ಡಿ.ಎಸ್.ಎಸ್ ಭೀಮವಾದ(ಆರ್.ಮೋಹನ್ ರಾಜ್) ಸಮಿತಿಯ ತಾಲೂಕಾ ಸಂಚಾಲಕರಾಗಿ ವಿಕಾಸ ಗುಡಮಿ ಆಯ್ಕೆ.
ಇಂಡಿ ಜನೇವರಿ.25

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮವಾದದ ಇಂಡಿ ತಾಲೂಕಾ ಸಂಚಾಲಕರ ಆಯ್ಕೆ ಪ್ರಕ್ರಿಯೆಯು ದಿನಾಂಕ 25.01.2024 ರಂದು ತಾಲೂಕಾ ಪ್ರವಾಸಿ ಮಂದಿರದಲ್ಲಿ ಜರುಗಿತು ಈ ಸಭೆಯಲ್ಲಿ ರಾಜ್ಯ ಸಂಚಾಲಕರಾದ ಡಾಕ್ಟರ್ ಆರ್ ಮೋಹನ್ ರಾಜು ಇವರ ನೇತೃತ್ವದಲ್ಲಿ ಇಂಡಿ ತಾಲೂಕ ಸಂಚಾಲಕರಾಗಿ ವಿಕಾಸ ಚಂದ್ರಕಾಂತ್, ಗುಡಮಿ ಇವರನ್ನು ಇಂಡಿ ತಾಲೂಕ ಸಂಚಾಲಕರಾಗಿ ನೇಮಕ ಮಾಡಲಾಯಿತು .

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಭೀಮವಾದ ಸಂಘಟನೆಯನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುತ್ತೀರಿ ಎಂದು ತಮ್ಮ ಮೇಲೆ ಅಪಾರವಾದ ನಂಬಿಕೆಯನ್ನಿಟ್ಟು ಈ ಜವಾಬ್ದಾರಿಯನ್ನು ನೀಡಿರುತ್ತೇವೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ