ಗ್ರಾ.ಪಂ ಉಪಾಧ್ಯಕ್ಷರಾಗಿ ಸಿದ್ದನಗೌಡ ಚೌದ್ರಿ – ಅವಿರೋಧ ಆಯ್ಕೆ.
ಹುಣಶ್ಯಾಳ ಫೆ.10

ದೇವರ ಹಿಪ್ಪರಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಸಿದ್ದನಗೌಡ ಚೌದ್ರಿ ಯವರು ಸರ್ವ ಸದಸ್ಯರ ಬೆಂಬಲದಿಂದ ಆಯ್ಕೆಯಾದರು, ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಬರುವ ಆಲಗೂರ. ಚಟಿನ್ನಳ್ಳಿ.

ಸಲಾದಳ್ಳಿ ಗ್ರಾಮದ ಎಲ್ಲಾ ಸದಸ್ಯರು, ಹಾಗೂ ಅಧ್ಯಕ್ಷರು ಕೂಡಿ ಅವಿರೋಧವಾಗಿ ಆಯ್ಕೆ ಮಾಡಿದರು ಎಂದು ಚುನಾವಣೆ ಅಧಿಕಾರಿಗಳಾದ ಭಾರತಿ ಚಲವ್ಯನವರು ಹೇಳಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕಾಶಿನಾಥ ಕಂಡಕಭಾವಿ ಹಾಗೂ ಸಿಬ್ಬಂದಿ ಗಳು ಹಾಗೂ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ