ಮೊಳಕಾಲ್ಮೂರು ಆಡಳಿತ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕರು.
ಮೊಳಕಾಲ್ಮೂರು ಆಗಷ್ಟ.15

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಡಳಿತ ಸೌಧದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15-8-2023 ರಂದು ಧ್ವಜಾರೋಣವನ್ನು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಭಾಗವಹಿಸಿ ಮಾನ್ಯ ತಾಲೂಕು ದಂಡಾಧಿಕಾರಿಗಳಾದ ರೂಪ ಮೇಡಂ ಇವರು ತಾಲೂಕು ಆಡಳಿತ ಸೌಧದ ಮುಂದೆ ಧ್ವಜಾರಣವನ್ನು ಆರಿಸಿದರು ಈ ಸಂದರ್ಭದಲ್ಲಿ ಮಾನ್ಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಜೂನಿಯರ್ ಕಾಲೇಜ್ ಆವರಣದಲ್ಲಿ ಬಹಳ ಅಲಂಕಾರದಿಂದ ತಹಸಿಲ್ದಾರ್ ರೂಪ ಮೇಡಂ ಇವರು ವೇದಿಕೆ ಜವಾಬ್ದಾರಿಯನ್ನು ಬಹಳ ಸುಂದರವಾಗಿ ಅಳವಡಿಸಿದ್ದರು ಎಂದೆಂದೂ ಕಾಣದ ಹಾಗೆ ಚೊಕ್ಕಟವಾಗಿ ಗ್ರೌಂಡ್ ಅನ್ನು ಸಿದ್ಧಪಡಿಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವಾತಂತ್ರ್ಯಕ್ಕಾಗಿ ಸಂಬಂಧಪಟ್ಟ ನೃತ್ಯಗಳನ್ನು ಪ್ರತ್ಯಕ್ಷವಾಗಿ ನೃತ್ಯಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ವೇದಿಕೆಯ ಮುಂಬಾಗದಲ್ಲಿ ಆಚರಿಸಿದರು ತಾಲೂಕಿನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕ ಶಿಕ್ಷಕಿಯರು ಸ್ವಾತಂತ್ರ್ಯ ದಿನಾಚರಣೆಯನ್ನು ಇಂದೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಣ್ಯಮಾನ್ಯರನ್ನು ನೆನೆದು ಅವರ ಮಾಡಿರ್ತಕ್ಕಂತ ತ್ಯಾಗ ಬಲಿದಾನವನ್ನು ನೃತ್ಯ ನಾಟಕದ ಮೂಲಕ ಪ್ರತ್ಯಕ್ಷವಾಗಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನೃತ್ಯಗಳನ್ನು ವೇದಿಕೆ ಮುಂಭಾಗದಲ್ಲಿ ಆಚರಿಸಿದರು ಮಾನ್ಯ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಮತ್ತು ತಹಸಿಲ್ದರಾದ ರೂಪ ಮೇಡಂ ಮತ್ತು ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕರಾದ ವಸಂತ ಅಸುಧೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಪಿಎಸ್ಐ ಆದ ಪಾಂಡುರಂಗಪ್ಪ ಜೂನಿಯರ್ ಕಾಲೇಜ್ ಪ್ರಿನ್ಸಿಪಾಲ್ ಆದ ಗೋವಿಂದಪ್ಪ ಮತ್ತು ಜಿಲ್ಲಾ ಪಂಚಾಯತಿ ಸಹಾಯಕರಾದ ಕೆ ನಾಗನಗೌಡ್ರು ಮತ್ತು ಗ್ರಾಮೀಣ ಕುಡಿಯುವ ನೀರಿನ ಸಹಾಯಕರಾದ ಹರೀಶ್ ರಾಯಪುರ ಪಾಟೀಲ್ ಪಾಪ ನಾಯಕ ಮೊಳಕಾಲ್ಮುರು ಪಟ್ಟಣದ ಅಬ್ದುಲ್ ಕಲೀಮ್ ಖಾದರ್ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಪ್ರಕಾಶ್ ಸುಲೇನಹಳ್ಳಿ ದೇವಯ್ಯ ಇವರುಗಳು ವೇದಿಕೆ ಎಲ್ಲಿ ಭಾಗವಹಿಸಿದ್ದರು ಹಾಗೂ ತಾಲೂಕಿನ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಾನ್ಯ ಜನಪ್ರಿಯ ಶಾಸಕರು ಈ ಜೂನಿಯರ್ ಕಾಲೇಜ್ ಗ್ರೌಂಡ್ ಅನ್ನು ಇನ್ನೂ ಒಂದು ವರ್ಷದೊಳಗೆ ಕ್ರೀಡಾಂಗಣ ಗ್ರೌಂಡಾಗಿ ರೂಪಿಸುತ್ತೇನೆ ಎಂದು ಮಾನ್ಯ ಶಾಸಕರು ವೇದಿಕೆಯಲ್ಲಿ ಮಾತನಾಡಿದರು ಈ ಮೊಳಕಾಲ್ಮೂರು ಕ್ಷೇತ್ರವನ್ನು ಶಿಕ್ಷಣದಿಂದಲೇ ಮುಂದಕ್ಕೆ ತೆಗೆದುಕೊಂಡು ಹೋಗುವ ದಾರಿ ನನ್ನದಾಗುತ್ತದೆ ಎಂದು ಮಾನ್ಯ ಶಾಸಕರು ಹೇಳಿದರು.

ಈ ಮೊಳಕಾಲ್ಮೂರು ತಾಲ್ಲೂಕು ಬೆಂಗಾಡು ತಾಲೂಕಾಗಿ ಕಾಣುತ್ತಿದೆ ಆದರೆ ಈಗ ನಾನು ಈ ಕ್ಷೇತ್ರಕ್ಕೆ ಬಂದು ಸರ್ಕಾರದ ಮೂಲಭೂತ ಸೌಕರ್ಯಗಳನ್ನು ರೂಪಿಸಬೇಕೆಂದು ನನ್ನ ಬಯಕೆ ಆಗಿರುತ್ತದೆ ಆದರೆ ಎಲ್ಲಾ ನಾಗರಿಕರು ಸಾರ್ವಜನಿಕರು ರೈತರು ಅಧಿಕಾರಿಗಳೊಂದಿಗೆ ಕೈಜೋಡಿಸಿ ಮುಂದೆ ಬಂದರೆ ಈ ಮೊಳಕಾಲ್ಮೂರು ಕ್ಷೇತ್ರಕ್ಕೆ ಒಳ್ಳೆ ಒಳ್ಳೆ ಯೋಜನೆಗಳು ಮತ್ತು ಅಭಿವೃದ್ಧಿಗಳು ಮಾಡು ಮಾಡುವುದಕ್ಕೆ ನಾನು ಸಿದ್ಧನಿದ್ದೇನೆ ಏಕೆಂದರೆ ಇದು ನನ್ನ ಸ್ವಂತ ಕ್ಷೇತ್ರ ನನ್ನ ಕ್ಷೇತ್ರವಾಗಿರುದು ನನ್ನ ಕುಟುಂಬ ಇದ್ದಾಗೆ ನಾನು ಯಾವತ್ತೂ ಅನ್ಯಾಯದ ಮಾತುಗಳನ್ನು ಆಡುವುದಿಲ್ಲ ನಾನು ಏನೇ ಮಾಡಿದರೆ ಜನಪರ ಯೋಜನೆಗಳು ಜನಪರ ಅಭಿವೃದ್ಧಿಗಳು ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾತ್ರ ಯೋಜನೆಗಳನ್ನು ರೂಪಿಸುತ್ತೇನೆ ಮತ್ತು ಈ ಮೊಳಕಾಲ್ಮುರು ತಾಲೂಕು ದಂಡಾಧಿಕಾರಿಗಳಾದ ರೂಪ ಮೇಡಂ ಒಳ್ಳೆ ಅಧಿಕಾರಿಯಾಗಿ ನನಗೆ ನಮ್ಮ ತಾಲೂಕಿಗೆ ಬಂದಿರುವುದರಿಂದ ಬಾಳ ಸಂತೋಷವೆನಿಸುತ್ತದೆ ಯಾವುದೇ ರೀತಿಯಾಗಿ ಸರ್ಕಾರದ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ ಒಳ್ಳೆಯ ತಹಶೀಲ್ದಾರ್ ಈ ತಾಲೂಕಿಗೆ ಬಂದು ಸಾರ್ವಜನಿಕರ ಕೆಲಸಗಳನ್ನು ಮಾಡಲು ಬಹಳ ನಿಷ್ಠೆಯಿಂದ ಕಾನೂನಾತ್ಮಕವಾಗಿ ರೂಪ ಮೇಡಂ ಕೆಲಸಗಳು ಮಾಡುತ್ತಾರೆಂದು ಘಂಟಾಘೋಷವಾಗಿ ಮಾನ್ಯ ಶಾಸಕರು ಸಭೆಯಲ್ಲಿ ಮಾತನಾಡಿದರು ಹಾಗೂ ಈಗ ಹೊಸದಾಗಿ ಬಂದಿರ್ತಕ್ಕಂಥ ವೃತ್ತ ನಿರೀಕ್ಷಕರಾದ ಸರ್ಕಲ್ ಇನ್ಸ್ಪೆಕ್ಟರ್ ಪೋಲಿಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಯಾವುದೇ ಸಂಶಯವಿಲ್ಲದಂತೆ ಗದ್ಲ ಗಲಾಟೆ ಇಸ್ಪೀಟು ಮರಳು ಮಾಫಿಯ ಟ್ರಾವೆಲ್ ಓಸಿ ಗ್ಯಾಂಗ್ ರಿಂಗ್ ಕ್ಲಬ್ ಗಳಿಗೆ ಅವಶ್ಯಕತೆ ಕೊಡದಂತೆ ಅಮಾಯಕರ ಮೇಲೆ ದೌರ್ಜನ್ಯ ಎಸಗದಂತೆ ನಿಷ್ಠೆಯಿಂದ ಪೋಲಿಸ್ ಇಲಾಖೆಯಲ್ಲಿ ವಸಂತ ಹಸುದೇ ಸರ್ಕಲ್ ಇನ್ಸ್ಪೆಕ್ಟರ್ ಇವರನ್ನ ಕೆಲಸ ಮಾಡುತ್ತಾರೆಂದು ಮಾನ್ಯ ಶಾಸಕರು ನಂಬಿರುತ್ತಾರೆ ಮತ್ತೆ ತಾಲೂಕಿನ ಎಲ್ಲಾ ಇಲಾಖೆಯವರು ಅಧಿಕಾರಿಗಳು ಶ್ರಮ ಪಟ್ಟು ಕೆಲಸ ಮಾಡಿದರೆ ಕ್ಷೇತ್ರವು ಅಭಿವೃದ್ಧಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಮಾನ್ಯ ಎನ್. ವೈ. ಗೋಪಾಲಕೃಷ್ಣ ಶಾಸಕರು ಬಯಕೆ ಆಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು