ಬುರುಡೆ ಬುಡುವರಂತೆ ಬಿಇಒ “ಪದ್ಮನಾಭ ಕರಣಂ”.
ಕೊಟ್ಟೂರು ಏಪ್ರಿಲ್.24

ಗೋಮುಖ ವ್ಯಾಘ್ರ ಬಿಇಒ “ಪದ್ಮನಾಭ ಕರಣಂ”
ನಮ್ಮ ದೇಶಕ್ಕೆ ಕೊಡುಗೆ ನೀಡಿರುವ ಮಹಾ ನಾಯಕರು ಈ ಪುಣ್ಯ ಭೂಮಿಯಲ್ಲಿ ಸವಿ ನೆನಪಿಗಾಗಿ ಅವರು ಹುಟ್ಟಿದ ದಿನದ ಜಯಂತಿಯನ್ನು ಆಚರಿಸಲಾಗುತ್ತದೆ. ಯಾರು ಜಾತಿಯ ಅರ್ಜಿಯನ್ನು ಹಾಕಿಕೊಂಡು ಹುಟ್ಟುವುದಿಲ್ಲ ಆದರಿಂದ ಅದನ್ನು ಲೆಕ್ಕಿಸ ಬಾರದು. ನಾಯಕರು ಅವರು ಯಾವ ಜಾತಿಗೆ ಸೇರಿದವರು, ಅಥವಾ ಯಾವ ಜನಾಂಗ ಸೀಮಿತರಾಗಿರುವರು, ಎಂಬುದಕ್ಕಿಂತ ಅವರು ನಮ್ಮ ದೇಶಕ್ಕೆ ಕೊಟ್ಟಿರುವ ಕೊಡುಗೆ ಏನು? ಎಂಬುದು ಬಹಳ ಮುಖ್ಯ. ಅದನ್ನು ಅರಿಯದೇ ಕೆಲವರು ಅವರ ಜಾತಿಯನ್ನು ಪರಿಗಣಗೆ ತೆದುಕೊಂಡು, ಅವರ ಜಯಂತಿ ದಿನ ಶಾಲೆ ಮತ್ತು ಕಾಲೇಜುಗಳನ್ನು ಬೀಗ ಹಾಕಿ ಬರದೆ ಇರುವುದು, ಬಂದರು ಸರಕಾರದ ಸುತ್ತೋಲೆ ಇದೆ ಎಂದು ಸರಕಾರದ ಒತ್ತಾಯಕ್ಕೆ ಜಯಂತಿ ಆಚರಣೆ ಮಾಡುವುದು, ಒಲ್ಲದ ಮನಸ್ಸಿನಿಂದ ಮಾಡುವುದು, ಬೇರೆಯವರ ಒತ್ತಾಯಕ್ಕೆ ಮಣಿದು ಮಾಡುವುದು, ಬೇಕಾಬಿಟ್ಟಿ ಮಾಡುವುದು, ಮಾಡದಿದ್ದರೂ ಮಾಡಿದ್ದೇವೆ ಎಂದು ಯಾವುದೋ ಮಾಡಿರುವ ಹಳೆ ಪೋಟೋ ಹಾಕುವುದು, ಜಿಪಿಎಸ್ ಪೋಟೋ ಕಡ್ಡಾಯ ಎಂದು ತಿಳಿದಿದ್ದರು, ಜಿ ಪಿ ಎಸ್ ಪೋಟೋವನ್ನು ಕ್ಯಾಂಬ್ರದಲ್ಲಿ ಸೆರೆ ಹಿಡಿಯದೆ ಇರುವುದು, ನಮ್ಮ ಹತ್ತಿರ ಪೋನ್ ಇಲ್ಲ ಅದಕ್ಕೆ ಪೋಟೋ ತೆಗೆದಿಲ್ಲ, ಸಿಮ್ ಆಗಲ್ಲೀ, ಪೋನ್ ಆಗಲ್ಲೀ ಸರಕಾರ ನಮಗೆ ಕೊಟ್ಟಿಲ್ಲ, ಅದಕ್ಕೆ ಪೋಟೋ ತೆಗೆದಿಲ್ಲ ಎಂದು ಹೇಳುವುದು ಇವು ಎಲ್ಲವೂ ಒಳ್ಳೆಯ ನಡತೆ ಅನಿಸುದಿಲ್ಲ. ಕೆಲವು ಬಲ್ಲವರು ಮತ್ತು ಸಾಹಿತಿಗಳು ಹೀಗೆ ನೆಪ ಹೇಳುವುದು ಒಳ್ಳೆಯ ನಡತೆಗಳಲ್ಲ ಎಂದು ಹೇಳುವರಂತೆ. ಒಳ್ಳೆಯ ಮನಸ್ಸಿಯಿಂದ ಜಯಂತಿ ಮತ್ತು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಎಲ್ಲರಿಗೂ ನಮ್ಮ ಸಾಮಾಜಿಕ ಮಾಧ್ಯಮ ಮತ್ತು ನ್ಯೂಸ್ ಚಾನೆಲ್ ನಿಂದ ಒಂದು ‘ಹ್ಯಾಟ್ಸ್ ಆಫ್’ ಹೇಳಿ ಬಿಡೋಣ. ವಿಜಯನಗರ ಜಿಲ್ಲೆ ಕೊಟ್ಟೂರು ಹೊಸ ತಾಲೂಕಿನ ಕೆಲವು ಶಾಲಾ ಕಾಲೇಜುಗಳಲ್ಲಿ ತಮ್ಮ ಮನಸ್ಸಿನಲ್ಲಿ ಯಾವುದೋ ಭಾವನೆಗಳನ್ನು ಇಟ್ಟು ಕೊಂಡು ಅಥವಾ ಉದ್ದೇಶ ಪೂರ್ವಕವಾಗಿಯೇ ಕೆಲವು ಶಾಲಾ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಮಾಡದೇ ಇದ್ದಿದ್ದು, ದಲಿತ ಮುಖಂಡರ ಗಮನಕ್ಕೆ ಬಂದ್ದಾಗ, ದಲಿತ ಯುವಕರು ಮತ್ತು ಮುಖಂಡರು ಜಯಂತಿ ಆಚರಣೆ ಮಾಡಿರುವ ಎಲ್ಲಾ ಶಾಲಾ ಕಾಲೇಜುಗಳ ಜಿ ಪಿ ಎಸ್ ಪೋಟೋದ ಒಂದು ಪ್ರತಿಯನ್ನು ಕೊಡುವಂತೆ ಕೂಡ್ಲಿಗಿ ಮತ್ತು ಕೊಟ್ಟೂರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ‘ಪದ್ಮನಾಭ ಕರಣಂ’ ರವರನ್ನು ಒತ್ತಾಯಿಸಿದ್ಧಕ್ಕೆ, ಅವರು ತಕ್ಷಣ ಮೇಸೇಜ್ ಹಾಕಿ, ಆ ಮೇಸೇಜು ಸಂದೇಶ ಬಂದ ಮೇಲೆ ಆಚರಣೆ ಮಾಡಿರುವರಂತೆ, ಇನ್ನು ಕೆಲವು ಶಾಲಾ ಕಾಲೇಜಿನವರು ಹಳೆಯ ಪೋಟೋ ಹಾಕಿ, ಈಗ ಮಾಡಿರುವೆವು ಎಂದು ಬಿಗುಮಾನದಿಂದ ಹೇಳಿ ಕೊಂಡಿರುವರಂತೆ. ಇನ್ನು ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಮಾಧ್ಯಮವರು ಕೇಳಿದರೆ, ಯಾವ ಶಾಲಾ ಕಾಲೇಜುಗಳು ಮಾಡಿರುವರು, ಯಾವ ಶಾಲಾ ಕಾಲೇಜಿನಲ್ಲಿ ಮಾಡದೇ ಇರುವರು ಎಂಬುದು ನಮಗೆ ಗೊತ್ತಿಲ್ಲ, ವರದಿ ಬಂದ ಮೇಲೆ ಕೇಳಿ ಹೇಳುತ್ತೇನೆ. ಎಂದು ಚಾಣಕ್ಷತನದ ಜಾರಿಕೆಯ ಉತ್ತರ ನೀಡುವರಂತೆ ಈ ಬುದ್ಧಿವಂತ ಅಧಿಕಾರಿ.ಈ ಅಸ್ಸಾಮಿ ಈ ಪೋಟೋ ತೆಗೆದುಕೊಂಡು ಏನು ಮಾಡುವಿರಿ? ಜಯಂತಿ ಆಚರಣೆ ಕಡ್ಡಾಯವಾಗಿ ಮಾಡಬೇಕು ಎಂದು ನಮ್ಮಗೆ ತಹಸೀಲ್ದಾರ್ ರವರು ಮೆಮೋ ಹಾಕಿಲ್ಲ, ಆದರೂ ಆಚರಣೆ ಮಾಡಿದ್ದೇವೆ. ನಮಗೆ, ನಿಮಗೆ ಪೋಟೋ ಕೊಡಲು ಸ್ವಲ್ಪ ಸಮಯಬೇಕು, ಕೋಡುವ ತನಕ ಕಾಯಬೇಕು.ಎಷ್ಟು ದಿನ ಎಂದು ಕೇಳಿದರೆ, ಒಂದು ನಾಲ್ಕು ಐದು ದಿವಸ ಸಮಯಬೇಕು, ಅದನ್ನು ರೆಡಿಮಾಡಿ ಕೊಡಬೇಕಲ್ಲ ಎಂದು ತನ್ನ ಬುರುಡೆ ಮಾತುಗಳಿಂದ, ಬೋಗಳೆ ಬಿಡುವರಂತೆ. ತನ್ನ ತಲೆಯಲ್ಲಿ ಇರುವ ಬುದ್ಧಿಯನೆಲ್ಲಾ ಉಪಯೋಗಿಸಿ ನನಗೆ ಯಾರು ಒಂದು ಐದು ನೂರು ರೂಪಾಯಿ ಕೊಡುವುದಿಲ್ಲ, ಪುಕ್ಸಟ್ಟೆಯಾಗಿ ಕೆಲಸ ಮಾಡಿಸಿಕೊಂಡು ಹಾಗೇ ಹೋಗುವರು. ಮತ್ತೆ 4, 5 ದಿವಸ ಬಿಟ್ಟು ಹೋದರೆ, ಸಿಬ್ಬಂದಿಗಳು ಯಾರು ಇಲ್ಲ, ನಾನು ಒಬ್ಬನೇ ಇರುವುದು, ಎಲ್ಲರೂ ಕೊಟ್ಟಿದ್ದಾರೆ ಅದನ್ನು ಜೆರಾಕ್ಸ್ ಮಾಡಿ ಕೊಡಲು ಕರೆಂಟು ಇಲ್ಲ, ಕೊಡುತೇನೆ ತಡೆಯಿರಿ ಎಂದು ಹೇಳುವರಂತೆ. ಹೀಗೆ ಕ್ಷಣ ಕ್ಷಣಕ್ಕೂ ಕುರುಡು ನೆಪ ಹೇಳುತ್ತಾ, ಜಾರಿಕೆಯ ಉತ್ತರ ನೀಡಿ ಜಾರಿ ಕೊಳ್ಳುವರಂತೆ. ಒಟ್ಟಿನಲ್ಲಿ ಸುಮಾರು 10 ದಿವಸವಾದರು ಅಂಬೇಡ್ಕರ್ ಜಯಂತಿ ಆಚರಣೆ ಮಾಡಿರುವ ಯಾವುದೇ ಕಡತವನ್ನು ನೀಡುತ್ತಿಲ್ಲ. ಎರಡು ಸಲ ಪತ್ರಿಕೆಯಲ್ಲಿ ಪ್ರಕಟವಾದರೂ,ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದನ್ನು ನೋಡಿದರೆ ಇದು ಒಂದು ವಿಪರ್ಯಾಸವೆ ಸರಿ.ಈ ಭಾಗದ ಶಾಸಕರು ಮತ್ತು ಅಧಿಕಾರಿಗಳು ಏನು ಮಾಡುವರೋ ಕಾದು ನೋಡೋಣ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.