ಏಕವಚನದಲ್ಲಿ ಟೀಕಿಸುವುದು ಮೂರ್ಖತನದ ಪರಮಾವಧಿ — ಸಂಸದ ರಮೇಶ ಜಿಗಜಿಣಗಿ.
ವಿಜಯಪುರ ಜೂನ್.28

ಪ್ರಧಾನಮಂತ್ರಿಗಳು ಅವರಪ್ಪನ ಮನೆಯಿಂದ ಅಕ್ಕಿ ಕೊಡುತ್ತಾರಾ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಕ್ಕಿಯನ್ನು ಕೊಟ್ಟಿದ್ದು ಯಾರಪ್ಪನ ಮನೆಯಿಂದ, ಅದು ಸಹ ರಾಜ್ಯದ ಜನತೆಯ ಹಣದಿಂದಲೇ ಎಂಬುದು ಅವರು ಮರೆತಂತಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಕೇವಲ ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವುದೇ ಕಾಯಕ ವನ್ನಾಗಿಸಿಕೊಂಡಿದ್ದಾರೆ.’ವಿನಾಕಾರಣ ಪ್ರಧಾನಿ ಅವರನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ, ಇಡೀ ವಿಶ್ವವೇ ಪ್ರಧಾನಿ ಮೋದಿ ಅವರನ್ನು ವಿಶ್ವಗುರು ಎಂದು ಮನ್ನಣೆ ನೀಡಿದೆ. ದೇಶದ ಸೂಪರ್ ಪವರ್ ರಾಷ್ಟ್ರಗಳು ಮೋದಿ ಅವರ ನಾಯಕತ್ವ ಮೆಚ್ಚಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಟೀಕಿಸುವುದು ಮೂರ್ಖತನದ ಪರಮಾವಧಿಯಾಗಿದೆ’ ಎಂದು ತಿಳಿಸಿದ್ದಾರೆ.ಏಕವಚನದಲ್ಲಿ ಟೀಕೆ ಮಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಮೋದಿ ಅವರನ್ನು ಟೀಕೆ ಮಾಡುವ ಬದಲು ಜನರಿಗೆ ನೀಡುವ ಗ್ಯಾರಂಟಿ ಅನುಷ್ಠಾನ ಮಾಡಲು ಸಿದ್ದರಾಮಯ್ಯ ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶೀರಗೂರ