ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ವಿರೂಪ ಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ ಇಂತಹ ನೀಚ ಮನಸ್ಸುಳ್ಳ ವ್ಯಕ್ತಿಗಳನ್ನು ಯಾರೇ ಆಗಿದ್ದರು ಕಾನೂನು ಅಡಿಯಲ್ಲಿ ಬಂಧಿಸಿ ಶೀಘ್ರವಾಗಿ ಶಿಕ್ಷೆಗೆ ಒಳಪಡಿಸ ಬೇಕೆಂದು ಈ ಮೂಲಕ ತಮ್ಮಲ್ಲಿ ನಮ್ಮ ಆಲಮೇಲ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಕೇಳಿ ಕೊಳ್ಳುತ್ತೇವೆ ಎಂದು ದಲಿತ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಅನುವಾಯಿಗಳು ಮಾನ್ಯ ದಂಡಾಧಿಕಾರಿಗಳಾದ ಕರೆಪ್ಪ ಬೆಳ್ಳಿಯವರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

