ನುಲಿಯ ಚಂದಯ್ಯ ಕಾಯಕದಿಂದ ಮುಕ್ತಿ ಹೊಂದಿದ್ದಾರೆ – ರಚನಾ ಶ್ರೀನಿವಾಸ್.

ತರೀಕೆರೆ ಆಗಷ್ಟ.31

ನುಲಿಯ ಚಂದಯ್ಯನವರು ದುಡಿಮೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು ಕಾಯಕವೇ ಕೈಲಾಸ ಎಂದು ನಂಬಿದ್ದರು, ಇವರು ಕಾಯಕದಿಂದ ಮುಕ್ತಿ ಹೊಂದಿದ್ದಾರೆ ಎಂದು ಶಾಸಕ ಜಿಎಚ್ ಶ್ರೀನಿವಾಸ್ ರವರ ಪುತ್ರಿ ರಚನಾ ಶ್ರೀನಿವಾಸ್ ಇಂದು ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಕೊರಮ, ಕೊರಚ ಸಮಾಜದ ಆರಾಧ್ಯ ದೈವ ನುಲಿಯ ಚಂದಯ್ಯ ನವರ 916ನೇ ಜಯಂತೋತ್ಸವವನ್ನು ಉದ್ಘಾಟನೆ ಮಾಡಿ ಹೇಳಿದರು. ದುಡಿಮೆಯಲ್ಲಿ ದೇವರನ್ನು ಕಾಣಬೇಕು ಈ ಸಮುದಾಯದಲ್ಲಿರುವ ಎಲ್ಲರೂ ವಿದ್ಯಾವಂತರಾಗಬೇಕು ಶಿಕ್ಷಣಕ್ಕೆ ಹೆಚ್ಚು ಗಮನ ಕೊಡಬೇಕು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಸನ್ಮಾನ ಮಾಡುತ್ತಿರುವುದು ಅವರಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕರಾದ ಟಿ ಜಿ ಮಂಜುನಾಥ್ ಮಾತನಾಡಿ ಈ ಸಮುದಾಯದವರು ಶ್ರಮಪಟ್ಟು ಜೀವನ ನಡೆಸುವವರು ಇವರು ಎಲ್ಲೂ ಕೂಡ ವಿಜೃಂಭಿಸಲಿಲ್ಲ ಮುಂದಿನ ದಿನಗಳಲ್ಲಿ ಹೆಚ್ಚು ಪ್ರಕಾಶ ಮಾನವಾಗಬೇಕಾಗಿದೆ ಎಂದು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಶೋಷಿತ ಸಮಾಜದವರಿಗೆಲ್ಲ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧ ಎಲ್ಲ ಜಾತಿ ಸಮುದಾಯದವರಿಗು ಸಹ ಲಿಂಗಧಾರಣೆ ಮಾಡಿ ಮೇಲು ಕೀಳು ಭಾವನೆ ನಮ್ಮಲ್ಲಿ ಬರಬಾರದು ಎಂದು,ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೆ.

ಜಾತಿವಾದಿಗಳ ಪುರೋಹಿತಶಾಹಿಗಳ ಸಂಸ್ಕೃತಿ ಆಚಾರ ವಿಚಾರಗಳನ್ನು ಧಿಕ್ಕರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ತರೀಕೆರೆ ಪಟ್ಟಣಕ್ಕೆ ಬಸವಣ್ಣನವರ ಸೋದರಿ ಅಕ್ಕ ನಾಗಲಾಂಬಿಕೆ ಬಂದು ನೆಲೆಸಿ ಐಕ್ಯವಾದ ಪುಣ್ಯ ಸ್ಥಳವಿದು. ತರೀಕೆರೆ ತಾಲೂಕಿನ ನಂದಿ ಗ್ರಾಮದಲ್ಲಿ ನುಲಿಯ ಚಂದಯ್ಯ ನವರು ಬಂದು ನೆಲೆಸಿದ್ದಾರೆ. ಆದರೆ ನುಲಿ ಚಂದಯ್ಯ ನವರ ಜಾತ್ರೋತ್ಸವ ಹಾಗೂ ದಾಸೋಹ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿಯವರಿಗೂ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಕೊರಚ,ಕೊರಮ ಸಮಾಜದ ಅಧ್ಯಕ್ಷರಾದ ವಿ ಗಾಳಪ್ಪ ಮಾತನಾಡಿ ಸರ್ಕಾರ ಕಳೆದ ವರ್ಷದಿಂದ ಕುಳುವ ಸಮಾಜದವರು ನುಲಿಯ ಚಂದಯ್ಯ ನವರ ಜಯಂತಿ ಮಾಡಲು ಅವಕಾಶ ಮಾಡಿದೆ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದರು. ಹಿರಿಯ ಪತ್ರಕರ್ತರಾದ ಅನಂತ ನಾಡಿಗ್ ಮಾತನಾಡಿ ಈ ಸಮುದಾಯದ ಮಕ್ಕಳು ಯುವಕರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ವಿಜ್ಞಾನಿಗಳು ಮಾಡಿರುತ್ತಾರೆ. ಇದನ್ನು ನಾವು ಕಾಯಕ ಚಿಂತನೆ ಎನ್ನುತ್ತೇವೆ ಎಂದು ಹೇಳಿದರು. ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರನ್ನು 162 ದೇಶಗಳಲ್ಲಿ ಸ್ಮರಿಸುತ್ತಾರೆ ಅವರ ಪುತ್ತಳಿಗಳನ್ನು ಇರಿಸಿ ಪೂಜಿಸುತ್ತಿದ್ದಾರೆ. ಅವರು ಸಂವಿಧಾನ ಬರೆದಿರುವುದರಿಂದ ಶೋಷಿತ ಕೆಳ ಜಾತಿಯವರಿಗೆ ಸಂವಿಧಾನ ಬದ್ಧ ಮೀಸಲಾತಿ ಸೌಲಭ್ಯಗಳು ಸಿಗುತ್ತಿವೆ. ನುಲಿಯ ಚಂದಯ್ಯ ನವರು ಬಸವಣ್ಣನವರ ಅನುಯಾಯಿಗಳು, ಮಾನವ ಜನಾಂಗ ಒಂದೇ ಕಾಯಕದ ಮೂಲಕ ನಾವೆಲ್ಲರೂ ಮುಂದೆ ಬರಬೇಕಾಗಿದೆ ಎಂದು ಹೇಳಿದರು. ಮನುಸಲಿ ಮೋಹನ್ ಪ್ರಸ್ತಾವಿಕವಾಗಿ ಮಾತನಾಡಿ ಒಂಬತ್ತು ಶತಮಾನಗಳು ಗತಿಸಿದ್ದರು ಸಹ ನುಲಿಯ ಚಂದಯ್ಯ ನವರ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತವಾಗಿವೆ.

ಮೂಢನಂಬಿಕೆ ಕಂದಾಚಾರಗಳನ್ನು ಬಿಟ್ಟು ಕಾಯಕದ ಮೂಲಕ ಅಭಿವೃದ್ಧಿ ಹೊಂದಬೇಕು ವೈಚಾರಿಕ ಚಿಂತನೆ ವೈಜ್ಞಾನಿಕ ಮನೋಭಾವನೆ ತೆಗೆದುಕೊಳ್ಳಬೇಕು. ಬುದ್ಧ ಬಸವ ಅಂಬೇಡ್ಕರ್ ರವರನ್ನು ಅನುಸರಿಸಬೇಕು ಅರಿವು ಪಡೆದುಕೊಳ್ಳಬೇಕು. ಮೌಡ್ಯಗಳಿಂದ ಯಶಸ್ಸು ಖಂಡಿತ ಇಲ್ಲ, ಸಮ ಸಮಾಜದ ನಿರ್ಮಾಣದ ಕಡೆ ಎಲ್ಲರ ಗುರಿಯಾಗಬೇಕು. ಬುದ್ಧನ ಬೇರು, ಬಸವಣ್ಣನವರ ಬೆಳೆಗೆ ಅಂಬೇಡ್ಕರ್ ಜೀವದಾನ ನೀಡಿದರು. ಗ್ರಂಥಾಲಯಕ್ಕೆ ಹೋಗಿ ಜ್ಞಾನ ಸಂಪಾದನೆ ಮಾಡಿ ಪ್ರಕೃತಿ ದೇವರೆಂದು ಭಾವಿಸಿ, ಧಾರ್ಮಿಕ ಶೋಷಣೆಗಳಿಗೆ ಒಳಗಾಗಬೇಡಿ ಎಂದು ಹೇಳಿದರು. ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನ ಮಾಡಲಾಯಿತು. ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್ ತಿಪ್ಪೇಶ್ ಮಾತನಾಡಿ ಸಮಾಜದ, ನುಲಿಯ ಚಂದಯ್ಯ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಶಾಸಕರು ನಿವೇಶನವನ್ನು ಮಂಜೂರಿ ಮಾಡಿಕೊಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಟ್ಟಿ ಆನಂದ, ಪುರಸಭಾ ಮಾಜಿ ಅಧ್ಯಕ್ಷರಾದ ಯಶೋದಮ್ಮ ಬಸವರಾಜ್, ನಂದಿ ಹೊಸಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಎ ಕುಮಾರ್, ಬಾವಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭದ್ರಪ್ಪ, ಅಜ್ಜಂಪುರ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಎಲ್ ಜಯಪ್ಪ, ಉಪಸ್ಥಿತರಿದ್ದು ಕುಮಾರಿ ಯಶೋಧ ಪ್ರಾರ್ಥಿಸಿ ತಿಪ್ಪೇಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button