ರಿಚ್ ಶಿಕ್ಷಣ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದು ಕಲ್ಮಠ – ಪಂಡೀತರಾಧ್ಯ ಸ್ವಾಮೀಜಿಯವರ ಅಭಿಮತ.

ಮಾನ್ವಿ ಮಾ.02

ನಕ್ಕುಂದಿ ಗ್ರಾಮದಲ್ಲಿ ನೆಲೆಸಿ ಕಷ್ಟದ ಜೀವನದ ನಡುವೆ ನಾವು ಶಾಲೆ ಪ್ರಾರಂಭ ಮಾಡಬೇಕು ಎಂದು ಹುಸೇನ್ ಭಾಷ ಅವರಿಗೆ ಆಲೋಚನೆ ಬಂದ ಹಿನ್ನೆಲೆಯಲ್ಲಿ ರಿಚ್ ಶಿಕ್ಷಣ ಸಂಸ್ಥೆ 6 ನೇ. ವರ್ಷದ ವಾರ್ಷಿಕೋತ್ಸವ ಆಚರಿಸಿ ಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡೀತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮಾನ್ವಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ರಿಚ್ ಶಿಕ್ಷಣ ಸಂಸ್ಥೆಯ 6 ನೇ. ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಅಂಕ ಪಡೆಯ ಬೇಕು ಸಲಹೆ ನೀಡುತ್ತಾರೆ ವಿನಹ ಅದರ ಜೊತೆಗೆ ಸಂಸ್ಕಾರದ ವಿಚಾರ ತಿಳಿಸಿದಾಗ ನಿಮ್ಮ ಮಕ್ಕಳ ಬಾಳು ಬದಲಾವಣೆ ಯಾಗುತ್ತದೆ ಎಂದರು. ಪ್ರಸ್ತುತ ದಿನಮಾನದಲ್ಲಿ ನಾವು ನೋಡಿದಾಗ ವಿದ್ಯಾರ್ಥಿಗಳು ಶಿಕ್ಷಣವಂತ ರಾಗುವುದರ ಜೊತೆಗೆ ತಮ್ಮ ಪೋಷಕರು ಯಾವ ರೀತಿಯ ದಿನ ಮಾನದಲ್ಲಿ ಜೀವನದ ಕೆಲ ಬೆಳವಣಿಗೆಗಳನ್ನು ಕೇಳಿದಾಗ ಮಾತ್ರ ನೀವು ಬದಲಾವಣೆ ಯಾಗಲು ಸಾಧ್ಯ ಎಂದು ಮಕ್ಕಳಿಗೆ ತಿಳಿ ಹೇಳಿದರು.ಹುಸೇನ್ ಭಾಷ ಹಾಗು ನದಾಫ್ ಖಾಜಾಬಿ ಅವರ ಶ್ರಮದ ಫಲವಾಗಿ 6 ನೇ. ವರ್ಷ ಪೂರ್ಣ ಗೊಳ್ಳುವ ಜೊತೆಗೆ ಈ ಸಂಸ್ಥೆ 100 ನೇ. ವರ್ಷ ಆಚರಿಸುವ ಮಟ್ಟಿಗೆ ಈ ಸಂಸ್ಥೆ ಬೆಳೆಯಲಿ, ಇದನ್ನು ಹುಸೇನ್ ಭಾಷ ಕುಟುಂಬದವರು ಮುಂದುವರಿಸಿ ಕೊಂಡು ತೆರಳಬೇಕು ಎಂದರು.

ಉಪನ್ಯಾಸಕ ಆಂಜನೇಯ ನಾಯಕ ನಸ್ಲಾಪುರ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡುವಾಗ ಶಿಕ್ಷಕರು ತಿದ್ದಿ ತೀಡುವ ಕೆಲಸ ಮಾಡಬೇಕು. ಪೋಷಕರು ಸಹ ಮಕ್ಕಳು ಯಾವ ರೀತಿಯಲ್ಲಿ ಇದ್ದಾರೆ ಎಂದು ಪೋಷಕರು ಜವಾಬ್ದಾರಿ ಯುತವಾಗಿ ಗಮನ ಹರಿಸುವ ಕೆಲಸ ಮಾಡಬೇಕು ಎಂದರು.ವಿಚಾರವಾದಿ ಮಹೆಬೂಬ್ ಮದ್ಲಾಪುರ ಮಾತನಾಡಿ, ಪೋಷಕರೆ ತಮ್ಮ ಮಕ್ಕಳಿಗೆ ಮೊಬೈಲ್ ಹಾಗು ಟಿವಿ ರಿಮೋಟ್ ಕೆಲಸ ಮಾಡಬೇಡಿ.ಯಾಕಂದರೆ ಶಿಕ್ಷಣ ಪಡೆಯ ಬೇಕಾದ ಮಕ್ಕಳು ಅನ್ಯ ಮಾರ್ಗದಲ್ಲಿ ತೆರಳುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಶರ್ಫುದ್ದೀನ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದು ಸುಲಭದ ಮಾತಲ್ಲ. ಯಾಕಂದರೆ ನಾಲ್ಕು ಕುಟುಂಬದವರಿಗೆ ಕೆಲಸ ಕೊಡುವುದರ ಜೊತೆಗೆ ಎಲ್ಲವನ್ನು ನಿಭಾಯಿಸುವ ಕೆಲಸ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರಿಗೆ ಮಾತ್ರ ಗೊತ್ತು. ಶಿಕ್ಷಣ ಸಂಸ್ಥೆಯಲ್ಲಿ ಏನಾದರು ಅನಾಹುತವಾದರೆ ಶಿಕ್ಷಣ ಸಂಸ್ಥೆ ಮುಚ್ಚುವ ಕೆಲಸ ಮಾಡಿ ಎಂದು ಮಾನ ಹರಾಜು ಮಾಡುವುದು ಸಮಂಜಸವಲ್ಲ ಎಂದು ನೋವು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸೈನಿಕರಾದ ಜೆಲ್ಲಿ ಸಂಜೀವ ನಾಯಕ, ಕೆ.ಶರಣಬಸವ ನಾಯಕ, ಪುರಸಭೆ ಸದಸ್ಯ ಫರೀದ್ ಉಮ್ರಿ, ಕಾಂಗ್ರೆಸ್ ಮುಖಂಡ ವಿಜಯಕುಮಾರ್, ಶಂಕ್ರಪ್ಪ ಅಂಗಡಿ, ಆನಂದ,ಹಲೀಮ್ ಖಾನ್ ಸೇರಿದಂತೆ ಇನ್ನಿತರರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button