ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸರ್ಕಾರಿ ವಸತಿ ನಿಲಯಕ್ಕೆ – ಧಿಡೀರ್ ಭೇಟಿ ನೀಡಿದ ಎಂ.ಸಿ ಸುಭಾಷ ಸಂಪಗಾವಿ.
ಚಿಕ್ಕೋಡಿ ಜ.10

ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸರಕಾರಿ ಬಾಲಕಿಯರ ವಸತಿ ನಿಲಯಕ್ಕೆ, ಚಿಕ್ಕೋಡಿ ಉಪ ವಿಭಾಗೀಯ ದಂಡಾಧಿಕಾರಿಗಳಾದ, ಸುಭಾಷ ಸಂಪಗಾವಿ ಇವರು, ಭೆಟ್ಟಿ ನೀಡಿ ರೋಗಿಗಳ ಹಾಗೂ ಬಾಲಕಿಯರ ಕ್ಷೇಮದ ಬಗ್ಗೆ ಹಾಗೂ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿದರು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಯಾವುದೇ ತರದ ಮೂಲಭೂತ ಸೌಕರ್ಯಗಳ ಕೊರತೆ ಯಾಗಬಾರದು, ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಸರಿಯಾಗಿ ಕಾರ್ಯ ನಿರ್ವಹಿಸಬೇಕು,

ನಮ್ಮ ಕಡೆಗೆ ದೂರುಗಳು ಬಾರದಂತೆ ಎಚ್ಚರ ವಹಿಸಬೇಕು, ತಮಗೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಲು ತೊಂದರೆಗಳು ಎದುರಾದರೆ ನಮಗೆ ನೇರವಾಗಿ ತಿಳಿಸಿ, ನಾವು ಅವುಗಳನ್ನು ಪರಿಹಾರ ಮಾಡಲು ಬದ್ಧರಿದ್ದೇವೆ,

ಎಲ್ಲರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿ ಕೊಳ್ಳಿ ಎಂದು ಸೂಚಿಸಿದರು, ಅಲ್ಲಿಯ ನೀರು-ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ಯಾವಾಗಲೂ ಸ್ವಚ್ಛತೆಯನ್ನು ಕಾಪಾಡ ಬೇಕೆಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ