ರಾಜ್ಯ ಮಟ್ಟದ ಪ್ರಶಸ್ತಿಗೆ ರಾಜ್ಯ ಮಟ್ಟದ ಕವಿಗೋಷ್ಠಿ ಅರ್ಜಿ ಆಹ್ವಾನ.
ಕಾನಾ ಹೊಸಹಳ್ಳಿ ಮೇ.26

ಸಾಹಿತ್ಯ ಪರಿಸರ ಸಮ್ಮೇಳನ ವಿಶ್ವ ಕನ್ನಡ ಕಲಾ ಸಂಸ್ಥೆ ಹಿರಿಯೂರು ಇವರ ವತಿಯಿಂದ ಕಾನಾ ಹೊಸಹಳ್ಳಿ ಸಮೀಪದ ಹುಲಿಕೆರೆ ಗ್ರಾಮದಲ್ಲಿ ಆಗಷ್ಟ ತಿಂಗಳಲ್ಲಿ ನಡೆಯುವ ರಾಜ್ಯ ಮಟ್ಟದ ಪರಿಸರ ಕವಿಗೋಷ್ಟಿ, ಹಾಗೂ ಶರಣೆ ಜ್ಞಾನ ಯೋಗಿ ಅಕ್ಕ ಮಹಾದೇವಿ ಮತ್ತು ಕಾಯಕ ಯೋಗಿ ಸೊನ್ನಲ್ಲಿಗಿ ಸಿದ್ದರಾಮ ಹೆಸರಿನಲ್ಲಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದ್ದು ಎಲ್ಲಾ ಕ್ಷೇತ್ರದ ಸಾಧಕರು, ಸಾಧಕೀಯರು, ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ,ಡಾ, ರವೀಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಗುರುವಾರ ಕಾನಾ ಹೊಸಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತಮಾಡಿ 17- ಆಗಷ್ಟ – 2024 ಕ್ಕೆ ಕಾನಾ ಹೊಸಹಳ್ಳಿ ಸಮೀಪದ ಹುಲಿಕೆರೆಯ ಆನಂದ ನರ್ಸರಿಯಲ್ಲಿ 5 ನೇ. ರಾಜ್ಯಮಟ್ಟದ ಸಾಹಿತ್ಯ ಪರಿಸರ ಸಮ್ಮೇಳನ ಉತ್ಸವ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಸಾಹಿತ್ಯ, ಶಿಕ್ಷಣ, ಕ್ರೀಡೆ,ಕೃಷಿ, ಕಲಾವಿದರು ಸೇರಿದಂತೆ ನಾನಾ ಕ್ಷೇತ್ರದಲ್ಲಿ ಸಾಧಿಸಿದವರು ಅರ್ಜಿ ಸಲ್ಲಿಸಬೇಕು ಕಾರ್ಯಕ್ರಮದ ಉದ್ಘಾಟಕರಾಗಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಸಾವಯವ ಕೃಷಿ ತಜ್ಞರಾದ ಹುಲಿಕೆರೆ ವಿಶ್ವೇಶ್ವರ ಸಜ್ಜನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು ಇವರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಹಲವು ಕ್ಷೇತ್ರದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುವರು ಅರ್ಜಿ ಸಲ್ಲಿಸುವವರು ಈ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಸಲ್ಲಿಸಬೇಕು ಈ ರವೀಶ, ಕನಸು ನಿಲಯ, ಮನೆ ನಂಬರ್ 89/90 ಮಂಜುನಾಥ ನಗರ, ಅಚ್ಚುತ ನಗರ ಪೋಷ್ಟ, ಸಾಸುವೆ ಘಟ್ಟ, ಆಲೂರು ರಸ್ತೆ, ಬೆಂಗಳೂರು -560107, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, 10-6-2024 ಹೆಚ್ಚಿನ ಮಾಹಿತಿಗಾಗಿ- 9611419145- 9606224265.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.