“ಯೋಗ ದಿಂದ ಹಲವಾರು ರೋಗಗಳು ಮುಕ್ತವಾಗುತ್ತವೆ”.
ಕಲಕೇರಿ ಜೂನ್.21

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನವನ್ನು ಶಾಲೆಯ ಮುಖ್ಯ ಗುರುಗಳಾದ ಬಸವರಾಜ ದೇವರಮನಿ ವಿದ್ಯಾರ್ಥಿಗಳಿಗೆ ಮಾನಸಿಕ ಯೋಗ ಕ್ಷೇಮ ಯೋಗ ಪರಿವರ್ತನೆ ಅಭ್ಯಾಸ ಮನಸ್ಸು ದೇಹ ಸಾಮರಸ್ಯ ಆಲೋಚನೆ ಮತ್ತು ಕ್ರಿಯೆಯ ನಡುವಿನ ಸಮತೋಲನ ವಿದ್ಯಾರ್ಥಿಗಳಿ ಯೋಗ ಮಾಡೋದ್ರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಮನುಷ್ಯನಲ್ಲಿ ಯಾವ ರೋಗಗಳು ಬರುವುದಿಲ್ಲ ಎಂದು ಹೇಳಿ ಕೊಟ್ಟರು. ಸಹ ಶಿಕ್ಷಕರಾ ಶ್ರೀ ವಿನೋದ್ ನಂದಿಮಠ್ ಯೋಗ ದಿಂದ ಆಗುವ ಪ್ರಯೋಜಗಳು ಯೋಗದಿಂದ ಹಲವಾರು ರೋಗಗಳು ಮುಕ್ತವಾಗುತ್ತವೆ ಎಂದು ತಿಳಿಸಿದ್ದರು. ಶಾಲೆಯ ಗುರು ಮಾತೆಯರಾದ ಶ್ರೀ ಮತಿ ನೀಲಮ್ಮ. ಸುಲೆಗಾವಿ. ಶ್ರೀ ಬಿಸ್ಮಿಲ್ಲಾ ಉಸ್ತಾದ ಶ್ರೀ ಮತಿ ಪ್ರಿಯಾ ಮನೂರ್ ಶ್ರೀ ಮತಿ ದಾನಮ್ಮ ಹವಾಲ್ದಾರ ಎಲ್ಲರೂ ಇದ್ದರು.
ತಾಲೂಕ ವರದಿಗಾರರು ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.