ಮಾರ್ಕಬ್ಬಿನಹಳ್ಳಿ ಗ್ರಾಮದ ಉರ್ದು ಶಾಲೆಯಲ್ಲಿ – ಗಣರಾಜ್ಯೋತ್ಸವ ಆಚರಣೆ.
ಮಾರ್ಕಬ್ಬಿನಹಳ್ಳಿ ಜ.26

ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ 76 ನೇ. ಗಣರಾಜ್ಯೋತ್ಸವ ದಸ್ತಗಿರಾಸಾಬ ಮುಳ್ಳಳಾ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ. ಮುಖ್ಯ ಅತಿಥಿ ಅಮೀನುದಿನ್ ಮುಳ್ಳಳಾ ಧ್ವಜಾರೋಹಣ ನೆರೆವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಬೋರಮ್ಮ ಭಜಂತ್ರಿ, ಮಾಜಿ ಗ್ರಾಮ ಪಂ ಅಧ್ಯಕ್ಷರು ನೂರುಜಾನಬಿ ಹಾಗೂ ಮೈಬುಸಾಬ ಬೀಳಗಿ ಮುಖ್ಯ ಅತಿಥಿಗಳಾಗಿದ್ದರು.ಶಾಲಾ ಆವರಣದಲ್ಲಿ ನೆರವೇರಿದ ಸಭಾ ಕಾರ್ಯಕ್ರಮದಲ್ಲಿ. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಮಾದೇವಿ ಹಾಗೂ ಡಾ, ಮುನೀರ್ ಬೀಳಗಿ ಪ್ರಾಸ್ತವಿಕವಾಗಿ ಮಾತನಾಡಿದರು. ನಜಿರಾಸಾಬ ಬೀಳಗಿ ಸ್ವಾಗತಿಸಿ ಪರಿಚಿಸಿದರು, ಉರ್ದು ಶಾಲಾ ಶಿಕ್ಷಕ ಇಸಾಕ ಬೀಳಗಿ ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರುಗಿದವು. ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ನಂತರ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಉಪಹಾರ ಸೇವಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಅಧ್ಯಕ್ಷರು ಸದ್ಯಸರು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಊರಿನ ಹಿರಿಯರು, ಯುವಕರು, ಗ್ರಾಮಸ್ಥರು. ಉಪಸ್ಥಿತರಿದ್ದರು.