ಅನಿರ್ಧಿಷ್ಟಾವಧಿ ಧರಣಿಗೆ ಅನುಮತಿ ನಿರಾಕರಣೆ – ಸಂವಿಧಾನ ಬದ್ದ ಹಕ್ಕನ್ನು ಕಸಿಯುವ ಯತ್ನ.

ಕೊಟ್ಟೂರು ಡಿಸೆಂಬರ್.2

ತಾಲೂಕಾ ಪಂಚಾಯಿತಿಯ ಹಲವು ಲಂಚದ ಆರೋಪಗಳು ಕೇಳಿ ಬಂದಿದ್ದು, ಅವುಗಳನ್ನು ಪ್ರತಿಭಟಿಸಿ ಕಮ್ಯುನಿಸ್ಟ್ ಪಾರ್ಟಿ ಸಿಪಿಐ ಎಂ ಎಲ್ ಪಕ್ಷ ಕೊಟ್ಟೂರು ತಾಲೂಕಾ ಪಂಚಾಯಿತಿ ಕಾರ್ಯಾಲಯದ ಹತ್ತಿರ ಅನಿರ್ಧಿಷ್ಟಾವದಿ ಧರಣಿ ನಡೆಸುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಅನುಮತಿಯನ್ನು ಕೋರಿ ಕೊಟ್ಟೂರು ತಹಶೀಲ್ದಾರರಿಗೆ ಧರಣಿ ಮಾಡುವುದಕ್ಕೂ ಹದಿನೈದು ದಿನಗಳ ಮುಂಚೆಯೇ ಪತ್ರ ಬರೆಯಲಾಗಿತ್ತು. ಆದರೆ ಧರಣಿ ನಡೆಯುವ ದಿನವಾದ ಶುಕ್ರವಾರ ಧರಣಿ ಮಾಡಲು ಅನುಮತಿ ನೀಡಲಾಗಿಲ್ಲ ಎಂಬ ಹಿಂಬರಹ ನೀಡುವುದರ ಮೂಲಕ ಅನಿರ್ಧಿಷ್ಟಾವದಿ ಧರಣಿಯನ್ನು ಹತ್ತಿಕ್ಕುವ ಮೂಲಕ ಸಂವಿಧಾನ ಬದ್ಧ ಹಕ್ಕಾದ ಪ್ರತಿಭಟನೆಯ ಹಕ್ಕನ್ನು ಕಿತ್ತು ಕೊಂಡಂತಾಗಿದೆ. ತಹಶೀಲ್ದಾರರು ನೀಡಿರುವ ಹಿಂಬರಹದಲ್ಲಿ ಪೊಲೀಸರ ಪತ್ರವನ್ನು ಆಧರಿಸಿ ಧರಣಿಗೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಸಿಪಿಐಎಂಎಲ್ ತಾಲೂಕಾ ಕಾರ್ಯದರ್ಶಿ ಗುಡೇರ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರರ ಸರ್ವಾಧಿಕಾರಿ ಧೋರಣೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಅಲ್ಲದೇ ಕೊಟ್ಟೂರು ಪೊಲೀಸರ ವಿರುದ್ಧವೂ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತರಲಾಗುವುದು. ಒಂದು ವೇಳೆ ಧರಣಿಗೆ ಅವಕಾಶ ನೀಡದೇ ಇದ್ದಲ್ಲಿ ಎಲ್ಲರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು. ಸಿಪಿಐಎಂಎಲ್ ಕಾರ್ಯಕರ್ತರು ತಾಲೂಕಾ ಪಂಚಾಯಿತಿಗೆ ತೆರಳಿ ತಮ್ಮ ವಿವಿಧ ಬೇಡಿಕೆಗಳನ್ನು ಹಾಗೂ ಗ್ರೇಡ್-೧ ಕಾರ್ಯದರ್ಶಿ ರೂಪಾ ಅವರ ಅಮಾನತ್ತು, ಡಾಟಾ ಎಂಟ್ರಿ ಆಪರೇಟರ್ ಮೋಹನ್‌ರವರ ಕೆಲಸದಿಂದ ವಜಾಗೊಳಿಸಲು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು. ಸಮಯಕ್ಕೆ ಸರಿಯಾಗಿ ಕಛೇರಿಯಲ್ಲಿ ಇರದ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಆದಷ್ಟು ಬೇಗನೇ ವರ್ಗಾವಣೆ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂಎಲ್ ಮುಖಂಡರಾದ ರಾಜ್ಯ ಸದಸ್ಯ ಅಜ್ಜಪ್ಪ, ಹಾಲಯ್ಯಸ್ವಾಮಿ, ಕರಿಬಸಯ್ಯಸ್ವಾಮಿ, ಬಾತಿ ಮಹಂತೇಶ್, ಕೆ.ಕೆಂಚಪ್ಪ, ಕೆ.ಪರುಸಪ್ಪ, ಎಸ್.ಪರುಸಪ್ಪ, ದೊಡ್ಡಬಸಪ್ಪ, ಗುಡದಯ್ಯ, ತೂಲಹಳ್ಳಿ ನಾಗರಾಜ, ಸಿದ್ದಲಿಂಗಸ್ವಾಮಿ ಇತರೆ ಮುಖಂಡರು ಇದ್ದರು.

ಕೋಟ್-೧ಯಾವುದೇ ಧರಣಿ ನಡೆಸಲು ಕಾನೂನು ಸುವ್ಯವಸ್ಥೆಯ ಬಗ್ಗೆ ಪೊಲೀಸರ ಅಭಿಪ್ರಾಯ ಮುಖ್ಯವಾಗಿದ್ದು, ಈ ಧರಣಿಗೆ ಪೊಲೀಸರ ಅನುಮತಿ ನಿರಾಕರಿಸಿರುವುದರ ಹಿನ್ನೆಲೆಯಲ್ಲಿ ಧರಣಿಗೆ ಅವಕಾಶ ಮಾಡಲಾಗಿಲ್ಲ. ಅಮರೇಶ್ ತಹಶೀಲ್ದಾರರು.

ಕೊಟ್ -2ತಾಲೂಕು ಪಂಚಾಯತ್ ಇಓ ಸಾಹೇಬರು ರಾಜ ಇರುವುದರಿಂದ ದೂರವಾಣಿ ಮುಖಾಂತರ ತಿಳಿಸಲಾಯಿತು. ನೀವು ಕೊಟ್ಟಂತ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ .ಎಂದು. ಕಮ್ಯುನಿಸ್ಟ್ ಪಾರ್ಟಿ ಸಿಪಿಐ ಎಂಎಲ್ ಕಾರ್ಯಕರ್ತರಿಗೆ ತಾಲೂಕು ಪಂಚಾಯತ್ ಎ ಡಿ ಹೂಳಗುಂದಿ ವಿಜಯ್ ಕುಮಾರ್ ತಿಳಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button