ಹೋರಾಟ ಹತ್ತಿಕಲು ಸರ್ಕಾರ ಗುಂಡಾವರ್ತನೆ – ಶ್ರೀಶೈಲ್ ದೊಡ್ಮನಿ.
ಮುದ್ದೇಬಿಹಾಳ ಡಿ.12

ಪಂಚಮಸಾಲಿ ಸಮಾಜದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕೈಗೊಳ್ಳಲಾದ ಹೋರಾಟ ಹತ್ತಿಕಲು ಹೋರಾಟಗಾರರ ಮೇಲೆ ಪೊಲೀಸ್ ರಿಂದ ಲಾಟಿಚಾರ್ಜ್ ಮಾಡಿಸಿ ಕಾಂಗ್ರೆಸ್ ಸರ್ಕಾರ ಗುಂಡಾ ವರ್ತನೆಯನ್ನು ಪ್ರದರ್ಶಿಸಿದೆ ಎಂದು ಸಮಾಜದ ಮುಖಂಡ ಶ್ರೀ ಶೈಲ್ ದೊಡ್ಡಮನಿ ರೂಡಗಿ ಕಿಡಿ ಕಾರಿದ್ದಾರೆ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಟಗಳು ಪ್ರತಿಭಟನೆಗಳನ್ನು ಮಾಡಲು ಅವಕಾಶವಿದೆ. ಆದರೆ ಪಂಚಮಸಾಲಿ ಸಮಾಜದ ಬಂಧುಗಳು 2ಎ ಮೀಸಲಾತಿಗಾಗಿ ಕೈಗೊಂಡ ಹೋರಾಟ ಮೊಟಕು ಗೊಳಿಸಲು ಲಾಟಿಚಾರ್ಜ್ ಮಾಡಿಸಿ ಸರ್ಕಾರ ಗುಂಡ ಪ್ರವೃತ್ತಿ ಮೆರೆದಿದ್ದು ಖಂಡನೀಯ ಎಂದರು. ಇದಕ್ಕೆ ತಕ್ಕವಾದ ಉತ್ತರ ಮುಂದೆ ಪಂಚಮಸಾಲಿ ಸಮಾಜ ದವರು ನೀಡಲಿದ್ದಾರೆ. ಈ ಹೋರಾಟದಲ್ಲಿ ಪಂಚಮಸಾಲಿ ಸಮಾಜದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಶಾಸಕರು ಮತ್ತು ವಕೀಲರು ಮತ್ತು ಸಮಾಜದ ಅನೇಕ ಮುಖಂಡರು ಗಳನ್ನು ಬಂಧಿಸಿದ್ದು ಸಮಾಜ ಬಂಧುಗಳನ್ನು ಕೆರಳುಸುವಂತೆ ಮಾಡಿದೆ ಕೂಡಲೇ ಮುಖ್ಯಮಂತ್ರಿಗಳ ಆದಿಯಾಗಿ ಎಲ್ಲಾ ಸಚಿವರು ಸುವರ್ಣ ಸೌಧದ ಅಧಿವೇಶನದಲ್ಲಿಯೇ ಕ್ಷಮಾಪಣೆ ಕೇಳಬೇಕು. ಈ ಹೋರಾಟದಲ್ಲಿ ಸಾಕಷ್ಟು ಜನರಿಗೆ ಗಾಯಗಳಾಗಿವೆ ಅದರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ದಿಂದಲೇ ಭರಿಸುವಂತೆ ಕಾರ್ಯ ಮಾಡಬೇಕೆಂದು ಒತ್ತಾಯಿಸಿದ ಅವರು ಕೂಡಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ ಅವರಿಗೆ ಎಲ್ಲಾ ರೀತಿಯನ್ನು ಹಕ್ಕು ಬಾಧ್ಯತೆಗಳನ್ನು ಒದಗಿಸಿ ಕೊಡಬೇಕೆಂದು ಸರ್ಕಾರಕ್ಕೆ ಶ್ರೀ ಶೈಲ್ ದೊಡ್ಮನಿ ಹಾಗೂ ಮುದ್ದೇಬಿಹಾಳ ಸಮಾಜದ ಮುಖಂಡರು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ