ಸ್ವಾತಂತ್ರ್ಯ ಬಂದರೂ ಸಂವಿಧಾನ ಇದ್ದರು ದಲಿತ ಹೆಣ್ಣು ಮಕ್ಕಳಿಗೆ ಸಿಗದ ನ್ಯಾಯ.

ಹೊಸಪೇಟೆ ಆಗಷ್ಟ.19

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾ ಕಛೇರಿ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು,3 ಮನವಿ ಪತ್ರವನ್ನು, ಜಿಲ್ಲಾ ಅಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳು, ಕರ್ನಾಟಕ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.ಮಣಿಪುರದಲ್ಲಿ ಕುಕ್ಕೆ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಸಮಾಜವೇ ನಾಚಿ ತಲೆತಗ್ಗಿಸುವಂತಹ ಘಟನೆಯಾಗಿದೆ. ಇದನ್ನು ತಡೆಯುವಲ್ಲಿ ಬಿ.ಜೆ.ಪಿ. ನೇತೃತ್ವದ ಮಣಿಪುರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ.ಕಳೆದ 03 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೇ ಘರ್ಷಣೆ ನಡೆದಿದ್ದು, 03 ಜನರ ಹತ್ಯೆ ನಡೆದಿದೆ. ತಮ್ಮ ನಿವಾಸದಲ್ಲಿ ಮಲಗಿದ್ದ ಮೂವರ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ ನಡೆಸಿ ಬಳಿಕ ಕತ್ತಿಯಿಂದ ಕಡಿದು, ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಪೊಲೀಸರು ಮತ್ತು ದುಷ್ಕರ್ಮಿಗಳು ಒಟ್ಟಾಗಿ ಸೇರಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ರಕ್ಷಣೆ ಕೇಳಿದ ಮಹಿಳೆಯರನ್ನು ಪೊಲೀಸರೆ ಮುಂಡರ ಗುಂಪಿಗೆ ಒಪ್ಪಿಸಿರುವುದು ಇದಕ್ಕೆ ಸಾಕ್ಷಿ. ಮಣಿಪುರ ಪೊಲೀಸರ ತನಿಖೆಯ ಮೇಲೆ ನಮಗೆ ವಿಶ್ವಾಸವಿಲ್ಲ. ಭದ್ರತೆ ದೃಷ್ಟಿಯಿಂದ ಹತ್ತಿರದ ನ್ಯಾಯಾಲಯಗಳಿಗೆ ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.ಸಂತ್ರಸ್ಥೆಯರ ಮಾನಸಿಕ ಅಘಾತಕ್ಕೆ ಒಳಗಾಗಿದ್ದು, ಭಯಬೀತರಾಗಿದ್ದಾರೆ. ಸಿಬಿಐ (ಸಿಬಿಐ) ಮುಂದೆ ಸತ್ಯ ಹೇಳುತ್ತಾರೆ ಎಂಬ ವಿಶ್ವಾಸವಿಲ್ಲ. ಹಾಗಾಗೀ ಮಹಿಳೆಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಆಗಷ್ಟೆ ಅವರು ‘ಸತ್ಯ ಹಂಚಿಕೊಳ್ಳಲು ಸಾಧ್ಯ. ಡಿ.ಜಿ.ಪಿ. ದರ್ಜೆಯ ಪೊಲೀಸ್ ಅಧಿಕಾರಿ ನೇತೃತ್ವದ ಸ್ವಂತಂತ್ರ ವಿಶೇಷತಂಡದ ಮೂಲಕ ತನಿಖೆ ನಡೆಸಬೇಕು. ವಿಚಾರಣೆಯನ್ನು ಬೇರೆ ರಾಜ್ಯಕ್ಕೆವರ್ಗಾಯಿಸಬೇಕು. ಮಣಿಪುರದಲ್ಲಿ ಕುಕ್ಕಿ ಜನಾಂಗದ ಹೆಣ್ಣು ಮಕ್ಕಳು ಸೈನಿಕ ಕಾಲು ಹಿಡಿದುಕೊಂಡು ರಕ್ಷಣೆ ಕೇಳುತ್ತಿರುವುದು ಈ ದೇಶದ ವ್ಯವಸ್ಥೆಗೆ ಹಿಡಿದು ಕೈಕನ್ನಡಿಯಾಗಿದೆಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಉಲ್ಬಣಗೊಂಡಿರುವುದರ ನಡುವೇಯೇ ಗಲಭೆಯ ಸಂತ್ರಸ್ಥರಿಗೆ ಪರಿಹಾರ ನೀಡಿಕೆ ಮತ್ತು ಪುರ್ನವಸತಿಯ ಮೇಲ್ವಿಚಾರಣೆಗೆ ಹೈಕೋರ್ಟ್‌ ಮೂವರು ನಿವೃತ್ತ ಮಹಿಳಾ ನ್ಯಾಯಮೂರ್ತಿಗಳ ಸಮತಿಯನ್ನು ಸುಪ್ರಿಂ ಕೋರ್ಟ್ ರಚನೆ ಮಾಡಿರುವುದು ಸಮಿತಿ ಸ್ವಾಗತಿಸುತ್ತದೆ. ಸಂತಸ್ಥರಿಗೆ ನ್ಯಾಯ ಒದಗಿಸಿ ಕೊಡುತ್ತದೆಂದು ಸಮಿತಿ ಆಶಿಸಿದೆ.’ಮಹಿಳೆಯರ ಮೇಲಿನ ಅಮಾನುಷಕರವಾದ ಅತ್ಯಾಚಾರ ಮತ್ತು ಬೆತ್ತಲು ಮೆರವಣಿಗೆ ಮತ್ತು ಗುಂಪು ಹತ್ಯೆಯನ್ನು ಸಮಿತಿಯು ಉಗ್ರವಾಗಿ ಖಂಡಿಸುತ್ತದೆ.

ಅಲ್ಲದೇ ಸಂತ್ರಸ್ಥ ಮಣಿಪುರದ ಮಹಿಳೆಯರಿಗೆ ನ್ಯಾಯ ಹಾಗೂ “ಸೌಜನ್ಯ ಹತ್ಯೆ ನಡೆದು 11 ವರ್ಷ ಆದರೂ ಇನ್ನು ನ್ಯಾಯ ಸಿಕ್ಕಿಲ್ಲ ಆಕೆಯ ಹತ್ಯೆಯ ನೈಜ್ಯ ಆರೋಪಿ ಬಂಧನ ಆಗಬೇಕು. ಸಿಐಐ ಕೋರ್ಟ್ ತೀರ್ಪಿನಲ್ಲಿ ನೈಜ್ಯ ಆರೋಪಿಗೆ ಶಿಕ್ಷೆಯಾಗಲಿಲ್ಲಾ ಸೌಜನ್ಯಳಿಗೆ ನ್ಯಾಯ ಸಿಗಲಿಲ್ಲಾ ತನಿಖಾ ತಂಡದಿಂದ ನೈಜ್ಯ ಆರೋಪಿಗೆ ಶಿಕ್ಷೆ ಆಗಲಿಲ್ಲಾ ರಾಜ್ಯ ಸರ್ಕಾರ ಮರು ತನಿಖೆಗೆ ಒಳಪಡಿಸಿ, ನಿಜವಾದ ತಪಿತಸ್ಥರಿಗೆ ಶಿಕ್ಷೆ ಆಗಬೇಕು.”ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ದ್ಯಾವಂತಗಿ ಗ್ರಾಮದ ಬಾಲಕಿ ಪ್ರೀತಿ ತಂದೆ ಪರಮೇಶ್ವರ ನಾಯ್ಕಡಿ’ ಎಂಬ ಚಿಕ್ಕ ಮಗುವಿನ ಮೇಲೆ ಅತ್ಯಚಾರವೆಸಗಿ ಕೊಲೆ ಮಾಡಿ ಭಾವಿಯಲ್ಲಿ ಎಸಗಿರುವುದನ್ನು ನಮ್ಮ ಸಮಿತಿಯ ಉಗ್ರವಾಗಿ ಖಂಡಿಸುತ್ತದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಲು ಮತ್ತು ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರಿಗಿಸಲು ಸಮಿತಿಯು ಆಗ್ರಹಿಸುತ್ತದೆ.ಹಾಗೂ 2 ಮನವಿ ಪತ್ರ “ಅಲ್ಲದೇ ಎ.ಐ.ಸಿ.ಸಿ. ರಾಷ್ಟ್ರೀಯ ಅಧ್ಯಕ್ಷರು ಮತ್ತು ಬುದ್ಧ ಬಸವ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ರವರ ಅನುಯಾಯಿಗಳಾದ ಡಾ.ಮಲ್ಲಿಕಾರ್ಜುನ ಖರ್ಗೆಯವರು ದೇಶದ ಕೋಟ ಕೋಟಿ ಜನರ ಧ್ವನಿಯಾಗಿದ್ದಾರೆ. ಖರ್ಗೆಯವರ ಬಗ್ಗೆ ಅಪ್ಪಟ ಹಿಂದುವಾದಿ, ಮತ್ತು ಜಾತಿವಾದಿ ಮನಸ್ಥಿತಿಯ ಮಾಜಿ ಸಚಿವರ ಅರಗಜ್ಞಾನೇಂದ್ರ ರವರು ಆಡಿರುವ ಮಾತು ಕೇಶವ ಕೃಪದ ಪಭಾವದ ಮಾತು, ಬಿ.ಜೆ.ಪಿ. ಅಂತರಂಗದೊಳಗೆ ಅಡಗಿದ ಶೋಷಿತರ ಬಗೆಗಿನ ಅಸಹನೆಯ ಮಾತುಗಳಾಗಿವೆ. ಅರಗಜ್ಞಾನೇಂದ್ರರವರೇ ಸುಟ್ಟಕರಗಳಿದ್ದು,ನಿಮ್ಮ ಬುದ್ದಿಯೇ ಹೊರತು, ಕಲ್ಯಾಣ ಕರ್ನಾಟಕದ ಜನರಲ್ಲ. ಬಿ.ಜೆ.ಪಿ.ಯ ಈ ಅಸಹನೆಯ ಮಾತು, ಬಿ.ಜೆ.ಪಿಯನ್ನು ಸುಟ್ಟು ಕರಗಲು ಮಾಡುತ್ತದೆ, ಏಕೆಂದರೇ ಇದು ಮನಸ್ಸತಿಯ ಕಾಲವಲ್ಲ ಇದನ್ನು ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಮತ್ತು ಅವಿವೆಕಿಯಾದ ಅರಗಜ್ಞಾನೇಂದ್ರ ಕಠಿಣ ಕ್ರಮ ರವರ ಮೇಲೆ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಒತ್ತಾಯಿಸುತ್ತದೆ.3 ಮನವಿ ಪತ್ರ”ಹೊಸಪೇಟೆ ನಗರದ 2ನೇ ವಾರ್ಡ್ 88-ಮುದ್ಲಾಪುರದಲ್ಲಿ ಸುಮಾರು, 138 ಕುಟುಂಬಗಳು ವಾಸವಾಗಿದ್ದು ಮತ್ತು 36 ಕುಟುಂಬಗಳು ಬಾಡಿಗೆಯಲ್ಲಿ ಜೀವನ ನಡೆಸುತ್ತಿದ್ದು, ಇವರು ಆರ್ಥಿಕವಾಗಿ ದುರ್ಬಲರಾಗಿದ್ದು, ಕಡುಬಡವರಾಗಿರುತ್ತಾರೆ. ಇವರು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ಸ್ಥಳದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದು, ಇವರು ಬಹಳ ಆತಂಕದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ರೈಲ್ವೆ ಇಲಾಖೆಯವರು 2017ನೇ ಇಸ್ವಿ ಮೇ ತಿಂಗಳಿನಲ್ಲಿ ರೈಲ್ವೆ ಇಲಾಖೆಯವರು ಮನೆಗಳನ್ನು ತೆರವುಗೊಳಿಸುವ ನೋಟಿಸ್‌ನ್ನು ಜಾರಿ ಮಾಡಿರುತ್ತಾರೆ.ಕಾರಣ ಈ ಬಡ ಕೂಲಿಕಾರ್ಮಿಕರಿಗೆ ಯಾವ ಸಮಯದಲ್ಲಾದರೂ ತೆರವುಗೊಳಿಸಬಹುದು. ಒಂದುವೇಳೆ ತೆರವುಗೊಳಿಸಿದರೆ ಈ ಕುಟುಂಬಗಳ ತೊಂದರೆ ಆಗುತ್ತಾರೆ,ಆರ್ಥಿಕವಾಗಿ ಹಿಂದುಳಿದಿದ್ದು ಸ್ವಂತ ಶಕ್ತಿಯಿಂದ ನಿವೇಶನಗಳನ್ನು ಕೊಳ್ಳಲು ಸಾಧ್ಯವಿಲ್ಲ. ಕಳೆದ ಸಾಲಿನಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಶಾಸಕರಿಗೆ, ಮತ್ತು ಸಚಿವರ ಗಮನಕ್ಕೆ ಮನವಿ ಪತ್ರ ಸಲ್ಲಿಸಿರುತ್ತೇವೆ. ಇದುವರೆಗೂ ಈ ಬಡ ಕೂಲಿ ಕಾರ್ಮಿಕರಿಗೆ ಸ್ಥಳ ಮತ್ತು ನಿವೇಶನಗಳು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಕಾರಣ ದಯಾಳುಗಳಾದ ತಾವುಗಳು ಈ ಕಡುಬಡವರಿಗೆ ಹೊಸಪೇಟೆ ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ಸ್ಥಳ ಖರೀದಿ ಮಾಡಿ ಅಥವಾ ಸರ್ಕಾರದ ಭೂಮಿ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಭೂಮಿಯಲ್ಲಿ ನಿವೇಶನಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಡ ಹೇರಲಾಯಿತು ಮನವಿ ಪತ್ರವನ್ನು ನೀಡಲಾಯಿತು.ಈ ಸಂದರ್ಭದಲ್ಲಿ(D S S) ಮುಖಂಡರುಗಳಾದ ಶ್ರೀ.ಬಿ.ಮರಿಸ್ವಾಮಿ,ಕೆ. ಲಕ್ಷ್ಮಣ್,ಹೆಚ್‌ .ಸೋಮಶೇಖ‌,ಜೆ.ಜಗನ್ನಾಥ,ಹೆಚ್‌.ನಾಗಪ್ಪ,ಕೊಟಲ್ ವೀರೇಶ್,ಹೆಚ್.ಆರ್.ಉದಯ್‌,ವೈ.ಶೇಖ‌,ಹೆಚ್‌.ಪಂಪಾಪತಿ ಇನ್ನು ಹಲವಾರು ಮುಖಂಡರು ಕಾರ್ಯದರ್ಶಿಗಳು ಮಹಿಳೆಯರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button