ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ.
ಹುನಗುಂದ ಮೇ.19

ಮಾರ್ಚ/ ಏಪ್ರೀಲ್ ೨೦೨೪ ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-೧ ರಲ್ಲಿ ಒಟ್ಟು ೫೦೮೫ ವಿದ್ಯಾರ್ಥಿಗಳ ಪೈಕಿ ೪೧೦೮ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ ೮೦.೭೯ % ಆಗಿದ್ದು,ಮೊದಲ ಪರೀಕ್ಷೆಯಲ್ಲಿ ೯೭೭ ವಿದ್ಯಾರ್ಥಿಗಳು ಅನುತ್ತೀರ್ಣ ಗೊಂಡಿದ್ದಾರೆ. ಈ ಅನುತ್ತೀರ್ಣ ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಜೂನ್ ೨೦೨೪ ರ ಮೊದಲ ವಾರದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆ-೨ ನ್ನು ಸಮರ್ಥವಾಗಿ ಎದುರಿಸಿ ಉತ್ತೀರ್ಣರಾಗಲು ೧೫ ದಿನಗಳ ಕಾಲ ಪರಿಹಾರ ಬೋಧನೆಯನ್ನು ತಾಲೂಕಿನ ೩೭ ಪ್ರೌಢಶಾಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದು, ಮೇ.೧೫ ರಿಂದ ಪ್ರತಿ ದಿನ ಬೆಳಿಗ್ಗೆ ೯ ಗಂಟೆಯಿಂದ ಅಪರಾಹ್ನ ೧ ಗಂಟೆಯವರೆಗೆ ಪರಿಹಾರ ಬೋಧನೆಯ ತರಗತಿಗಳು ನಡೆಯುತ್ತಿದ್ದು. ಹಾಜರಾದ ಎಲ್ಲಾ ವಿದ್ಯಾರ್ಥಿಗಳಗೆ ಮಧ್ಯಾಹ್ನದ ಬಿಸಿಯೂಟ ಸಹ ನೀಡಲಾಗುತ್ತಿದೆ. ವೀಕ್ಷಣೆಗಾಗಿ ಎಲ್ಲ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ನಿಟ್ಟಿನಲ್ಲಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನಲ್ಲಿ ಒಟ್ಟು ೧೦೦ ಶಾಲೆಗಳಿಗೆ ಅವುಗಳಲ್ಲಿ ೨೮ ಪ್ರೌಢಶಾಲೆಗಳಿಗೆ ಹಾಗೂ ೭೨ ಪ್ರಾಥಮಿಕ ಶಾಲೆಗಳಿಗೆ SMART CLASS WITH INTERACTIVE BOARD ಅನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದಲೂ ಪರಿಹಾರ ಬೋಧನೆ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ ಕಿಲ್ಲೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.