ಕೂಡ್ಲಿಗಿ ಪಟ್ಟಣದ ಹೋಟೆಲಗಳಲ್ಲಿ ಅಶುದ್ಧ ನೀರು ಸಿಐಟಿಯು ಹಾಗೂ ಸಿಡಬ್ಲೋಎಫ್ & ಜನವಾದಿ ಮಹಿಳಾ ಸಂಘದಿಂದ ಕ್ರಮಕ್ಕೆ ಆಗ್ರಹಿಸಿ ತಹಸಿಲ್ದಾರ್ ರವರಿಗೆ ಮನವಿ
ಕೂಡ್ಲಿಗಿ ಏ.11

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಸಿಐಟಿಯು(CITU) ಹಾಗೂ ಸಿಡಬ್ಲ್ಯೂಎಫ್ ಐ(CWFI) ಜನವಾದಿ ಮಹಿಳಾ ಸಂಘ ತಾಲೂಕು ಸಮಿತಿ ಕೂಡ್ಲಿಗಿ ಇವರ ವತಿಯಿಂದ ಮಂಗಳವಾರದಂದು ಕೂಡ್ಲಿಗಿಯಲ್ಲಿ ಹಲವಾರು ಹೋಟೆಲ್ ಗಳಲ್ಲಿ ತಿಂಡಿ ಊಟ ಚಹಾ ಕುಡಿಯಲು ಬಂದು ಸೇವನೆ ಮಾಡಿ ಹೋಗುವಂತ ಗ್ರಾಹಕರಿಗೆ ಶುದ್ಧವಾದ ನೀರನ್ನು ಕೊಡದೆ ಅಶುದ್ಧವಾದಂತ ನೀರನ್ನು ಕೊಡುವುದರೊಂದಿಗೆ ಹೋಟೆಲಿಗೆ ಬಂದಿರುವಂತಹ ಗ್ರಾಹಕರಿಗೆ ಅಶುದ್ಧ ನೀರನ್ನು ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ ,ಎಂದು ಕೇಲವು ಸಾರ್ವಜನಿಕರು ಸಿಐಟಿಯು ಸಂಘಟನೆಗೆ ದೂರಿನ ಮೂಲಕ ಕೆಲವು ಹೋಟೆಲಗಳ ಹೆಸರುಗಳನ್ನು ಮನವಿ ಪತ್ರದಲ್ಲಿ ಬರೆದು ಕಾನೂನು ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮಾನ್ಯ ತಹಶೀಲ್ದಾರ್ರಾದ ಟಿ .ಜಗದೀಶ್ ಇವರಿಗೆ ಮನವಿ ಪತ್ರವನ್ನು ಕೊಡುವುದರ ಮೂಲಕ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡುವುದರ ಮೂಲಕ ಸಂಬಂಧಪಟ್ಟಂತ ಹೋಟೆಲಿಗೂ ಹಾಗೂ ಮಾಲೀಕರಿಗೂ ಗ್ರಾಹಕರಿಗೆ ಶುದ್ಧ ನೀರು ಕೊಡುವಂತೆ ಎಚ್ಚರ ವಹಿಸಬೇಕು, ಎಚ್ಚರಗೊಳ್ಳದಿದ್ದರೆ ಹೋಟೆಲ್ ಲೈಸೆನ್ಸ್ ಅನ್ನು ರದ್ದುಪಡಿಸಬೇಕು ಎಂದು ಸಿಐಟಿಯು ಸಂಘಟನೆಯ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಇವರು ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡಬಾರದು ಎಂದು ಅಧಿಕಾರಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಹಾಗೆ ಇನ್ನೂ ಕೇಲವು ಹೋಟಲ್ ಗಳಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ ಎನ್ನೂತಾರೆ ಹೋರಾಟಗಾರರು ,ಮತ್ತು ಪಟ್ಟಣದ ಕೇಲವು ಕಡೆ ಅತಿ ಹೆಚ್ಚಿನ ಜನನಿ ಬೀಡಾ ಸ್ಥಳಗಳಲ್ಲಿ ವೀಪರಿತ ಬಿಸಿಲು ಇರುವುದರಿಂದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಸಬೇಕು ಎಂದು ತಿಳಿಸುತ್ತಾರೆ ಈ ಸಂದರ್ಭದಲ್ಲಿ ಸಿಡಬ್ಲ್ಯೂಎಫ್ ಐನಾ ಟಿ.ಭಾಗ್ಯ .ಕೆ .ಕರಿಯಣ್ಣ ಶಾರದಮ್ಮ .ಪವನ,ಮಾರೇಶ, ಕೊಟ್ರೇಶ ,ಲಲಿತಮ್ಮ ,ಹುಲೇಪ್ಪ ಶ್ರೀಧರ ಆಚಾರಿ, ಸಾಯಿಕುಮಾರು ,ಇನ್ನು ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ