ಶಿಕ್ಷಕಿ ಓ ಬಸಮ್ಮಳಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನ.
ಬಣವಿಕಲ್ಲು ಸಪ್ಟೆಂಬರ್.4
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಓ ಬಸಮ್ಮ ಇವರಿಗೆ 2023-24ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ಸಪ್ಟೆಂಬರ್ 5 ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.

ಮೂಲತಃ ಎಂ.ಬಿ ಅಯ್ಯನಹಳ್ಳಿ ಗ್ರಾಮದ ಕೃಷಿ ಮತ್ತು ಪ್ರತಿಷ್ಠಿತರ ಕುಟುಂಬದ ದಿವಂಗತ ಓ.ತಿಪ್ಪೇರುದ್ರಪ್ಪ (ಗ್ರಾ.ಪಂ.ಮಾಜಿ ಅಧ್ಯಕ್ಷರು) ಹಾಗೂ ಶ್ರೀಮತಿ ಸಾಕಮ್ಮ ಇವರುಗಳ ಪುತ್ರಿಯಾದ ಓ.ಬಸಮ್ಮ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಾಯಿಯ ತವರೂರಾದ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಪೂರೈಸಿ ನಂತರ ಪಿಯುಸಿಯನ್ನು ಚಿಕ್ಕ ಜೋಗಿಹಳ್ಳಿಯಲ್ಲಿ ಪಡೆದು ಟಿಸಿಎಚ್ ಕಾನಮಡುಗಿನಲ್ಲಿ ಮುಗಿಸಿ 1998 ರಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದರು. ಸುಮಾರು 13 ವರ್ಷಗಳ ಕಾಲ ಉಲ್ಲಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, 2011 ರಲ್ಲಿ ಬಣವಿಕಲ್ಲು ಗ್ರಾಮಕ್ಕೆ ವರ್ಗಾವಣೆಗೊಂಡು 12 ವರ್ಷಗಳಿಂದ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಮತ್ತು ಪ್ರಸ್ತುತ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶ್ರೀ ಓ.ಬಸಮ್ಮ ಇವರಿಗೆ ಈ ಬಾರಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದಕ್ಕೆ ಬಣವಿಕಲ್ಲು , ಉಲ್ಲಾನಹಳ್ಳಿ , ಎಂ.ಬಿ ಅಯ್ಯನಹಳ್ಳಿ ಗ್ರಾಮಗಳ ಸಮಸ್ತ ಗ್ರಾಮಸ್ಥರು ಶಿಕ್ಷಕ ವೃಂದದವರು ಹಾಗೂ ಮಕ್ಕಳು ಅಭಿನಂದಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ