ವೈಶಾಲಿ ಮೇಡಂಗೆ ಸೋಲಾರ್ ವಿಂಡೋ ಫ್ಯಾನ್ ನೋಂದಣಿ ಎಂದರೆ ತುಂಬಾ ಸಿಹಿ – ಇತರೆ ನೋಂದಣಿ ಎಂದರೆ ತುಂಬಾ ಕಹಿ.
ಕೊಟ್ಟೂರು ಡಿಸೆಂಬರ್.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ & ಕೊಟ್ಟೂರು ತಾಲೂಕಾ ಉಪ-ನೊಂದಾಣಿ ಒಂದಿಲ್ಲ ಒಂದು ಸುದ್ದಿಗೆ ಗ್ರಾಸವಾಗಿದೆ ಎಂದರೆ ತಪ್ಪಾಗಲಾರದು. ವೈಶ್ಯಾಲಿ ಮೇಡಂ ರವರು ಒಂದು ಸಾಮಾಜಿಕ ಮಾಧ್ಯಮ ಮತ್ತು ಯುಟ್ಯೂಬ್ ಚಾನಲ್ ನಲ್ಲಿ ತಮ್ಮ ವೃತ್ತಿಗೆ ಸಂಬಂಧಿಸಿದ್ದಂತೆ ಈ ಹಿಂದೆ ಸುದ್ದಿ ಪ್ರಿಯರಾಗಿ ಹೋಗಿರುವರು ಎಂದು, ಇವರನ್ನು ನೋಡಿದ ನೊಂದಾಣಿ ಕಛೇರಿಗೆ ಬಂದ ಕೆಲವು ಜನರು ಇವರನ್ನು ನೋಡಿ ಮೂಗು ಮುರಿಯುತ್ತಾ ಮಾತನಾಡಿ ಕೊಳ್ಳುವರಂತೆ. ಅದಕ್ಕಾಗಿ ಇವರಿಗೆ ವಿಂಡೋಪ್ಯಾನ್, ಸ್ಟೀಲ್ ಫ್ಯಾಕ್ಟ್ರಿ, ಎನ್ ಎ, ಇತರೆ ನೋಂದಣಿ ಮಾಡಿ ಕೊಡುವುದೆಂದರೆ ನಮ್ಮ ಮೇಡಂಗೆ ಬಹಳ ಅಕ್ಕರೆಯಂತೆ, ಏನೇ ಕೆಲಸ ಇರಲಿ ಅವನ್ನೆಲ್ಲ ಬದಿಗೆ ಹೊತ್ತಿ, ಈ ಮೇಲೆ ತಿಳಿಸಿದ ನೋಂದಣಿಯನ್ನು ಮಾತ್ರ, ಎಲ್ಲಾ ಕಡೆ ಗಮನ ಹರಿಸುತ್ತಾ, ಮೈಯಲ್ಲಾ ಕಣ್ಣಾಗಿ ಪೈಲ್ಗಳ ಎಣಿಕೆ ಮಾಡುವರಂತೆ, ಲೆಕ್ಕ ತಪ್ಪಿದರೆ ಮರು ಎಣಿಕೆ ಮಾಡುವರಂತೆ. ಇವುಗಳನ್ನು ಬಹಳ ಅಕ್ಕರೆಯಿಂದ ಮಾಡಿ ಕೊಡುವರಂತೆ. ಇತರ ನೋಂದಣಿ ಎಂದರೆ, ಕಮೀಷನ್ ಬಾರದೆ ಇರುವ, ನೋಂದಣಿ ಎಂದರೆ ನಮ್ಮ ಮೆಡಂಗೆ ಬಹಳ ಬೇಸರವಂತೆ ಎಂದು ಹಳ್ಳಿಯ ಜನರು ಟಿ ಕುಡಿಯುತ್ತಾ ತಾಲೂಕಾ ಕಛೇರಿಯ ಹೊಟೇಲ್ ಮುಂದೆ ನಿಂತು ಮಾತನಾಡಿ ಕೊಳ್ಳುವರಂತೆ.ಸರಿ ಅದು ಏನೇ ಇರಲಿ ಈ ಮೇಡಂ ಪೋನ್ನನ್ನು ಕಿವಿಯಲ್ಲಿ ಇಟ್ಟು ಕೊಂಡು ಕೆಲಸ ಮಾಡುವರಂತೆ.

ಅದು ಏನೋ ಅಂತಾಲ್ಲಾ ನಮ್ಮ ಹಳ್ಳಿ ಭಾಷೆಯಲ್ಲಿ “ಹೋತಲೇ ಪಿಶಾಚಿ ಎಂದರೆ, ಬಂದೆಲ್ಲೆ ಗವಾಕ್ಷಿ” ಎನ್ನುವ ಹಾಗೆ ಮತ್ತೆ ಇದೇ ಆಫೀಸಿಗೆ ಬಂದಿರುವರಂತೆ ಇವರು. ಒದೊಂದು ಸಲ ಈಯಮ್ಮ ತನ್ನ ಛೆಂಬರ್ ಇರುವ ಸ್ಥಳವನ್ನು ಬಿಟ್ಟು ಒಳ ರೂಂಗೆ ಹೋಗಿ ಕುಳಿತು ಕೊಂಡು “ಗಳ ಗಳನೆ ” ಒಂದು ಕಪ್ ಟೀಯನ್ನು ಕಡಿಯುತ್ತಾ, ಕೆಲವು ಫೈಲ್ಗಳನ್ನು ಅಲ್ಲಿಯೇ ತರಿಸಿ ಕೊಂಡು ನೋಡಿ, ತನ್ನ ಛೇಂಬರ್ ಹತ್ತಿರ ಇರುವ ಜನರನ್ನು ಕಾಯುತ್ತಿದ್ದಾರೆ ಎಂದು ನೆನಪು ಮಾಡಿ ಕೊಳ್ಳದೆ ಮೈ ಮರೆಯುವರಂತೆ.ನಾನು ಮರೆತು ಹೋಗಿದ್ದೆ ಏನು ಹೇಳಿ ಮತ್ತೆ ಪೋನಿನಲ್ಲಿಯೇ ಮತನಾಡುತ್ತಾ, ಕೇಳುವರಂತೆ, ಮತ್ತೆ ಪೋನ್ ಬಂದರೆ ಹಾಗೆ ಮಾತ ನಾಡುತ್ತ ಹೋಗುವುವರಂತೆ. ಇನ್ನೂ ಇವರ ಹತ್ತಿರ ಬಂದ ಸಾವ೯ಜನಿಕರ ಸ್ಥಿತಿ ಅಧೋಗತಿ.ಇದನ್ನು ನೋಡಿ ಸಾಕು ಸಾಕದ ಸಾವ೯ಜನಿಕರು ಬಂದ ದಾರಿಗೆ ಸುಂಕವಿಲ್ಲಾ ಎಂಬಂತೆ ದಾರಿಯಲ್ಲಿ ಹೋಗುವಾಗ ಈಯಮ್ಮ ‘ಟ್ರಾನ್ಸ್ ಫರ್’ ಆಗಿ ಹೋಗಿತ್ತು, ಮತ್ತೆ ಏನೇನೋ ನೆಪ ಹೇಳಿ ಕೊಂಡು, ಮತ್ತೆ ಇಲ್ಲಿಗೆ ಬಂದಿದ್ದಾರೆ, ನಮ್ಮ ಜೀವ ತಿನ್ನಲು ಎಂದು ಶಪಿಸುತ್ತಾ ಇಡೀ ಶಾಪ ಹಾಕುತ್ತಾ, ತಮ್ಮಷ್ಟಕ್ಕೆ ತಾವೇ ಮಾತನಾಡಿ ಕೊಳ್ಳುತ್ತಾ , ಹೋಗುವರಂತೆ. ಇಂತಹ ನೋಂದಣಿ ಅಧಿಕಾರಿಯ ಅವಶ್ಯಕತೆ ಇದೆಯಾ ನಿವೇ ಯೋಚಿಸಿ! ಇದನ್ನು ನೋಡಿದ ಮೇಲೂ ಅಧಿಕಾರಿಗಳು ಸರಿ ಪಡಿಸುರೋ, ಇಲ್ಲವೋ ಕಾದು ನೋಡೋಣ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು