ಸಮಾಜ ಮುಖಿಯಾದ ಅಮ್ರಾ ಶಿಕ್ಷಣ ಸಂಸ್ಥೆ.
ಹುಣಶ್ಯಾಳ ನ. 16

ಅಮ್ರಾ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಂಘ ಹುಣಶ್ಯಾಳ ವತಿಯಿಂದ ವಿವಿಧ ಶಾಲೆಗಳ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ ಹಾಗೂ ಬ್ಯಾಗ್ ಗಳ ವಿತರಣೆ ಸಮಾರಂಭ ನಡೆಯಿತು.ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರ ಹೊಮ್ಮಲು ಶಿಕ್ಷಣ ಅತ್ಯಾವಶ್ಯಕ ಎಂದು ಹುಣಶ್ಯಾಳ ಅರಾಬಿಕ್ ಶಾಲೆಯ ಪ್ರಾಚಾರ್ಯರಾದ ಮೌಲಾನಾ ಹಾರೂನ್ ರಶೀದ್ ಹೇಳಿದರು. ಯಲಗೋಡದ ಎಲ್.ಟಿ ತಾಂಡಾ ಶಾಲೆಯಲ್ಲಿ ಅಮ್ರಾ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಂಸ್ಥೆ ಹುಣಶ್ಯಾಳ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂದಾಲ ಶಾಲೆಯಲ್ಲಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ ವಿತರಣಾ ಸಮಾರಂಭದಲ್ಲಿ ನಿವೃತ್ತ ಮುಖ್ಯ ಗುರುಗಳು ಬಿ.ಡಿ ಬಾಣಕಾರ ಮಾತನಾಡಿದರು. ಸಂಸ್ಥೆಯ ವತಿಯಿಂದ ಅನಾಥ ನಿರ್ಗತಿಕ ವ್ಯಕ್ತಿಗಳಿಗೆ ರೇಷನ್ ಕಿಟ್ ವಿತರಿಸುವುದು,

ವಿಧವೆಯರಿಗೆ ಮಾಶಾಸನ ನೀಡುವುದು, ಅಶಕ್ತರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವುದು ಇನ್ನೂ ಅನೇಕ ಕಾರ್ಯಕ್ರಮಗಳು ಸಂಸ್ಥೆಯ ವತಿಯಿಂದ ನಡೆಸುತ್ತಾ ಬಂದಿದ್ದೇವೆ. ಅದರ ಒಂದು ಭಾಗವಾಗಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಎನ್ ಹಾಗೂ ಶಾಲಾ ಬ್ಯಾಗ್ ವಿತರಿಸುವ ಕಾರ್ಯವೂ ಒಂದಾಗಿದೆ.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕದರಾಪುರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾನಾಪುರ, ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಯಲಗೋಡ ಶಾಲಾ ಮಕ್ಕಳಿಗೆ ನೋಟು ಪುಸ್ತಕ ಹಾಗೂ ಪೆನ್ ವಿತರಣೆ ಮಾಡಲಾಯಿತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಗೋಡ ಎಲ್.ಟಿ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಬ್ದುಲಹಮೀದ ಕುರಿ, ರಫೀಕ ತಾಳಿಕೋಟಿ, ಸಂಗಮೇಶ ತೇಲಿ, ಬಸವರಾಜ ಬರ್ಲಟ್ಟಿ, ಎಂ.ಆಯ್. ನಾಟೀಕಾರ, ಸಂತೋಷ್ ಬಿಂಜಲಬಾವಿ, ವಿವಿಧ ಶಾಲೆಗಳ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ