ದೇಶಕ್ಕೆ ಅನ್ನ ಕೊಡುವ ರೈತರ ಸಮಸ್ಯೆ ಬಗೆಹರಿಸಲು ಪ್ರತಿಭಟನೆ
ತರೀಕೆರೆ ಮಾರ್ಚ್:27
ತರೀಕೆರೆ — ಮೆಸ್ಕಾಂ ಅಧಿಕಾರಿಗಳು ಗ್ರಾಹಕರ ಸಭೆಗಳಿಗೆ ಗೈರು ಹಾಜರಾಗುತ್ತಿದ್ದಾರೆ, ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ತರೀಕೆರೆ ಮೆಸ್ಕಾಂ ಕಛೇರಿ ಎದುರು ಭಾರತೀಯ ಕಿಸಾನ್ ಸಭಾ – ಕರ್ನಾಟಕ, ಸಂಘಟನೆಯ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪರಮೇಶ್ವರಪ್ಪ ಆರೋಪಿಸಿ ಮಾತನಾಡಿದರು.
ಸಮರ್ಪಕ ವಿದ್ಯುತ್ ಕೊಡುತ್ತಿಲ್ಲ, ಟ್ರಾನ್ಸ್ ಫಾರ್ಮ್ ಸುಟ್ಟು ಹೋದರೆ, ಸರ್ಕಾರದ ನಿಯಮದ ಪ್ರಕಾರ 72 ಗಂಟೆಗಳಲ್ಲಿ ದುರಸ್ತಿ ಮಾಡಿ ಸರಿಪಡಿಸಬೇಕು ಆದರೆ ಎರಡು ತಿಂಗಳಾದರೂ ಸಹ ಸರಿಪಡಿಸಿರುವುದಿಲ್ಲ ಆದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. 2-3 ಗ್ರಾಹಕರ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು, ಬರೆಸಿರುವ ಸಮಸ್ಯೆಗಳನ್ನು ಬಗೆಹರಿಸಿರುವುದಿಲ್ಲ ಕಾಟಾಚಾರಕ್ಕೆ ಸಭೆಗಳನ್ನು ಮಾಡುತ್ತಿದ್ದಾರೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ.
ರೈತರು ದೇಶಕ್ಕೆ ಅನ್ನ ಕೊಡುವವರು, ದನ ಕರುಗಳನ್ನು ಪಾಲನೆ ಮಾಡಬೇಕು, ಮನೆಯಲ್ಲಿ ವಯೋ ವೃದ್ಧರನ್ನು ನೋಡಿಕೊಳ್ಳಬೇಕು, ಎಲ್ಲಾ ಕೆಲಸಗಳನ್ನು ಬಿಟ್ಟು ಪ್ರತಿಭಟನೆ ಧರಣಿ ಸತ್ಯಾಗ್ರಹ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪರಿಸ್ಥಿತಿ ರೈತರಿಗೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತರ ಪ್ರತಿಭಟನೆ ಮತ್ತು ಧರಣಿಯನ್ನು ತರೀಕೆರೆ ಪೊಲೀಸು ನಿರೀಕ್ಷಕರಾದ ವೀರೇಂದ್ರ ಅವರು ಶಿವಮೊಗ್ಗದ ಚೀಪ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸಪ್ಪ ರವರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿ, ಬಸಪ್ಪ ರವರು ಹಾಗೂ ಚಿಕ್ಕಮಗಳೂರಿನ ಸೋಮಶೇಖರ್ ಎಸ್ ಇ ಇ, ಕಡೂರಿನ ಲಿಂಗರಾಜು ಇಇ, ತರೀಕೆರೆಯ ಕುಮುದಾ ಇ ಇ ರವರನ್ನು ಮತ್ತು ಪ್ರತಿಭಟನಾ ನಿರತರ ಮಧ್ಯೆ ಸಮಸ್ಯೆ ಬಗೆಹರಿಸಲು ಮುಂದಾಗಿ ಭಾರತೀಯ ಕಿಸಾನ್ ಸಭಾ ತರೀಕೆರೆ ಘಟಕದ ಅಧ್ಯಕ್ಷರಾದ ಎಸ್ ಪಿ ಚಂದಪ್ಪ, ರುದ್ರಯ್ಯ,ವಿಶ್ವನಾಥ, ದಕ್ಷಿಣ ಮೂರ್ತಿ, ಹೊಸಳ್ಳಿ ತಿಪ್ಪೇಶ್, ಸುಣ್ಣದ ಹಳ್ಳಿಯ ಸುರೇಶ್, ಲಕ್ಕವಳ್ಳಿಯ ರಾಘವೇಂದ್ರ, ಬಾವಿ ಕೆರೆಯ ಲಕ್ಷ್ಮಣ್, ರಂಗೇನಹಳ್ಳಿಯ ಮೋಹನ್ ಮುಂತಾದವರು ಪ್ರತಿಭಟನೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಮೆಸ್ಕಾಂ ಅಧಿಕಾರಿಗಳಾದ ಬಸಪ್ಪ ಸೋಮಶೇಖರ್ ಲಿಂಗರಾಜು ಕುಮುದಾ ಅವರು ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿ ಭರವಸೆ ನೀಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ