ಸಮುದಾಯದ ತೀರ್ಮಾನದಂತೆ ಕನಕ ಜಯಂತಿ ಸರಳ ಆಚರಣೆಗೆ ನಿರ್ಧಾರ – ಶಾಸಕರ ಕಾಶಪ್ಪನವರ.
ಹುನಗುಂದ ನವೆಂಬರ್.22

ಸಮುದಾಯದ ಮುಖಂಡರ ತೀರ್ಮಾಣದಂತೆ ಕನಕ ಜಯಂತಿಯನ್ನು ಸರಳ ಹಾಗೂ ಸಂಕ್ಷೀಪ್ತವಾಗಿ ಆಚರಣೆ ಮಾಡಲಾಗುವುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕನಕ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆಯ ಕೊರತಯಿಂದ ಬರದ ಛಾಯೆ ಆವರಿಸಿ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿ ಇರುವುದರಿಂದ ಸರ್ಕಾರದ ಆದೇಶದಂತೆ ತಾಲೂಕಾ ಆಡಳಿತ ನಡೆಸುವ ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು. ಮುಖಂಡರಾದ ಗಂಗಾಧರ ದೊಡಮನಿ ಹಾಗೂ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿ ಪ್ರಸಕ್ತ ಸಮಯದಲ್ಲಿ ರಾಜ್ಯಾಧ್ಯಂತ ಭೀಕರ ಬರಗಾಲ ಆವರಿಸಿದ್ದು. ಜಯಂತಿ ಕಾರ್ಯಕ್ರಮಕ್ಕೆ ಸಮಯ ಸುಭೀಕ್ಷೆಯಿಂದ ಕೂಡಿಲ್ಲ.ಬರಗಾಲ ಆವರಿಸಿರುವುದರಿಂದ ಈಗಾಗಲೇ ಚನ್ನಮ್ಮ,ವಾಲ್ಮೀಕಿ ಸೇರಿದಂತೆ ಇನ್ನಿತರ ಸಮುದಾಯದ ಮುಖಂಡರು ಸರಳವಾಗಿ ಜಯಂತಿಯನ್ನು ಆಚರಣೆ ಮಾಡಿ ಮಾದರಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ನಾವು ಕೂಡಾ ಜಯಂತಿ ಕಾರ್ಯಕ್ರಮವನ್ನು ಸರಳ ಆಚರಣೆ ಮುಂದಾಗಬೇಕು ಎಂದು ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಮುಖಂಡ ದೇವು ಡಂಬಳ ಹಾಗೂ ಲಿಂಬಣ್ಣ ಮುಕ್ಕಣ್ಣವರ ಮಾತನಾಡಿ,ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ವರ್ಷಕ್ಕೊಮ್ಮೆ ಆಚರಿಸುತ್ತಿದ್ದು. ಈ ದಿನದಂದು ಸಮುದಾಯದ ಮುಖಂಡರು ಒಂದೆಡೆ ಸೇರಿ ಹಬ್ಬದ ವಾತಾವರಣದೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎನ್ನುವುದು ನಮ್ಮ ವೈಯಕ್ತಿಕ ಅಭಿಪ್ರಾಯ ಆದರೆ ತಾಲೂಕಾಡಳಿತ ಮತ್ತು ಶಾಸಕರು ತಗೆದುಕೊಳ್ಳವ ನಿರ್ಣಾಯಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.ತಹಶೀಲ್ದಾರ ನಿಂಗಪ್ಪ ಬಿರಾದಾರ,ಸಂಗಮೇಶ ಚೂರಿ,ಸಿದ್ದಣ್ಣ ಘಂಟಿ,ಮಲ್ಲು ಕಮರಿ,ಮುತ್ತಣ್ಣ ಕುರಿ ಮಾತನಾಡಿದರು.ತಾ.ಪಂ ಇಓ ಮುರಳೀಧರ ದೇಶಪಾಂಡೆ,ಬಿಇಓ ಜಸ್ಮೀನ ಕಿಲ್ಲೇದಾರ,ನೀಲಪ್ಪ ತಪೇಲಿ,ಮಲ್ಲಿಕಾರ್ಜುನ ಚೂರಿ,ಸಂಗಮೇಶ ನಾರಗಲ್ಲ,ಬಸವರಾಜ ಹಲ್ಪಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ