ಮಾ. 24 ರಿಂದ 4 ದಿನಗಳವರೆಗೆ ಶ್ರೀ ಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ನಿರಂತರ ದಾಸೋಹ.
ಹುನಗುಂದ ಮಾರ್ಚ್.21

ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಾ ಸೇವಾ ಸಮಿತಿ ವತಿಯಿಂದ ಮಾ.೨೪ ರಿಂದ ೪ ದಿನಗಳವರೆಗೆ ಬಸವ ಮಂಟಪದಲ್ಲಿ ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ತೆರಳುವ ಪಾದ ಯಾತ್ರಾರ್ಥಿಗಳಿಗೆ ದಿನದ ೨೪ ಗಂಟೆ ನಿರಂತರ ದಾಸೋಹ ಸೇವೆ ನಡೆಸಲಾಗುವ ದೆಂದು ಸಂಘದ ಗೌರವ ಅಧ್ಯಕ್ಷ ಕಿಡಿಯಪ್ಪ ಹೂಲಗೇರಿ ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆಯೆ ಪಟ್ಟಣದ ರೈತರು, ವ್ಯಾಪಾರಸ್ಥರು, ಉದ್ಯಮಿಗಳ ಹಾಗೂ ಎಲ್ಲ ನೌಕರರ ಸಹಕಾರ ದಿಂದ ಈ ಪ್ರಸಾದ ಸೇವೆ ನಡೆಯುತ್ತದೆ. ಬೆಳಗಾವಿ, ಗೋಕಾಕ, ಅಥಣಿ, ಮಹಾಲಿಂಗಪೂರ, ಲೋಕಾಪೂರ, ಜಮಖಂಡಿ ಸೇರಿದ್ದಂತೆ ವಿವಿಧ ನಗರ ಗ್ರಾಮಗಳಿಂದ ಹುನಗುಂದ ಮಾರ್ಗವಾಗಿ ಆಗಮಿಸುವ ಪಾದ ಯಾತ್ರಾರ್ಥಿಗಳಿಗೆ ಮತ್ತು ಮಲ್ಲಯ್ಯನ ಕಂಬಿಗಳ ಪೂಜೆ, ಹಣ್ಣು, ಮೊಸರು, ಮಜ್ಜಿಗೆ, ಜೋಳದ ರೊಟ್ಟಿ, ಚಪಾತಿ, ಅನ್ನ ಪ್ರಸಾದ ಮತ್ಯು ಉಪಹಾರ ಜೊತೆಗೆ ಸ್ನಾನಕ್ಕೆ ಬಿಸಿ ನೀರು, ಪ್ರಾಥಮಿಕ ಚಿಕಿತ್ಸೆ, ವಾಸ್ತವ್ಯ ವ್ಯವಸ್ಥೆಯನ್ನು ಮಾಡಲಾಗಿದೆ.ಬರುವ ಯಾತ್ರಾರ್ಥಿಗಳು ಇದರ ಬಳಕೆಯನ್ನು ಮಾಡಿ ಕೊಳ್ಳಬೇಕೆಂದುರು.ಸಂಘದ ಉಪಾಧ್ಯಕ್ಷ ಜಗದೀಶ ಬಳ್ಳೊಳ್ಳಿ ಮಾತನಾಡಿ ನಗರದ ಸಧ್ಬಕ್ತರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಯಾತ್ರಾರ್ಥಿಗಳ ಸೇವೆ ಮಾಡಬೇಕು ಎಂದರು.ಸಂಘದ ಕಾರ್ಯದರ್ಶಿ ಮಹಾಂತೇಶ ಹೊದ್ಲೂರ ಮಾತನಾಡಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮುಗಿದ ನಂತರ ಸಂಘದಿಂದ ಬಸವ ಮಂಟಪದಲ್ಲಿ ಮೇ. ೧ ರಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ ವಿವಾಹ ನೋಂದಣಿ ಮಾಡಬಹುದು. ಚುನಾವಣೆ ಸಮಯ ಇರುವದರಿಂದ ಬದಲಾವಣೆ ಆಗುವವ ಸಮಯಕ್ಕೆ ಸಹಕರಿಸಬೇಕು ಎಂದರು.ಸಂಘದ ಅಧ್ಯಕ್ಷ ವೀರೇಶ ಕುರ್ತಕೋಟಿ,ಉಪಾಧ್ಯಕ್ಷ ಅಪ್ಪು ಹಳಪೇಟಿ,ಅಮರೇಶ ಲೆಕ್ಕಿಹಾಳ, ಬಲವಂತ ನಾಯ್ಕೋಡಿ, ಶಿವಾನಂದ ಬಾದವಾಡಗಿ,ಮುತ್ತಪ್ಪ ಹಳಪೇಟಿ,ಪರಸಪ್ಪ ಮಜ್ಜಗಿ, ಮಲ್ಲಪ್ಪ ಪಲ್ಲೇದ,ಈರಪ್ಪ ಮೇಳಿ,ಮಲ್ಲನಗೌಡ ಪಾಟೀಲ,ನಾಗನಗೌಡ ನಾಡಗೌಡ್ರ, ಸಂಗಮೇಶ ವೀರಾಪೂರ,ಮಂಜು ಬಾದವಾಡಗಿ,ಶ್ರೀಶೈಲ ಹಂಡಿ ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ