ವಿಜಯನಗರ ಜಿಲ್ಲೆಯಲ್ಲಿ ರಾಜ್ಯದ ಅತಿ ಎತ್ತರ ಬಾಬಾ ಸಾಹೇಬ್ ಪ್ರತಿಮೆ ಅದ್ದೂರಿಯಾಗಿ ಲೋಕಾರ್ಪನೆಗೊಂಡಿತು
ಹೊಸಪೇಟೆ ಮಾರ್ಚ್:26
ಸಂಸತ್ ಭವನದ ಮೇಲೆ ನಿಂತಿರುವ 12.5 ಅಡಿ ಎತ್ತರದ ಸಂವಿಧಾನ ಶಿಲ್ಪಿಯ ಭವ್ಯ ಪ್ರತಿಮೆಯಂತೆ ಇರುವ ಈ ಪ್ರತಿಮೆಯನ್ನು ನೋಡಿದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದ್ದರು
ನಗರ ಸೇರಿ ವಿಜಯನಗರ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನ ಆಗಮಿಸಿದ್ದು ಕಾರ್ಯಕ್ರಮದಲ್ಲಿ ನಗರಸಭೆ ,ಅಧ್ಯಕ್ಷ ಸುಂಕಲಮ್ಮ , ಶ್ರೀ ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಗಳು ಮಾತಂಗ ಪರ್ವತ ಹಂಪಿ, ಶ್ರೀ ಶ್ರೀ ಷಡಕ್ಷರ ಮುನಿ ಆದಿ ಜಾಂಬವಂಥ ಮಠ ಕೋಡಿಹಳ್ಳಿ, ಆನಂದ್ ಸಿಂಗ್, ಎಚ್. ಆಂಜನೇಯ ವಿಜಯನಗರ ಜಿಲ್ಲೆ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಕೆ.ಪಿ ಉಮಾಪತಿ ಮುಖಂಡರಾದ ಎಂ.ಸಿ ವೀರ ಸ್ವಾಮಿ ಎಲ್ಲಾ ಸಮಾಜದ ಮುಖಂಡರು ಇತರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ಅವರು ಮಾತನಾಡಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮದ ಸಂವಿಧಾನ ರಚನೆಯಾಗಿದೆ. ಸೂರ್ಯ-ಚಂದ್ರರು ಇರುವವರಿಗೆ ಶಾಶ್ವತವಾಗಿರುತ್ತದೆ.
ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನವೇ ಇರಲಿಲ್ಲ ಎಂದರೆ ದೇಶದಲ್ಲಿ ಅಲ್ಲೋಲ ಕೋಟಿ ಭಾರತದ ಜನರಿಗೆ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳನ್ನು ಕಲ್ಪಿಸಲಾಗಿದೆ. ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಕೊಟ್ಟಿದ್ದು ಎಂದೆಂದಿಗೂ ಜೀವಂತವಾಗಿರುತ್ತದೆ ಎಂದು ಹೇಳಿದರು
ತಾಲೂಕ ವರದಿಗಾರರು:ಮಾಲತೇಶ್ ಶೆಟ್ಟರ್ ಹೊಸಪೇಟೆ