ಎಸ್.ಡಿ.ಪಿ.ಐ ಯಿಂದ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಅಂಬೇಡ್ಕರ್ ಜಾಥಾ.
ಹೊಸಪೇಟೆ ಡಿಸೆಂಬರ್.8

ಎಸ್ ಡಿ ಪಿ ಐ ಪಕ್ಷದಿಂದ ಬೆಂಗಳೂರಿನಿಂದ ಬೆಳಗಾವಿ ತನಕ ಸಾಮಾಜಿಕ ನ್ಯಾಯ ಜಾರಿಗಾಗಿ ಅಂಬೇಡ್ಕರ್ ಜಾಥಾ ಚಲೋ ಹಮ್ಮಿಕೊಂಡಿದ್ದರ ಭಾಗವಾಗಿ ಎಸ್ ಡಿ ಪಿ ಐ ಪಕ್ಷದ ನೂರಾರು ಕಾರ್ಯಕರ್ತರು ಸೇರಿ ಹಕ್ಕೋತ್ತಾಯಗಳ ಬೇಡಿಕೆಗಳು ಈಡೇರಿಕೆಗಾಗಿ, ಹೊಸಪೇಟೆ ನಗರದ ಮುಖ್ಯ ಬೀದಿಗಳಲ್ಲಿ ಜಾಥಾ ಮೂಲಕ ಘೋಷಣೆಗಳನ್ನು ಕೂಗುತ್ತಾ ಸಂಚರಿಸಿದರು.ಹಕ್ಕೋತ್ತಾಯಗಳು : 1. ಕಾಂತರಾಜ್ ಆಯೋಗ ವರದಿಯನ್ನು ಸ್ವೀಕರಿಸಿ ಸಾರ್ವಜನಿಕ ಗೊಳಿಸಬೇಕು.2. ಸದಾಶಿವ ವರದಿಯನ್ನು ಕೇಂದ್ರ ಒಕ್ಕೂಟ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.3. ಮುಸ್ಲಿಮರ 2.ಬಿ ಮೀಸಲಾತಿಯನ್ನು ಮರು ಸ್ಥಾಪಿಸಿ ಶೇಕಡ 8.ಕ್ಕೆ ಏರಿಸಬೇಕು. ಎಂದು ಘೋಷಣೆಗಳನ್ನು ಕೂಗುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಸಾಗಿದರು.ಈ ಮೂರು ಹಕ್ಕೋತ್ತಾಯಗಳನ್ನು ನ್ಯಾಯಯುತವಾದ, ಸಂವಿಧಾನ ಬದ್ಧವಾದ ಹಕ್ಕೊತ್ತಾಯಗಳನ್ನು ಸರ್ಕಾರ ಕೂಡಲೇ ಪರಿಗಣಿಸಿ ಡಿಸೆಂಬರ್ 4.ನೇ ತಾರೀಕಿ ನಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಾರಂಭವಾಗಿರುವ ಅಧಿವೇಶನದಲ್ಲಿ ಮಂಡಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳ ಬೇಕೆಂದು, ಕರ್ನಾಟಕದ ಸಮಸ್ತ ಶೋಷಿತ ಅವಕಾಶ ವಂಚಿತ ಜನತೆಯ ಪರವಾಗಿ ಸರ್ಕಾರವನ್ನು ಒತ್ತಾಯಿಸಲು, ಬೆಂಗಳೂರಿನ ವಿಧಾನ ಸೌಧದಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಚಲೋ ಬೆಳಗಾವಿ ಜಾಥಾವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿ ನಿಬ್ಬಾಣ ದಿನ ಡಿಸೆಂಬರ್ 6 ರಿಂದ ಆರಂಭಿಸಲಾಗಿದ್ದು.ಡಿಸೆಂಬರ್ 6 ರಂದು ಬೆಂಗಳೂರಿ ನಿಂದ ಶುರುವಾದ ಜಾಥಾ ತುಮಕೂರು, ಚಿತ್ರದುರ್ಗ,ವಿಜಯನಗರ, ಕೊಪ್ಪಳ,ರಾಯಚೂರು,ಯಾದಗಿರಿ,ಬಿಜಾಪುರ, ಬಾಗಲಕೋಟೆ ಮಾರ್ಗವಾಗಿ ಡಿ.11 ಕ್ಕೆ ಬೆಳಗಾವಿ ತಲುಪಲಿದೆ.ಈ ಜಾಥಾದಲ್ಲಿ ಎಸ್ ಡಿ ಪಿ ಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಾಬ್, ರಾಜ್ಯಾ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಮತ್ತು ಭಾಸ್ಕರ್ ಪ್ರಸಾದ್, ರಾಜ್ಯ ಸಮಿತಿಯ ಸದಸ್ಯ ರಿಯಾಜ್ ಪಡಂಬೂರ್, ಪಕ್ಷದ ಕಾರ್ಯಕರ್ತರು ಜಾಥಾದಲ್ಲಿ ಭಾಗಿಯಾಗಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ