ಬೆಳ್ಳಂ ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡ – ಪಿ.ಎಸ್.ಐ ಸುರೇಶ್ ಮಂಟೂರ್.
ಕಲಕೇರಿ ಡಿ.31

ತಾಳಿಕೋಟೆ ತಾಲೂಕಿನ ಕಲಕೇರಿ ಪಿ.ಎಸ್.ಐ ಸುರೇಶ್ ಮಂಟೂರ್ ಇವರು ಕಲಕೇರಿಯಲ್ಲಿ ದಿನಾಂಕ. 31.12.2024.ಮಂಗಳವಾರ ಮೇನ್ ಬಜಾರದಲ್ಲಿ ಮೇನ್ ರೋಡ್ ಸೈಡ್ ಗಾಡಿಗಳನ್ನು ತೆಗೆಸುವ ಕಾರ್ಯಚರಣೆ ಬಸ್ ಬಸ್ಟ್ಯಾಂಡದಲ್ಲಿ ಇರುವಂತ ಎಲ್ಲಾ ಗಾಡಿಗಳನ್ನು ತೆಗೆಸುವ ಒಂದು ಕಾರ್ಯಾಚರಣೆ ನಡೆಸಿದರು. ಮತ್ತು ಪ್ರತಿಯೊಬ್ಬರು ಮೋಟಾರ್ ಬೈಕ್ ಓಡಿಸುವಂತಹ ವ್ಯಕ್ತಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪಿ.ಎಸ್.ಐ ಸಾಹೇಬರು ತಿಳಿಸಿದರು.


ಮತ್ತು ಪ್ರತಿಯೊಂದು ವ್ಯಾಪಾರಸ್ಥರು ನಿಮ್ಮ ಅಂಗಡಿಗಳ ಮೇಲೆ ಸಿ.ಸಿ ಕ್ಯಾಮೆರಾವನ್ನು ಅಳವಡಿಸ ಬೇಕು ಎಂದು ಎಲ್ಲಾ ವ್ಯಾಪಾರಸ್ಥರಿಗೆ ತಿಳಿಸಿದರು. ನಿಮ್ಮ ಅಂಗಡಿ ಮುಂದೆ ಇರುವಂತ ಕಸ ಕಡ್ಡಿ ಸ್ವಚ್ಛಗೊಳಿಸ ಬೇಕು ಎಂದು ಎಲ್ಲಾ ವ್ಯಾಪಾರಸ್ಥರಿಗೆ ತಿಳಿ ಹೇಳಿದರು. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೈಕುಗಳನ್ನು ಓಡಿಸುವಂತೆ ಇಲ್ಲ ಎಂದು ಎಲ್ಲಾ ಬೈಕ್ ಚಾಲಕರಿಗೆ ಹೆಲ್ಮೆಟ್ ನಿಮ್ಮ ಜೀವನವನ್ನು ಕಾಪಾಡುತ್ತದೆ ಎಂದು ತಿಳಿ ಹೇಳಿದರು. ಕಲಕೇರಿಯ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಮಂಟೂರ್ ಮತ್ತು ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗ ಸೇರಿದಂತೆ ಇವತ್ತು ಬೆಳಿಗ್ಗೆ ಈ ಕಾರ್ಯಚರಣೆಯನ್ನು ನಡೆಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ